Wednesday, 20th June 2018

Recent News

ಕುಮಾರಸ್ವಾಮಿಗಾಗಿ ಎದುರು ನೋಡುತ್ತಾ ಕಾಯುತ್ತಿದ್ದಾರೆ ಚಿಕ್ಕಮಗ್ಳೂರಿನ ಪದವೀಧರ!

ಚಿಕ್ಕಮಗಳೂರು: ಕಳೆದ ನಾಲ್ಕೈದು ವರ್ಷದಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿರೋ 24 ವರ್ಷದ ಪದವೀಧರ ಯುವಕನೊಬ್ಬ ನಾನು ಮೃತಪಡುವ ಮುನ್ನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರನ್ನ ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

ಜಿಲ್ಲೆಯ ಕಡೂರು ತಾಲೂಕಿನ ಯಗಟಿ ಹೋಬಳಿಯ ಹಿರೇಗರ್ಜೆ ಗ್ರಾಮದ ಜಗದೀಶ್ ಕಳೆದ ನಾಲ್ಕೈದು ವರ್ಷಗಳಿಂದ ಬಿಪಿ ಹಾಗೂ ಶುಗರ್‍ನಿಂದ ಬಳಲುತ್ತಿದ್ದಾರೆ. 80 ಕೆ.ಜಿ. ಇದ್ದ ಈ ಯುವಕ ಇಂದು ಇರೋದು 15-16 ಕೆ.ಜಿ. ಮಲಗಿದ್ದಲ್ಲೇ ಎಲ್ಲಾ. ಸದಾ ಇವರ ಸೇವೆಗೆ ಮನೆಯಲ್ಲಿ ಒಬ್ಬರು ಇರಲೇಬೇಕು.

ಕೂಲಿ ಮಾಡುವ ಹೆತ್ತವರು ನಾಲ್ಕೈದು ಲಕ್ಷ ಖರ್ಚು ಮಾಡಿದ್ದರೂ ಮಗನನನ್ನ ಹುಷಾರು ಮಾಡಲು ಸರಿಯಾಗದೆ ಕೈಚೆಲ್ಲಿ ಕೂತಿದ್ದಾರೆ. ದಿನದಿಂದ ದಿನಕ್ಕೆ ಆರೋಗ್ಯದ ಸ್ಥಿತಿ ಹದಗೆಡ್ತಿರೋ ಜಗದೀಶ್‍ಗೆ ಸಾಯುವ ಮುನ್ನ ಕುಮಾರಸ್ವಾಮಿಯನ್ನ ನೋಡುವ ಹಂಬಲ ವ್ಯಕ್ತಪಡಿಸಿದ್ದಾರೆ.

ನಾನು ಸಾಯುವ ಮುನ್ನ ಶಾಸಕ ವೈ.ಎಸ್.ವಿ ದತ್ತ ಹಾಗೂ ಕುಮಾರಸ್ವಾಮಿಯನ್ನ ನೋಡಬೇಕೆಂಬ ಆಸೆ ಹೊಂದಿದ್ದೇನೆ. ಆದ್ರೆ, ಶಾಸಕ ದತ್ತ ಅವರು ಬಂದು ನೋಡಿಕೊಂಡು ಹೋಗಿದ್ದಾರೆ. ಇದೀಗ ಕೊನೆ ಬಾರಿ ಕುಮಾರಸ್ವಾಮಿಯನ್ನು ನೋಡಬೇಕೆಂದು ಹಂಬಲಿಸುತ್ತಿದ್ದಾರೆ.

Leave a Reply

Your email address will not be published. Required fields are marked *