ಚಿಕಿತ್ಸೆಗೆ ಹಣ ನೀಡೆಂದು ಅಪ್ಪನನ್ನು ಬೇಡಿದ್ದ ಕ್ಯಾನ್ಸರ್‍ಪೀಡಿತ ಬಾಲಕಿ- ಆಕೆಯ ಸಾವಿನ ನಂತರ ವೈರಲ್ ಆಯ್ತು ಈ ವಿಡಿಯೋ

ವಿಜಯವಾಡ: ಡ್ಯಾಡಿ, ನೀನು ನಿನ್ನ ಬಳಿ ಹಣ ಇಲ್ಲ ಅಂತ ಹೇಳ್ತೀಯ. ಆದ್ರೆ ನಮ್ಮ ಬಳಿ ಈ ಮನೆನಾದ್ರೂ ಇದೆ. ಪ್ಲೀಸ್ ಈ ಮನೆಯನ್ನ ಮಾರಿ ನನ್ನ ಚಿಕಿತ್ಸೆಗೆ ಹಣ್ಣ ಕಟ್ಟಿ ಡ್ಯಾಡಿ. ಇಲ್ಲ ಅಂದ್ರೆ ನಾನು ಹೆಚ್ಚು ದಿನ ಬದುಕಲ್ಲ ಅಂತ ಹೇಳಿದ್ದಾರೆ. ಪ್ಲೀಸ್ ಏನಾದ್ರೂ ಮಾಡಿ ನನ್ನ ಉಳಿಸ್ಕೋ ಡ್ಯಾಡಿ….. ಹೀಗಂತ 13 ವರ್ಷದ ಹೆಣ್ಣುಮಗಳೊಬ್ಬಳು ತನ್ನ ಕ್ಯಾನ್ಸರ್ ಚಿತ್ಸೆಗಾಗಿ ಹಣ ಕೊಡಿ ಅಂತ ಅಪ್ಪನನ್ನ ಬೇಡಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮತ್ತೊಂದು ವಿಪರ್ಯಾಸವೆಂದರೆ ಮೇ 14ರಂದು ಈ ಬಾಲಕಿ ಸಾವನ್ನಪ್ಪಿದ್ದಾಳೆ.

ಆಂಧ್ರಪ್ರದೇಶ ಮೂಲದ ಈ ಬಾಲಕಿಯ ಹೆಸರು ಸಾಯಿ ಶ್ರೀ. ಈಕೆಗೆ ಬೋನ್ ಮ್ಯಾರೋ ಕ್ಯಾನ್ಸರ್ ಇದೆ ಎಂದು 2016ರ ಆಗಸ್ಟ್ 27ರಂರಂದು ವೈದ್ಯರು ಹೇಳಿದ್ದರು. ಆದ್ರೆ ಚಿಕಿತ್ಸೆಗೆ ಬೇಕಾಗುವಷ್ಟು ಹಣ ಅಮ್ಮನ ಬಳಿ ಇಲ್ಲ. ಮನೆ ಮಾರಿ ಹಣ ಕೊಡಿ. ಅಮ್ಮನಿಗೆ ಹಣ ಕೊಡಲು ಇಷ್ಟವಿಲ್ಲ ಅಂದ್ರೆ ನೀವೇ ಬಂದು ಆಸ್ಪತ್ರೆಯಲ್ಲಿ ಹಣ ಕಟ್ಟಿ ಎಂದು ಸಾಯಿ ಶ್ರೀ ವಿಡಿಯೋ ಮೂಲಕ ತನ್ನ ತಂದೆಗೆ ಹಣ ನೀಡುವಂತೆ ಕೇಳಿದ್ದಳು.

ಸಾಯಿ ಶ್ರೀ ತಂದೆ ಮದಮ್‍ಶೆಟ್ಟಿ ಶಿವಕುಮಾರ್ ತನ್ನ ಪತ್ನಿ ಸುಮಾ ಶ್ರೀ ಮತ್ತು ಮಗಳಿಂದ 8 ವರ್ಷದ ಹಿಂದೆಯೇ ದೂರವಾಗಿದ್ರು. ವರದಿಯ ಪ್ರಕಾರ ಸಾಯಿ ಶ್ರೀ ತನ್ನ ತಾಯಿಯೊಂದಿಗೆ ವಿಜಯವಾಡದಲ್ಲಿ ನೆಲೆಸಿದ್ದು, ತಂದೆ ಬೆಂಗಳೂರಿನಲ್ಲಿದ್ದರು ಎನ್ನಲಾಗಿದೆ.

ಶಿವ ಕುಮಾರ್ ಮತ್ತು ಸುಮಾ ದೂರವಾಗುವುದಕ್ಕೂ ಮುನ್ನ ಮಗಳಾದ ಸಾಯಿ ಶ್ರೀ ಹೆಸರಲ್ಲಿ ಒಂದು ಫ್ಲಾಟ್ ಖರೀದಿಸಿದ್ರು. ಮನೆ ಮಾರಿ ಮಗಳ ಕ್ಯಾನ್ಸರ್ ಚಿಕಿತ್ಸೆಗೆ ಹಣ ಹೊಂದಿಸಲು ಮುಂದಾದಾಗ ಗಂಡ ಶಿವ ಕುಮಾರ್, ತೆಲುಗು ದೇಶಂ ಪಾರ್ಟಿಯ ಶಾಸಕ ಬೋಂಡಾ ಉಮಾಮಹೇಶ್ವರ್ ರಾವ್ ಅವರ ನೆರವಿನಿಂದ ಮನೆ ಮಾರಾಟ ಮಾಡದಂತೆ ತಡೆದಿದ್ದರು ಎಂದು ಸುಮಾ ಆರೋಪಿಸಿದ್ದಾರೆ.

ಶಾಸಕರ ಬೆಂಬಲ ಇದ್ದ ಕಾರಣ ಶಿವ ಕುಮಾರ್ ಕಳಿದಿದ್ದ ಗೂಂಡಾಗಳ ವಿರುದ್ಧ ದೂರು ದಾಖಲಿಸಿಕೊಳ್ಳಲು ಆಂಧ್ರಪ್ರದೇಶದ ಪೊಲೀಸರು ನಿರಾಕರಿಸಿದ್ರು ಎಂದು ಸುದ್ದಿ ಸಂಸ್ಥೆ ಎಎನ್‍ಐ ವರದಿ ಮಾಡಿದೆ.

ಈ ಬಗ್ಗೆ ಹೇಳಿಕೆ ನೀಡಿರೋ ಬಾಲಾಲ ಹಕ್ಕುಳ ಸಂಗಂನ ಅಧ್ಯಕ್ಷರಾದ ಅಚ್ಯುತ್ ರಾವ್, ನಾವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾನವ ಹಕ್ಕುಗಳ ಆಯೋಗದಲ್ಲಿ ಅರ್ಜಿ ಸಲ್ಲಿಸಿದ್ದು, ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇವೆ ಎಂದಿದ್ದಾರೆ.

ಹಣ ನೀಡಲು ಶಕ್ತರಾಗಿದ್ದರೂ ತಂದೆ ಮಗಳ ಚಿಕಿತ್ಸೆಗೆ ಹಣ ನೀಡಿಲ್ಲವೆಂಬುದನ್ನು ಮನಗಂಡ ರಾಜ್ಯ ಮಾನವ ಹಕ್ಕುಗಳ ಆಯೋಗ, ಈ ಬಗ್ಗೆ ವಿಸ್ತøತ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಆದೇಶಿಸಿದೆ.

ಈ ವಿಡಿಯೋ ಸದ್ಯ ದೇಶದಾದ್ಯಂತ ವೈರಲ್ ಆಗಿದ್ದು, ತಂದೆಯ ವರ್ತನೆಗೆ ಖಂಡನೆ ವ್ಯಕ್ತವಾಗಿದೆ.

 

You might also like More from author

Leave A Reply

Your email address will not be published.

badge