Sunday, 24th June 2018

Recent News

ವಿಜಯಪುರದಲ್ಲಿ ದಾನಮ್ಮನ ನಂತರ ಮತ್ತೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ- ಇಂದು ಮುದ್ದೇಬಿಹಾಳ ಬಂದ್‍ಗೆ ಕರೆ

ವಿಜಯಪುರ: ದಾನಮ್ಮ ಅತ್ಯಾಚಾರ ಪ್ರಕರಣದ ನಂತರ ಜಿಲ್ಲೆಯಲ್ಲಿ ಮತ್ತೊಬ್ಬ ಅಪ್ರಾಪ್ತೆ ಮೇಲೆ ಅತ್ಯಾಚಾರ ಯತ್ನ ನಡೆದಿದೆ. ವಿಜಯಪುರದ ಮುದ್ದೇಬಿಹಾಳ ಪಟ್ಟಣದಲ್ಲಿ ಶಾಲೆಗೆ ಹೋಗುತ್ತಿದ್ದ 15 ವರ್ಷದ ಅಪ್ರಾಪ್ತೆ ಮೇಲೆ ನಾಲ್ವರಿಂದ ಸಾಮೂಹಿಕ ಅತ್ಯಾಚಾರಕ್ಕೆ ಯತ್ನ ನಡೆದಿದೆ.

ಸಂತ್ರಸ್ತೆಯನ್ನು ಬಾಳೆತೋಟಕ್ಕೆ ಎತ್ತೊಯ್ದ ಕಾಮುಕರು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ. ಸಂತ್ರಸ್ತೆ ಕಿರುಚಾಡಿದಾಗ ಸ್ಥಳೀಯರು ಬಂದ ಕಾರಣ ಮೂವರು ಕಾಮುಕರು ಪರಾರಿಯಾಗಿದ್ದಾರೆ. ಇನ್ನೋರ್ವ ಕಾಮುಕ ಸ್ಥಳೀಯರ ಕೈಗೆ ಸಿಕ್ಕಿದ್ದು, ಅವನನ್ನು ಮುದ್ದೇಬಿಹಾಳ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.

ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸಂತ್ರಸ್ತೆಯನ್ನು ದಾಖಲಿಸಲಾಗಿದ್ದು, ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿಯಾಗಿರುವ ಮೂವರು ಕಾಮುಕರನ್ನು ಸೆರೆಹಿಡಿಯಲು ವಿವಿಧ ಸಂಘಟನೆಗಳು ಆಗ್ರಹಿಸಿ ಮುದ್ದೇಬಿಹಾಳದಲ್ಲಿ ಪ್ರತಿಭಟನೆ ನಡಿಸಿದ್ದಾರೆ. ಜೊತೆಗೆ ಇಂದು ಮುದ್ದೇಬಿಹಾಳ ಬಂದ್‍ಗೆ ಕರೆ ನೀಡಿದ್ದಾರೆ.

 

Leave a Reply

Your email address will not be published. Required fields are marked *