ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ

ವಿಜಯಪುರ: ಮಾಜಿ ಸೈನಿಕನೊಬ್ಬ ತನ್ನ ಪತ್ನಿಯ ಮೇಲೆ ಗುಂಡು ಹಾರಿಸಿರುವ ಘಟನೆ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ.

ಖಾಜಾ ಎಂಬವನೇ ಪತ್ನಿಯ ಮೇಲೆ ಗುಂಡು ಹಾರಿಸಿದ ಮಾಜಿ ಸೈನಿಕ. ಖಾಜಾ ಮತ್ತು ಪತ್ನಿ ಮಹಾದೇವಿ ನಡುವೆ ಕಳೆದ 12 ವರ್ಷಗಳಿಂದ ಆಸ್ತಿಗಾಗಿ ಜಗಳ ನಡೆಯುತ್ತಿತ್ತು. ಮಹಾದೇವಿ ನನಗೆ ಜೀವಾನಂಶ ನೀಡಬೇಕೆಂದು ಪತಿ ವಿರುದ್ಧ ಕೌಟುಂಬಿಕ ನ್ಯಾಯಾಲಯದಲ್ಲಿ ವಾದ ಹೂಡಿದ್ದರು. ಈ ಸಂಬಂಧ ಪತಿ-ಪತ್ನಿ ನಡುವೆ ಪ್ರತಿದಿನ ಜಗಳ ನಡೆಯುತ್ತಿತ್ತು.

ಇಂದು ಇದೇ ವಿಷಯವಾಗಿ ಜಗಳ ನಡೆದಿದೆ. ಜಗಳದಲ್ಲಿ ಕೋಪಗೊಂಡ ಖಾಜಾ ರಿವಾಲ್ವಾರನಿಂದ ಫೈರ್ ಮಾಡಿದ್ದಾರೆ. ಗುಂಡು ನೇರವಾಗಿ ಮಹಾದೇವಿ ಅವರ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಮಹಾದೇವಿ ಅವರನ್ನು ಮಹಾರಾಷ್ಟ್ರದ ಸೋಲಾಪುರ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಇಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖಾಜಾ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

 

You might also like More from author

Leave A Reply

Your email address will not be published.

badge