Wednesday, 23rd May 2018

Recent News

ವಿಡಿಯೋ: ಸಿನಿಮಾ ಸೆಟ್‍ಗೆ ಬೆಂಕಿ ಬಿದ್ದು ಹೊತ್ತಿ ಉರೀತಿದ್ರೂ ಜನ ಕೇರ್ ಮಾಡ್ಲಿಲ್ಲ!- ಯಾಕೆ ಗೊತ್ತಾ?

ಬೀಜಿಂಗ್: ಭಾರೀ ಅಗ್ನಿ ಅವಘಡ ಸಂಭವಿಸಿದಾಗ ತಕ್ಷಣ ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡ್ಬೇಕು ಅನ್ನೋದು ಎಲ್ಲರಿಗೂ ಗೊತ್ತಿರೋ ವಿಷಯ. ಆದ್ರೆ ಚೀನಾದಲ್ಲಿ ಸಿನಿಮಾ ಸೆಟ್‍ವೊಂದಕ್ಕೆ ಬೆಂಕಿ ಬಿದ್ದು ಹೊತ್ತಿ ಉರೀತಿದ್ರೂ ಜನ ತಲೆನೇ ಕೆಡಿಸಿಕೊಳ್ಳಲಿಲ್ಲ.

ಯಾಕೆ ಅಂದ್ರಾ? ಅಯ್ಯೋ, ಯಾವ್ದೋ ಸನಿಮಾ ಶೂಟಿಂಗ್‍ಗೆ ಬೆಂಕಿ ಹಾಕಿರ್ಬೇಕು ಬಿಡು ಗುರು… ಅಂತ ಇಲ್ಲಿನ ಜನ ಸುಮ್ಮನಾಗಿದ್ರು. ಈ ಘಟನೆ ನಡೆದಿರೋದು ಚೀನಾದ ಹೆಂಗ್ಡಿಯಾನ್ ವಲ್ರ್ಡ್ ಸ್ಟುಡಿಯೋಸ್‍ನಲ್ಲಿ. ಇಲ್ಲಿ ಸದಾ ಒಂದಿಲ್ಲೊಂದು ಚಿತ್ರದ ಶೂಟಿಂಗ್ ನಡೆಯುತ್ತಲೇ ಇರುತ್ತೆ. ಆದ್ರೆ ಜೂನ್ 27ರಂದು ಮುಂಜಾನೆ ಸುಮಾರು 5 ಗಂಟೆ ವೇಳೆಯಲ್ಲಿ ಸೆಟ್‍ಗೆ ನಿಜವಾಗ್ಲೂ ಬೆಂಕಿ ಬಿದ್ದಿದ್ರೂ ಜನ ಮಾತ್ರ ಇದು ಶೂಟಿಂಗ್‍ಗಾಗಿ ಹಾಕಿರೋ ಬೆಂಕಿ ಅಂದುಕೊಂಡು ಪೊಲೀಸರಿಗಾಗ್ಲೀ, ಅಗ್ನಿಶಾಮಕ ಸಿಬ್ಬಂದಿಗಾಗ್ಲಿ ಕರೆ ಮಾಡೋ ಗೋಜಿಗೆ ಹೋಗಲಿಲ್ಲ ಅಂತ ಮಹಿಳೆಯೊಬ್ಬರು ಇಲ್ಲಿನ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

ಚೀನಾದ ಝೀಜಿಯಾಂಗ್ ಪ್ರಾಂತ್ಯದ ಫಾರ್ಮ್‍ಲ್ಯಾಂಡ್ಸ್ ಮಧ್ಯೆಯಿರುವ ಹೆಂಗ್ಡಿಯಾನ್ ಸ್ಟುಡಿಯೋಸ್‍ನಲ್ಲಿ ಚೀನಾದ ಸಾಕಷ್ಟು ಚಿತ್ರಗಳ ಚಿತ್ರೀಕರಣವಾಗಿದೆ. ಸೆಟ್‍ನಲ್ಲಿ ಚಿತ್ರೀಕರಣಕ್ಕಾಗಿ ಬೆಂಕಿಯನ್ನ ಬಳಸುತ್ತಿದ್ದರಿಂದ ನಿಜವಾಗಲೂ ಬೆಂಕಿ ಬಿದ್ದರೂ ಸ್ಥಳೀಯರು ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಲಿಲ್ಲ.

ಆದ್ರೆ ಎಷ್ಟೊತ್ತಾದ್ರೂ ಬೆಂಕಿ ಉರಿಯುತ್ತಲೇ ಇದ್ದ ಕಾರಣ ಸ್ಥಳೀಯರೊಬ್ಬರು ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದಾರೆ. ಸುಮಾರು 7 ಗಂಟೆ ವೇಳೆಗೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು, ಬೆಂಕಿಯನ್ನ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿಲ್ಲ.

Leave a Reply

Your email address will not be published. Required fields are marked *