Thursday, 21st June 2018

Recent News

ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತನ ವಿರುದ್ಧ ಎಫ್‍ಐಆರ್

ಕೊಪ್ಪಳ: ಸಾಮಾಜಿಕ ಜಾಲತಾಣ ಫೇಸ್ ಬುಕ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಹಾಕಿದ್ದ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ.

ಕೊಪ್ಪಳದ ಗಂಗಾವತಿ ತಾಲೂಕಿನ ಹೊಸ್ಕೇರಾ ಗ್ರಾಮದ ಪ್ರಶಾಂತ್ ನಾಯಕ್ ವಿರುದ್ಧ ಎಫ್‍ಐಆರ್ ದಾಖಲಾಗಿದೆ.

ಸ್ಟೇಟಸ್ ನಲ್ಲಿ ಏನಿತ್ತು?: ಮೋದಿಯವರೇ ಸಿದ್ದರಾಮಯ್ಯನವರ ಸರಕಾರ 10 ಪರ್ಸೆಂಟೇಜ್ ಸರ್ಕಾರ ಅಂತಾ ದಾಖಲೆ ಇಲ್ಲದ ಆರೋಪ ಮಾಡಬೇಡಿ ಅಂತಾ ಮಾತು ನಿಮಗೆ ಶೋಭೆ ಅಲ್ಲಾ. ಹೆಂಡಿರನ್ನು ಸಾಕಲಾರದೆ ಬಿಟ್ಟ ನಾಮರ್ದರಿರುತಾರಲ್ಲಾ ಅವರ ಬಾಯಲ್ಲಿ ಬರುತ್ತದೆ ಎಂದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದನು.

ದೇಶದ ಪ್ರಧಾನಿ ಮೋದಿಯ ಬಗ್ಗೆ ಅವಹೇಳನಕಾರಿ ಸ್ಟೇಟಸ್ ಹಾಕಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಬಿಜೆಪಿ ಕಾರ್ಯಕರ್ತ ಶಿವು ಅರಿಕೆರಿಯಿಂದ ಪ್ರಶಾಂತ್ ನಾಯಕ್ ವಿರುದ್ಧ ಗಂಗಾವತಿಯ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

 

 

Leave a Reply

Your email address will not be published. Required fields are marked *