Thursday, 22nd March 2018

ಕೊನೆಗೂ ನಾನು ಮದುವೆ ಆಗ್ತೀನಿ ಎಂದ ಅನುಷ್ಕಾ ಶೆಟ್ಟಿ!

ಹೈದರಾಬಾದ್: ನೀವು ಯಾವಾಗ ಮದುವೆ ಆಗ್ತೀರಾ ಎನ್ನುವ ಪ್ರಶ್ನೆಗೆ ಸಾಕಷ್ಟು ವರ್ಷಗಳಿಂದ ಈ ಪ್ರಶ್ನೆಗೆ ಹಾರಿಕೆ ಉತ್ತರ ಕೊಡುತ್ತಿದ್ದ ಅನುಷ್ಕಾ ಶೆಟ್ಟಿ ಇನ್ನೂ ಸುಮ್ಮನಿದ್ದಷ್ಟೂ ನನಗೇ ಕಷ್ಟ ಎಂದು ತೀರ್ಮಾನ ಮಾಡಿ ಮದುವೆ ಬಗ್ಗೆ ಬಾಯಿಬಿಟ್ಟಿದ್ದಾರೆ. “ಹ್ಹೂಂ ನಾನ್ ಮದುವೆ ಆಗ್ತೀನಿ” ಎಂದು ಉತ್ತರಿಸಿದ್ದಾರೆ.

ಸೌತ್‍ನಲ್ಲಿ ಅನುಷ್ಕಾ ಮತ್ತು ಪ್ರಭಾಸ್ ಮದುವೆ ವಿಷಯ ಚರ್ಚೆಯಾದಷ್ಟು ಬೇರೆ ಯಾವ ನಟ ನಟಿಯರ ಮದುವೆ ಸಂಬಂಧ ಚರ್ಚೆಯಾಗಿದ್ದಿಲ್ಲ. ಬಚ್ಚಿಟ್ಟಷ್ಟೂ ಕುತೂಹಲ ಜಾಸ್ತಿ ಅಂತಾರಲ್ಲ ಹಾಗೆ ಯಾವತ್ತಾದರೂ ಒಮ್ಮೆ ಗೊತ್ತಾಗಲೇಬೇಕು ಎಂದು ತೀರ್ಮಾನಿಸಿದ ಅನುಷ್ಕಾ ಕೊನೆಗೂ ಮದುವೆ ಕನಸು ರಿವೀಲ್ ಮಾಡಿದ್ದಾರೆ.

ನಾನು ಮದುವೆ ಬಗ್ಗೆ ಸಂಪೂರ್ಣ ನಂಬಿಕೆ ಇಟ್ಟಿದ್ದೇನೆ. ಆದರೆ ಒಂದೊಳ್ಳೆ ಸಮಯದಲ್ಲಿ ಮದುವೆಯಾಗಿ ಮಕ್ಕಳನ್ನು ಪಡೆಯುವ ಯೋಜನೆ ಇದೆ. ಈ ವಿಷಯದಲ್ಲಿ ನಾನು ಆತುರ ಮಾಡಲ್ಲ. ನಾನು ಯಾರನ್ನು ಮೀಟ್ ಮಾಡುತ್ತೀನೋ ಅವರು ನನಗೆ ಕನೆಕ್ಟ್ ಆಗಬೇಕು. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ನನ್ನ ಪಾಲಕರು ಮದುವೆಯಾಗು ಎಂದು ಸದಾ ಹೇಳುತ್ತಿರುತ್ತಾರೆ. ನಾನು 20 ವರ್ಷದವಳಿದ್ದಾಗಲೇ ಮದುವೆಯಾಗು ಎಂದು ಹೇಳೋಕೆ ಶುರುಮಾಡಿದ್ದರು. ಆದರೆ ಒತ್ತಡ ಹಾಕಿಲ್ಲ. ಮದುವೆಗೆ ಕಾಲ ಕೂಡಿ ಬರಬೇಕು ಮತ್ತು ಅವರು ಹೇಗೆ ಎನ್ನವುದು ನನಗೆ ಗೊತ್ತಾಗಬೇಕು ಎಂದು ಅನುಷ್ಕಾ ಶೆಟ್ಟಿ ಹೇಳಿದ್ದಾರೆ.

ಇಷ್ಟು ದಿನ ಮದುವೆ ಸುದ್ದಿ ಕೇಳಿದರೆ ಸಾಕು ಮಾರು ದೂರ ಓಡುತ್ತಿದ್ದ ಅನುಷ್ಕಾ ಶೆಟ್ಟಿ ಕೊನೆಗೂ ಮದುವೆಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ. ಖಾಸಗಿ ಪತ್ರಿಕೆಯೊಂದರ ಸಂದರ್ಶನದಲ್ಲಿ ಅನುಷ್ಕಾ ಮದುವೆಯಾಗೋದಾಗಿ ಹೇಳಿದ್ದಾರೆ. ಅಂದಹಾಗೆ ಮದುವೆಯಾಗೋಕೆ ಅನುಷ್ಕಾಗಿದು ರೈಟ್ ಟೈಮ್. ಆದರೆ ಎಲ್ಲದರಲ್ಲೂ ಪರ್ಫೆಕ್ಷನ್ ಹುಡುಕುವ ಅನುಷ್ಕಾ ಬಾಳ ಸಂಗಾತಿಯಾಗೋಕೆ ಮಿಸ್ಟರ್ ಪರ್ಫೆಕ್ಟ್ ಹುಡುಗನ ಹುಡುಕಾಟದಲ್ಲಿದ್ದಾರೆ ಎನ್ನುವುದು ಖಾತ್ರಿಯಾಗಿದೆ.

ಸದ್ಯ ಅನುಷ್ಕಾ ಅಭಿನಯದ `ಭಾಗಮತಿ’ ಸಿನಿಮಾ 50 ಕೋಟಿ ಕಲೆಕ್ಷನ್ ಮಾಡಿದೆ. ಅನುಷ್ಕಾ ಚಿತ್ರಗಳು ಎಂದಿನಂತೆ ಹೀರೋಗಳಿಗೆ ಸೆಡ್ಡು ಹೊಡೆದು ಬಾಕ್ಸ್ ಆಫೀಸ್‍ನಲ್ಲಿ ಜಾದು ಮಾಡುತ್ತವೆ. ಇನ್ನೆರಡು ತಿಂಗಳು ಹೊಸ ಚಿತ್ರಕ್ಕೆ ಕಾಲ್‍ಶೀಟ್ ಕೊಡದೇ ರೆಸ್ಟ್ ಮಾಡೋದಾಗಿ ಹೇಳಿರುವ ಅನುಷ್ಕಾ ಈ ಗ್ಯಾಪ್‍ನಲ್ಲಿ ಸುಮ್ಮನಿರುವ ಬದಲು ಒಂದು ವಿಶೇಷ ರಿಯಾಲಿಟಿ ಶೋ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಆ ಚಿತ್ರೀಕರಣಕ್ಕಾಗಿ ಹೈದರಾಬಾದ್‍ನ ಪೆಟ್ರೋಲ್ ಬಂಕ್‍ನಲ್ಲಿ ವಾಹನಗಳಿಗೆ ಅನುಷ್ಕಾ ಪೆಟ್ರೋಲ್ ತುಂಬಿಸುತ್ತಿದ್ದ ದೃಶ್ಯ ಇದೀಗ ಎಲ್ಲೆಲ್ಲೂ ವೈರಲ್ ಆಗಿದೆ. ಅದೇನೇ ಇದ್ದರೂ ಅನುಷ್ಕಾ ತಾನು ಮದುವೆಗೆ ರೆಡಿ ಎಂದು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Leave a Reply

Your email address will not be published. Required fields are marked *