Thursday, 19th October 2017

Recent News

16 ವರ್ಷದ ಮಗಳನ್ನು ಗುಂಡಿಟ್ಟು ಕೊಂದ ತಂದೆ

ಲಕ್ನೋ: ತಂದೆಯೊಬ್ಬ ತನ್ನ 16 ವರ್ಷದ ಮಗಳನ್ನು ಗುಂಡಿಟ್ಟು ಕೊಲೆಗೈದು, ತಾನು ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಶುಕ್ರವಾರ ಉತ್ತರ ಪ್ರದೇಶ ರಾಜ್ಯದ ಉರಿ ಜಿಲ್ಲೆಯ ಕೋಟವಾಲಿ ಗ್ರಾಮದಲ್ಲಿ ನಡೆದಿದೆ.

ದೀಪಾಲಿ(16) ತಂದೆಯಿಂದಲೇ ಕೊಲೆಯಾದ ದುರ್ದೈವಿ. ದೀಪಾಲಿಗೆ ತಂದೆ ದಯಾಶಂಕರ್ ಮಗಳಿಗೆ ಶುಕ್ರವಾರ ಮಾತನಾಡಲೆಂದು ಮನೆಯ ಟೆರೇಸ್ ಗೆ ಕರೆದುಕೊಂಡು ಹೋಗಿದ್ದಾನೆ. ಈ ವೇಳೆ ಮಗಳನ್ನು ಗುಂಡಿಟ್ಟು ಕೊಂದಿದ್ದಾನೆ. ದಯಾಶಂಕರ್ ಮಗಳು ದೀಪಾಲಿಗೆ ಗುಂಡು ಹಾರಿಸುವಾಗ ಆಕೆಯ ಸಹೋದರಿ ಸಹ ಗಾಯಗೊಂಡಿದ್ದಾಳೆ.

ಮಗಳನ್ನು ಗುಂಡಿಟು ಕೊಲೆಗೈದ ಬಳಿಕ ದಯಾಶಂಕರ್ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಗುಂಡಿನ ಶಬ್ದ ಕೇಳಿ ಸ್ಥಳಕ್ಕೆ ಬಂದ ಸ್ಥಳೀಯರು ದಯಾಶಂಕರನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇನ್ನೂ ದೀಪಾಲಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಕಿರಿಯ ಮಗಳು ಪ್ರಾಣಾಪಾಯದಿಂದ ಪಾರಾಗಿದ್ದಾಳೆ.

ಕೊಲೆಗೆ ಕಾರಣ ಏನು?
ದೀಪಾಲಿ ಮಕ್ಕಳಿಗೆ ಟ್ಯೂಷನ್ ಹೇಳುವ ಮೂಲಕ ಒಂದಿಷ್ಟು ಹಣವನ್ನು ಸಂಪಾದನೆ ಮಾಡುತ್ತಿದ್ದಳು. ಗ್ರಾಮದ ಜನರು ದಯಾಶಂಕರ್ ಮಗಳ ಸಂಪಾದನೆಯಲ್ಲಿ ಜೀವನ ಸಾಗಿಸುತ್ತಿದ್ದಾನೆ ಎಂದು ಹೇಳುವುದರ ಜೊತೆಗೆ ಟ್ಯೂಷನ್ ಕ್ಲಾಸ್ ನೆಪದಲ್ಲಿ ದೀಪಾಲಿ ಗೆಳಯನೊಬ್ಬನನ್ನು ಭೇಟಿಯಾಗುತ್ತಾಳೆ ಎಂಬ ಚುಚ್ಚು ಮಾತಗಳನ್ನಾಡುತ್ತಿದ್ರು.

ಗ್ರಾಮಸ್ಥರ ಮಾತುಗಳಿಂದ ಬೇಸತ್ತ ದಯಾನಾಯಕ್ ಶುಕ್ರವಾರ ಮಗಳನ್ನು ಟರೇಸ್ ಮೇಲೆ ಕರೆದು ಈ ಕುರಿತು ವಿಚಾರಿಸಿದ್ದಾನೆ. ಆದ್ರೆ ದೀಪಾಲಿ ತಂದೆಯ ಯಾವ ಪ್ರಶ್ನೆಗೆ ಉತ್ತರಿಸಿಲ್ಲ. ಇದ್ರಿಂದ ಕೋಪಗೊಂಡ ದಯಾನಾಯಕ್ ತನ್ನ ಬಳಿಯಿದ್ದ ಪಿಸ್ತೂಲ್‍ನಿಂದ ದೀಪಾಲಿಯ ಮೇಲೆ ಗುಂಡು ಹಾರಿಸಿದ್ದಾನೆ. ಕೊನೆಗೆ ತಾನು ಗುಂಡು ಹಾರಿಸಿಕೊಂಡಿದ್ದಾನೆ.

ಸದ್ಯ ದಯಾಶಂಕರನ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಕಾನ್ಪುರ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಪೊಲೀಸರು ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದ್ದು, ಕೊಲೆ ನಡೆದ ಸ್ಥಳವನ್ನು ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ದಯಾನಾಯಕ್ ಕೊಲೆಗೆ ಬಳಸಿದ್ದ ಬಂದೂಕನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ದೀಪಾಲಿ ತಾಯಿ ರಶ್ಮಿ ಗಂಡನ ವಿರುದ್ಧ ಕೊಲೆ ಕೇಸ್ ದಾಖಲಿಸಿದ್ದಾರೆ.

 

Leave a Reply

Your email address will not be published. Required fields are marked *