ಭಾರತಕ್ಕೆ ಬಂದ 2 ತಿಂಗ್ಳಲ್ಲಿ 242 ಕೆಜಿ ತೂಕ ಇಳಿಸಿಕೊಂಡಿದ್ರೂ ಎಮಾನ್ ಇನ್ನೆಂದೂ ನಡೆಯಲು ಸಾಧ್ಯವಿಲ್ಲ

ಮುಂಬೈ: ಬರೋಬ್ಬರಿ 500 ಕೆಜಿ ತೂಕ ಹೊಂದಿದ್ದ, ಜಗತ್ತಿನ ದಢೂತಿ ಮಹಿಳೆ ಎನಿಸಿಕೊಂಡಿದ್ದ ಈಜಿಪ್ಟ್ ಮೂಲದ ಎಮಾನ್ ಅಹ್ಮದ್(36) ಭಾರತಕ್ಕೆ ಬಂದು ಎರಡೇ ತಿಂಗಳಲ್ಲಿ ಸುಮಾರು 242 ಕೆಜಿ ತೂಕ ಇಳಿಸಿಕೊಂಡಿದ್ದಾರೆ.

ಮುಂಬೈನ ಸೈಫೀ ಆಸ್ಪತ್ರೆಯಲ್ಲಿ ಪ್ರಸಿದ್ಧ ಬಾರಿಯಾಟ್ರಿಕ್ ಸರ್ಜನ್ ಡಾ. ಮುಫಾಜಲ್ ಲಕ್ಡಾವಾಲಾ, ಎಮಾನ್ ಅವರಿಗೆ ಮಾರ್ಚ್ 7 ರಂದು ಶಸ್ತ್ರಚಿಕಿತ್ಸೆ ಮಾಡಿದ್ರು. ಎಮಾನ್‍ರ ಥೈರಾಡ್ ಮಟ್ಟ ಸಾಮಾನ್ಯವಗಿದ್ದು ಇನ್ಮುಂದೆ ಆಕೆ ಕುಳಿತುಕೊಳ್ಳಬಲ್ಲರು ಎಂದು ಹೇಳಿದ್ರು. ಆದ್ರೆ ಎಮಾನ್ ತನ್ನ 11ನೇ ವಯಸ್ಸಿನಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಅನಂತರ ಅವರ ಕಾಲುಗಳು ಬೆಳವಣಿಗೆ ಸ್ಥಗಿತವಾಗಿತ್ತು. ಎಮಾನ್ ದಢೂತಿ ದೇಹ ಹೊಂದಿದ್ದ ಕಾರಣ 25 ವರ್ಷಗಳವರೆಗೆ ಹಾಸಿಗೆ ಹಿಡಿದಿದ್ದಾಗ ಸಮಸ್ಯೆ ಮತ್ತಷ್ಟು ಉಲ್ಬಣವಾಗಿತ್ತು. ಹೀಗಾಗಿ ಎಮಾನ್ ಇನ್ನೆಂದೂ ನಡೆದಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಎಮಾನ್ ಅವರಿಗೆ ಸ್ಥೂಲಕಾಯದ ಚಿಕಿತ್ಸೆ ಮುಗಿದಿದ್ದು, ನರಕ್ಕೆ ಸಂಬಂಧಿಸಿದಂತೆ ಮುಂದಿನ ಚಿಕಿತ್ಸೆ ಶಿಘ್ರದಲ್ಲೇ ಶುರು ಮಾಡಲಾಗುತ್ತದೆ. ಎಮಾನ್ ಅವರ ಈಗಿನ ತೂಕದಲ್ಲಿ ಇನ್ನೂ 50 ಕೆಜಿ ಇಳಿಸಲು ವೈದ್ಯರು ಯೋಚಿಸಿದ್ದಾರೆ. ಆಗ ಎಮಾನ್ ತೂಕ ಸುಮಾರು 200 ಕೆಜಿ ಆಗಲಿದ್ದು ಸಿಟಿ ಸ್ಕ್ಯಾನ್‍ಗೆ ಆಕೆ ಒಳಗಾಗಬಹುದು. ಇದರಿಂದಾಗಿ ಈ ಹಿಂದೆ ಆಕೆ ತುತ್ತಾಗಿದ್ದ ಪಾರ್ಶ್ವವಾಯುವಿನ ಪರಿಣಮದ ಬಗ್ಗೆ ಪರೀಕ್ಷಿಸಲು ವೈದ್ಯರಿಗೆ ಸಹಾಯವಾಗಲಿದೆ.

ಎಮಾನ್ ಅವರನ್ನ 4 ತಿಂಗಳ ಬಳಿಕ ಈಜಿಪ್ಟ್ ನ ಅಲೆಕ್ಸಾಂಡ್ರಿಯಾಗೆ ವಾಪಸ್ ಕಳಿಸಬೇಕಿತ್ತು. ಆದ್ರೆ ನರಸಂಬಂಧಿತ ಚಿಕಿತ್ಸೆ ಬಾಕಿ ಇರೋದ್ರಿಂದ ಆಕೆ ಇನ್ನೂ ಕೆಲ ಕಾಲ ಭಾರತದಲ್ಲೇ ಇರಬೇಕಿದೆ.

ಎಮಾನ್ ಇಷ್ಟೊಂದು ದಢೂತಿಯಾಗಿಯಲು ಆಕೆಗಿದ್ದ ಅನುವಂಶಿಕ ಸಮಸ್ಯೆ ಕಾರಣ ಎಂದು ವೈದ್ಯಕೀಯ ಪರೀಕ್ಷೆಯಿಂದ ತಿಳಿದುಬಂದಿತ್ತು. ಹೋಮೋಝೈಗಸ್ ಮಿಸೆನ್ಸ್ ವೇರಿಯಂಟ್ ಎಂಬ ಜೀನ್ ಆಕೆಯ ಸ್ಥೂಲಕಾಯಕ್ಕೆ ಕಾರಣವಾಗಿತ್ತು. ನಮಗೆ ತಿಳಿದಂತೆ ಈ ರೀತಿಯ ಅನುವಂಶಿಕ ಕಾಯಿಲೆ ಇರೋದು ಎಮಾನ್‍ರಲ್ಲಿ ಮಾತ್ರ ಎಂದು ವೈದ್ಯರು ಹೇಳಿದ್ದರು.

You might also like More from author

Leave A Reply

Your email address will not be published.

badge