ಸಂಗಾತಿಗಾಗಿ 2 ಆನೆಗಳ ನಡುವೆ ಕಾದಾಟ; ಆನೆ ಸಾವು

ಮಡಿಕೇರಿ: ಸಂಗಾತಿಗಾಗಿ 2 ಆನೆಗಳ ನಡುವೆ ನಡೆದ ಕಲಹದಲ್ಲಿ ಆನೆಯೊಂದು ಧಾರುಣವಾಗಿ ಸಾವನ್ನಪ್ಪಿದ ಘಟನೆ ವಿರಾಜಪೇಟೆ ತಾಲೂಕಿನಲ್ಲಿ ನಡೆದಿದೆ.

ವಿರಾಜಪೇಟೆ ತಾಲೂಕಿನ ವಡ್ಡರಕಾಡು ಸಮೀಪದ ವುಡ್‍ಲ್ಯಾಂಡ್ ಕಾಫಿ ತೋಟದಲ್ಲಿ ಎರಡು ಬಲಿಷ್ಠ ಆನೆಗಳ ನಡುವೆ ಕಾಳಗ ನಡೆದು 28 ವರ್ಷ ಪ್ರಾಯದ ಒಂದು ಆನೆ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದೆ.

ಮಂಗಳವಾರ ರಾತ್ರಿ ಸುಬ್ಬಯ್ಯ ಎಂಬುವವರ ತೋಟದಲ್ಲಿ ಆನೆಗಳ ಕಾಳಗ ನಡೆದಿದೆ. ಮದವೇರಿದ್ದ ಆನೆ ಮತ್ತೊಂದು ಆನೆಗೆ 7 ಕಡೆಗಳಲ್ಲಿ ತನ್ನ ಹರಿತವಾದ ದಂತದಿಂದ ಬಲವಾಗಿ ತಿವಿದು ಗಾಯಗೊಳಿಸಿದೆ. ಕುತ್ತಿಗೆ ಹಾಗೂ ಮುಂಗಾಲಿನ ಸಂದುಗಳಿಗೆ ತೀವ್ರ ರೀತಿಯ ತಿವಿತದಿಂದ ಗಾಯಗೊಂಡಿದ್ದ ಆನೆ ನೆಲಕ್ಕುರುಳಿ ರಾತ್ರಿಯಿಂದಲೂ ಸಾವು ಬದುಕಿನ ನಡುವೆ ಹೋರಾಟ ನಡೆಸುತಿತ್ತು.

ಸುದ್ದಿ ತಿಳಿದ ಅರಣ್ಯಾಧಿಕಾರಿಗಳು ಹಾಗೂ ವೈದ್ಯರು ಆನೆಗೆ ಚಿಕಿತ್ಸೆ ನೀಡಲು ಮುಂದಾದ್ರು. ಆದರೆ ತೀವ್ರ ರಕ್ತಸ್ರಾವದಿಂದ ಬಳಲಿದ್ದ ಆನೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ.

ಎರಡು ಆನೆಗಳ ಕಾದಾಟ ಹೇಗಿರುತ್ತೆ ಎಂಬುದನ್ನು ಈ ವಿಡಿಯೋದಲ್ಲಿ ನೋಡಿ:

 

LEAVE A REPLY