Friday, 23rd March 2018

ಚಳಿ ಕಾಯಿಸಲು ಹಚ್ಚಿದ್ದ ಬೆಂಕಿ ತಗುಲಿ ಪಾನಮತ್ತ ವಾಚ್‍ಮ್ಯಾನ್ ಸಜೀವ ದಹನ

ಬೆಳಗಾವಿ: ಹೊಸ ವರ್ಷಾಚರಣೆಯ ದಿನವೇ ಭೀಕರ ದುರಂತ ನಡೆದಿದ್ದು, ಕುಡಿದ ಮತ್ತಿನಲ್ಲಿ ಬೆಂಕಿ ತಗುಲಿ ವ್ಯಕ್ತಿಯೊಬ್ಬರು ಸಜೀವವಾಗಿ ದಹನವಾಗಿರುವ ಘಟನೆ ಜಿಲ್ಲೆಯ ಉಧ್ಯಮ ಬಾಗ್ ಠಾಣೆಯ ಬಳಿ ನಡೆದಿದೆ.

ಪ್ರಭಾಕರ ವಸಂತ ಹೊಕ್ಕಳೇಕರ್ (65) ಮೃತ ದುರ್ದೈವಿ. ಮೃತ ಪ್ರಭಾಕರ ಬೆಳಗಾವಿ ಶಿವಶಕ್ತಿ ಬಡಾವಣೆ ನಿವಾಸಿಯಾಗಿದ್ದು, ಮ್ಯಾನಸನ್ ಎಂಜಿನೀಯರ್ ಕಂಪನಿಯ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದರು.

ಪ್ರಭಾಕರ ಸುಮಾರು 6 ವರ್ಷದಿಂದ ವಾಚ್‍ಮ್ಯಾನ್ ಕೆಲಸ ನಿರ್ವಹಿಸುತ್ತಿದ್ದರು. ತಡರಾತ್ರಿ ಕಾರ್ಖಾನೆ ಆವರಣದಲ್ಲಿ ರಾತ್ರಿ ಕಾವಲು ಕಾಯುವಾಗ ಪ್ರಭಾಕರ ಕುಡಿದಿದ್ದು, ಚಳಿ ಎಂದು ಬೆಂಕಿ ಕಾಯಿಸಲು ಬೆಂಕಿ ಹಚ್ಚಿಸಿದ್ದಾರೆ. ಆದರೆ ದುರದೃಷ್ಟವಶಾತ್ ಬೆಂಕಿ ಕಾಯಿಸುವಾಗ ಆಕಸ್ಮಿಕವಾಗಿ ಬೆಂಕಿ ತಗುಲಿದೆ. ಬೆಂಕಿ ಹತ್ತಿದ ನಂತರ ಅದೇ ಪ್ರದೇಶದ ನಾಯಿಗಳು ಎಳೆದಾಡಿ ಮೃತದೇಹವನ್ನು ಎರಡು ಭಾಗವಾಗಿ ಮಾಡಿವೆ.

ಮುಂಜಾನೆ ಸ್ಥಳೀಯರು ಎರಡು ಭಾಗವಾದ ದೇಹವನ್ನು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಉಧ್ಯಮ ಬಾಗ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *