ಇಂದು ಗೃಹಸ್ಥಾಶ್ರಮಕ್ಕೆ ಕಾಲಿಡ್ತಿದ್ದಾರೆ ಸಿಂಪಲ್ ಸುನಿ

ಬೆಂಗಳೂರು: ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ ಸಿನಿಮಾದ ಮೂಲಕ ಭಾರೀ ಹೆಸರು ಮಾಡಿರೋ ನಿರ್ದೇಶಕ ಸಿಂಪಲ್ ಸುನಿ ಇಂದು ಗೃಹಸ್ಥಾಶ್ರಮಕ್ಕೆ ಕಾಲಿಡುತ್ತಿದ್ದಾರೆ. ಬಹುಕಾಲದಿಂದ ಪ್ರೀತಿಸುತ್ತಿದ್ದ ಸೌಂದರ್ಯ ಜೊತೆ ಸಪ್ತಪದಿ ತುಳಿಯಲಿದ್ದಾರೆ

ತಮ್ಮ ಮೊದಲ ಸಿನಿಮಾದಲ್ಲೇ ಭರವಸೆ ಮೂಡಿಸಿ ಮುಂದೆ ಹೆಸರುವಾಸಿ ನಿರ್ದೇಶಕರಾದ ಸಿಂಪಲ್ ಸುನಿ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದ ಸೌಂದರ್ಯ ಗೌಡರನ್ನ ಕೈಹಿಡಿಯಲಿದ್ದಾರೆ. ಟ್ವಿಟರ್ ಮೂಲಕ ನಿರ್ದೇಶಕ ಸುನಿಗೆ ಪರಿಚಯವಾದ ಸೌಂದರ್ಯ ಮೂಲತಃ ಶೃಂಗೇರಿಯವರು.

ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಇಂದು ಬೆಳಿಗ್ಗೆ 10.30ರ ಶುಭ ಮುಹೂರ್ತದಲ್ಲಿ ಸುನಿ-ಸೌಂದರ್ಯ ಮದುವೆ ನಡೆಯಲಿದೆ. ನಂತರ ಫೆಬ್ರವರಿ 19ಕ್ಕೆ ಬೆಂಗಳೂರಿನಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭ ನಡೆಯಲಿದೆ. ಮದುವೆ ಮುಹೂರ್ತಕ್ಕೆ ಕೇವಲ ಕುಟುಂಬಸ್ಥರನ್ನ ಮಾತ್ರ ಆಹ್ವಾನಿಸಿದ್ದು ಆರತಕ್ಷತೆಗೆ ಚಿತ್ರರಂಗದ ಅನೇಕ ಗಣ್ಯರಿಗೆ ಸುನಿ ಆಹ್ವಾನಿಸಿದ್ದಾರೆ.

ನಿರ್ದೇಶಕ ಸುನಿ ಈ ಹಿಂದೆ ಸಿಂಪಲ್ಲಾಗ್ ಒಂದ್ ಲವ್‍ಸ್ಟೋರಿ, ಬಹುಪರಾಕ್, ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ, ಸಿನಿಮಾ ನಿರ್ದೇಶನ ಮಾಡಿದ್ದಾರೆ. ಶೀಘ್ರದಲ್ಲೇ ಇವರ ಆಪರೇಷನ್ ಅಲಮೇಲಮ್ಮ ಬಿಡುಗಡೆಗೆ ಸಿದ್ಧವಾಗಿದ್ರೆ ಗಣೇಶ್ ಅಭಿನಯಿಸುತ್ತಿರುವ ಚಮಕ್ ಸಿನಿಮಾ ಸೆಟ್ಟೇರೋಕೆ ರೆಡಿಯಾಗಿದೆ.

You might also like More from author

Leave A Reply

Your email address will not be published.

badge