Tuesday, 22nd May 2018

Recent News

ರಣ್‍ವೀರ್ ಸಿಂಗ್ ಡ್ರೆಸ್ ನೋಡಿ ಸಿಡಿಮಿಡಿಗೊಂಡ ದೀಪಿಕಾ!

ಮುಂಬೈ: ಬಾಲಿವುಡ್‍ನ ಹಾಟ್ ಆ್ಯಂಡ್ ಸ್ಮಾರ್ಟ್ ಸ್ಟಾರ್ ರಣ್‍ವೀರ್ ಸಿಂಗ್ ತಮ್ಮ ಟ್ವಿಟರ್ ಮತ್ತು ಇನ್ ಸ್ಟಾಗ್ರಾಂನಲ್ಲಿ ಫೋಟೋವನ್ನು ಅಪ್ಲೋಡ್ ಮಾಡಿದ್ದು, ಅದಕ್ಕೆ ಗೆಳತಿ ಗುಳಿ ಕೆನ್ನೆ ಬೆಡಗಿ ದೀಪಿಕಾ `ನೋ’ ಎಂದು ಕಮೆಂಟ್ ಮಾಡಿ ನಾಯಿ ಮರಿಗಳು ಕಣ್ಮುಚ್ಚಿರುವ ಮೂರು ಎಮೋಜಿಗಳನ್ನು ಹಾಕಿದ್ದಾರೆ.

ಯಾವಾಗಲೂ ವಿಭಿನ್ನ ಡ್ರೆಸ್ ಶೈಲಿಯಿಂದ ಕಾಣಿಸಿಕೊಳ್ಳುವ ರಣ್‍ವೀರ್, ಇತ್ತೀಚಿಗೆ ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಸ್ಕರ್ಟ್ ರೀತಿಯ ಡ್ರೆಸ್ ಧರಿಸಿ ಬಂದು ಎಲ್ಲರನ್ನು ಚಕಿತಗೊಳಿಸಿದ್ರು. ರಣ್‍ವೀರ್ ತಮ್ಮ ವಿನೂತನ ಮಾದರಿಯ ಡ್ರೆಸ್ ತೊಟ್ಟಿರುವ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಈ ಫೋಟೋಗೆ ರಣ್‍ವೀರ್ ಗೆ ಸಾವಿರಾರು ಕಮೆಂಟ್‍ಗಳು ಬಂದಿವೆ.

ಬಾಲಿವುಡ್‍ನ ಪ್ರಣಯ ಪಕ್ಷಿಗಳಾದ ರಣ್‍ವೀರ್ ಮತ್ತು ದೀಪಿಕಾ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಆ್ಯಕ್ಟಿವ್ ಆಗಿದ್ದಾರೆ. ಕೆಲವು ದಿನಗಳ ಹಿಂದೆ ದೀಪಿಕಾರ ಫೋಟೋಗೆ ರಣ್‍ವೀರ್ `ನಾನು ತುಂಬಾ ಮಿಸ್ ಮಾಡ್ಕೊಳ್ಳುತ್ತಿದ್ದೀನಿ ಎಂದು ಕಮೆಂಟ್ ಮಾಡಿದ್ದರು. ಆದರೆ ಇದೂವರೆಗೂ ಮಾತ್ರ ಈ ಜೋಡಿ ಬಹಿರಂಗವಾಗಿ ತಮ್ಮ ಪ್ರೀತಿಯ ವಿಚಾರವನ್ನು ಎಲ್ಲೂ ಹೇಳಿಕೊಂಡಿಲ್ಲ.

ಇದನ್ನೂ ಓದಿ: ದೀಪಿಕಾಳಿಗೆ ಮೊದಲು ಈ ನಟನ ಮೇಲೆ ಕ್ರಶ್ ಆಗಿತ್ತಂತೆ

ರಣ್‍ವೀರ್ ಗುರುವಾರ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅಂದು ಗೆಳತಿ ದೀಪಿಕಾರನ್ನು ಹೊಸ ಕಾರಿನಲ್ಲಿ ತಾವೇ ಕರೆದುಕೊಂಡು ಬಂದಿರುವ ಫೋಟೋ ವೈರಲ್ ಆಗಿತ್ತು. ಈಗಾಗಲೇ ಈ ಜೋಡಿ ನಟಿಸಿರುವ ರಾಮ್‍ಲೀಲಾ ಮತ್ತು ಬಾಜೀರಾವ್ ಮಸ್ತಾನಿ ಎರಡೂ ಚಿತ್ರಗಳು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದವು. ಈಗ ಮತ್ತೊಮ್ಮೆ ದೀಪಿಕಾ ಮತ್ತು ರಣ್‍ವೀರ್ ಬೆಳ್ಳಿ ಪರದೆಯ ಮೇಲೆ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ `ಪದ್ಮಾವತಿ’ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ದೀಪಿಕಾನ ಮಿಸ್ ಮಾಡ್ಕೊಳ್ತಿದ್ದಾರಂತೆ ರಣ್‍ವೀರ್ ಸಿಂಗ್

 

Aap? Yahaan? Ji, Kyun? #GQ #GQPowerList @gqindia

A post shared by Ranveer Singh (@ranveersingh) on

#AboutThatNight: #nextgen leader @madhukeshwar at the #GQPowerList event in #Delhi.

A post shared by GQ India (@gqindia) on

Three days, three extraordinary #Demobaza looks by #RanveerSingh Pic: @Bollyfashionfiesta

A post shared by Nitasha Gaurav (@nitashagaurav) on

Leave a Reply

Your email address will not be published. Required fields are marked *