Saturday, 23rd September 2017

Recent News

ಬೆಂಗ್ಳೂರಿಗೆ ಬಂದ್ರೆ ಮಿಸ್ ಮಾಡ್ದೆ ಈ ತಿಂಡಿಯನ್ನು ತಿಂತಾರೆ ದೀಪಿಕಾ

ಬೆಂಗಳೂರು: ಬಾಲಿವುಡ್ ಬೆಡಗಿ ಕನ್ನಡದ ಹುಡುಗಿ ಬೆಂಗಳೂರಿಗೆ ಬಂದರೂ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಈ ಬಾರಿ ಇಡ್ಲಿ ವಡೆ ತಿನ್ನಲು ಹೋಟೆಲ್ ಗೆ ಬಂದಾಗ ಕ್ಯಾಮೆರಾ ಕಣ್ಣಿಗೆ ಸಿಕ್ಕಿದ್ದಾರೆ.

ದೀಪಿಕಾ ಎಂಬ ಚಲುವೆ ಹುಟ್ಟಿದ್ದು, ಬೆಳೆದಿದ್ದೂ ಎಲ್ಲಾ ಕರುನಾಡಿನಲ್ಲಿ. ಚಿತ್ರ ರಂಗದಲ್ಲಿ ದೀಪಿಕಾ ಬ್ಯುಸಿಯಾಗಿದ್ದರೂ ಅವರ ಕುಟುಂಬ ಮಾತ್ರ ಬೆಂಗಳೂರಿನಲ್ಲಿಯೇ ವಾಸವಾಗಿದೆ. ಹೀಗಾಗಿ ಎಷ್ಟೇ ಬ್ಯೂಸಿಯಾಗಿದ್ದರೂ ಬೆಂಗಳೂರಿಗೆ ದೀಪಿಕಾ ಬಂದು ಹೋಗುತ್ತಿರುತ್ತಾರೆ.

ಬೆಂಗಳೂರಿಗೆ ಗುಟ್ಟಾಗಿ ಬಂದು ಹೋಗುತ್ತಿದ್ದ ದೀಪಿಕಾ ಮಂಗಳವಾರ ನಗರದ ಮಲೇಶ್ವರಂನಲ್ಲಿ ವೀಣಾ ಸ್ಟೋರ್‍ನಲ್ಲಿ ಕಾಣಿಸಿಕೊಂಡಿದ್ದರು. ಬಂದವರೇ ಇಡ್ಲಿ ವಡೆ ಪಾರ್ಸೆಲ್ ತಗೆದುಕೊಂಡು ಜಾಗ ಖಾಲಿ ಮಾಡಿದ್ದಾರೆ. ದೀಪಿಕಾ ಎಷ್ಟೇ ಬೇರೆ ದೇಶದ ವೆರೈಟಿ ವೆರೈಟಿ ಫುಡ್ ತಿಂದಿದ್ದರೂ ನಮ್ಮ ಇಡ್ಲಿ, ವಡೆ, ದೋಸೆ ತುಂಬಾ ಇಷ್ಟಪಡುತ್ತಾರೆ. ಹಾಲಿಡೇ ಗೆ ಬೆಂಗಳೂರಿಗೆ ಬಂದಗಾಲಲ್ಲೇ ದೀಪಿಕಾ ಮಿಸ್ ಮಾಡ್ದೇ ಇಲ್ಲಿ ಇಡ್ಲಿ, ವಡೆ ತಿಂದು ಸವಿಯುತ್ತಾರೆ.

Leave a Reply

Your email address will not be published. Required fields are marked *