Friday, 22nd June 2018

Recent News

ದಿನಭವಿಷ್ಯ: 19-03-2017

ಪಂಚಾಂಗ: ಶ್ರೀ ದುರ್ಮುಖಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ಸಪ್ತಮಿ ತಿಥಿ,
ಭಾನುವಾರ, ಜ್ಯೇಷ್ಠ ನಕ್ಷತ್ರ

ರಾಹುಕಾಲ: ಸಾಯಂಕಾಲ 5:04 ರಿಂದ 6:34
ಗುಳಿಕಕಾಲ: ಮಧ್ಯಾಹ್ನ 3:33 ರಿಂದ 5:04
ಯಮಗಂಡಕಾಲ: ಮಧ್ಯಾಹ್ನ 12:31 ರಿಂದ 2:02

ಮೇಷ: ನಾನಾ ರೀತಿಯ ಚಿಂತೆ, ವ್ಯರ್ಥ ಧನಹಾನಿ, ಕೃಷಿಯಲ್ಲಿ ಪ್ರಗತಿ, ವ್ಯಾಪಾರದಲ್ಲಿ ಸಾಧಾರಣ ಲಾಭ, ಯತ್ನ ಕಾರ್ಯದಲ್ಲಿ ಸಫಲ, ದ್ರವ್ಯ ಲಾಭ, ಕೆಲಸ ಕಾರ್ಯಗಳಲ್ಲಿ ಜಯ, ಈ ವಾರ ಮಿಶ್ರಫಲ.

ವೃಷಭ: ಬಂಧು ಮಿತ್ರರ ಆಗಮನ, ಅಧಿಕ ಖರ್ಚು, ವೃಥಾ ಧನವ್ಯಯ, ಕೋರ್ಟ್ ವ್ಯವಹಾರಗಳಲ್ಲಿ ತಿರುಗಾಟ, ಅಲ್ಪ ಲಾಭ, ಉದ್ಯೋಗದಲ್ಲಿ ಅಲ್ಪ ಪ್ರಗತಿ, ಮಾನಸಿಕ ಚಿಂತೆ, ದುಷ್ಟರಿಂದ ದೂರವಿರಿ.

ಮಿಥುನ: ಸ್ಥಿರಾಸ್ತಿ ಸಂಪಾದನೆ, ಮಿತ್ರರಿಂದ ವಂಚನೆ, ಸಾರ್ವಜನಿಕ ಕ್ಷೇತ್ರದಲ್ಲಿ ಗೌರವ ಪ್ರಾಪ್ತಿ, ಆರೋಗ್ಯದಲ್ಲಿ ಸುಧಾರಣೆ, ದಾಯಾದಿಗಳ ಕಲಹ, ಪುಣ್ಯಕ್ಷೇತ್ರ ದರ್ಶನ, ಮಂಗಳ ಕಾರ್ಯಗಳಲ್ಲಿ ಭಾಗಿ.

ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಸಾಧಾರಣ ಲಾಭ, ಯತ್ನ ಕಾರ್ಯಗಳಲ್ಲಿ ವಿಘ್ನ, ಬಂಧು ಮಿತ್ರರಲ್ಲಿ ಮನಃಸ್ತಾಪ, ಸೇವಕರಿಂದ ತೊಂದರೆ, ಸ್ಥಳ ಬದಲಾವಣೆ, ಕೃಷಿಯಲ್ಲಿ ಪ್ರಗತಿ.

ಸಿಂಹ: ಕೆಲಸಗಳಲ್ಲಿ ನಿಧಾನಗತಿ, ವಿಪರೀತ ವ್ಯಸನ, ಸ್ತ್ರೀಯರಿಗೆ ಶುಭ, ಮಕ್ಕಳ ಕಡೆ ಗಮನಹರಿಸಿ, ಅವಿವಾಹಿತರಿಗೆ ವಿವಾಹಯೋಗ, ಋಣ ವಿಮೋಚನೆ, ಗುರು ಹಿರಿಯರ ಭೇಟಿ, ವಾದ-ವಿವಾದಗಳಲ್ಲಿ ಎಚ್ಚರಿಕೆ.

ಕನ್ಯಾ: ಸ್ನೇಹಿತರ ಭೇಟಿ, ವ್ಯಾಪಾರದಲ್ಲಿ ನಷ್ಟ, ಆಲಸ್ಯ ಮನೋಭಾವ, ಪತಿ-ಪತ್ನಿಯರಲ್ಲಿ ಪ್ರೀತಿ, ಇಷ್ಟ ವಸ್ತುಗಳ ಖರೀದಿ, ಆರ್ಥಿಕ ಪರಿಸ್ಥಿತಿ ಚೇತರಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ, ಮಕ್ಕಳೊಂದಿಗೆ ಸಂತಸ.

ತುಲಾ: ಅಭಿವೃದ್ಧಿ ಕುಂಠಿತ, ಸ್ತ್ರೀಯರಿಗೆ ಲಾಭ, ಶತ್ರುಗಳ ಬಾಧೆ, ತಾಳ್ಮೆ ಅಗತ್ಯ, ಸಕಲ ಕಾರ್ಯಗಳಲ್ಲಿ ಅಡ್ಡಿ, ಅತಿಯಾದ ನಿದ್ರೆ, ಅಲ್ಪ ಲಾಭ, ಅಧಿಕ ಖರ್ಚು, ಧನ ಸಹಾಯ ಕೇಳುವಿರಿ.

ವೃಶ್ಚಿಕ: ದೂರ ಪ್ರಯಾಣ, ಪ್ರಭಾವಿ ವ್ಯಕ್ತಿಗಳ ಭೇಟಿ, ದೈನಂದಿನ ಕೆಲಸಗಳಲ್ಲಿ ಉತ್ಸಾಹ, ಗೊಂದಲಗಳಿಂದ ದೂರವಿರಿ, ಶತ್ರುಗಳ ಬಾಧೆ, ಸ್ವಂತ ಉದ್ಯಮಸ್ಥರಿಗೆ ಲಾಭ.

ಧನಸ್ಸು: ಮಕ್ಕಳಿಗಾಗಿ ಹಣವ್ಯಯ, ಆಕಸ್ಮಿಕ ಖರ್ಚು, ಅಕಾಲ ಭೋಜನ, ಕಾರ್ಯದಲ್ಲಿ ವಿಳಂಬ, ಉನ್ನತ ಸ್ಥಾನಮಾನ, ದ್ರವ್ಯ ಲಾಭ, ಚಂಚಲ ಮನಸ್ಸು, ನಾನಾ ವಿಚಾರಗಳಲ್ಲಿ ಆಸಕ್ತಿ, ಋಣ-ಸಾಲ ಬಾಧೆ.

ಮಕರ: ಸ್ತ್ರೀಯರಿಗೆ ಶುಭ, ಆಕಸ್ಮಿಕ ಧನ ಲಾಭ, ಸಲ್ಲದ ಅಪವಾದ, ಆತ್ಮೀಯರಲ್ಲಿ ವೈಮನಸ್ಸು, ಮಾತೃವಿನಿಂದ ಸಹಾಯ, ವಿದ್ಯಾರ್ಥಿಗಳಿಗೆ ಉತ್ತಮ ಫಲಿತಾಂಶ, ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿ.

ಕುಂಭ: ವಿವಿಧ ಮೂಲಗಳಿಂದ ಹಣ ಬರುವುದು, ಆರೋಗ್ಯದಲ್ಲಿ ಕಾಳಜಿ ಅಗತ್ಯ, ಹಿತ ಶತ್ರುಗಳಿಂದ ತೊಂದರೆ, ಪರರ ಮಾತಿಗೆ ಕಿವಿ ಕೊಡಬೇಡಿ, ಚೋರ ಭಯ, ವಿಪರೀತ ಕೋಪ, ಅಕಾಲ ಭೋಜನ,
ಮನಃಕ್ಲೇಷ.

ಮೀನ: ವ್ಯವಹಾರದಲ್ಲಿ ನಿರೀಕ್ಷಿತ ಆದಾಯ, ಮನೆಯಲ್ಲಿ ಸಂತಸ, ಸುಖ ಭೋಜನ, ಅನಗತ್ಯ ವಿಚಾರಗಳಿಂದ ದೂರವಿರಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ತೀರ್ಥಯಾತ್ರೆ ದರ್ಶನ.

Leave a Reply

Your email address will not be published. Required fields are marked *