Thursday, 21st June 2018

Recent News

ದಿನಭವಿಷ್ಯ: 14-03-2018

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶಿಶಿರ ಋತು, ಫಾಲ್ಗುಣ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಬುಧವಾರ, ಶ್ರವಣ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:32 ರಿಂದ 2:03
ಗುಳಿಕಕಾಲ: ಬೆಳಗ್ಗೆ 11:02 ರಿಂದ 12:22
ಯಮಗಂಡಕಾಲ: ಬೆಳಗ್ಗೆ 8:02 ರಿಂದ 9:32

ಮೇಷ: ಈ ದಿನ ಮಿತ್ರರಿಂದ ಬೆಂಬಲ, ವಿಪರೀತ ಮುಂಗೋಪ, ದಾಂಪತ್ಯದಲ್ಲಿ ಪ್ರೀತಿ, ಮಗನಿಂದ ಶುಭ ವಾರ್ತೆ, ವೈರಿಗಳಿಂದ ದೂರವಿರಿ.

ವೃಷಭ: ವೈಯುಕ್ತಿ ವಿಚಾರಗಳಲ್ಲಿ ಉದಾಸೀನ, ಅಮೂಲ್ಯ ವಸ್ತುಗಳನ್ನ ಕಳೆದುಕೊಳ್ಳುವಿರಿ, ಇತರರ ಭಾವನೆಗೆ ಸ್ಪಂದಿಸುವಿರಿ.

ಮಿಥುನ: ಕುಟುಂಬ ಸೌಖ್ಯ, ವಿವಿಧ ಮೂಲಗಳಿಂದ ಲಾಭ, ಹಿತ ಶತ್ರುಗಳ ಕಾಟ, ಸ್ತ್ರೀಯರಲ್ಲಿ ತಾಳ್ಮೆ ಅತ್ಯಗತ್ಯ.

ಕಟಕ: ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಉದ್ಯೋಗದಲ್ಲಿ ಕಿರಿಕಿರಿ, ಚೋರ ಭಯ, ಕೃಷಿಕರಿಗೆ ಲಾಭ, ಚಂಚಲ ಮನಸ್ಸು.

ಸಿಂಹ: ಯತ್ನ ಕಾರ್ಯಗಳಲ್ಲಿ ವಿಳಂಬ, ಇಲ್ಲ ಸಲ್ಲದ ಅಪವಾದ, ಆಕಸ್ಮಿಕ ಖರ್ಚು, ವ್ಯಾಪಾರದಲ್ಲಿ ಉತ್ತಮ ವಹಿವಾಟು.

ಕನ್ಯಾ: ಸಕಾಲದಲ್ಲಿ ಹಣ ಪ್ರಾಪ್ತಿ, ದ್ರವ್ಯ ಲಾಭ, ಸ್ತ್ರೀಯರಿಗೆ ಶುಭ, ತೀರ್ಥಯಾತ್ರೆ ದರ್ಶನ, ಪರರ ತಪ್ಪಿನಿಂದ ಅಗೌರವ.

ತುಲಾ: ಈ ದಿನ ನೆಮ್ಮದಿ ವಾತಾವರಣ, ಥಳುಕಿನ ಮಾತುಗಳಿಂದ ದೂರವಿರಿ, ಆಕಸ್ಮಿಕ ಧನಾಗಮನ, ಹಿರಿಯರಿಂದ ಸಹಾಯ, ವ್ಯವಹಾರಗಳಲ್ಲಿ ಸುಗಮ.

ವೃಶ್ಚಿಕ: ಮಾತೃವಿನಿಂದ ನಿಂದನೆ, ಮಂಗಳ ಕಾರ್ಯಗಳಲ್ಲಿ ಭಾಗಿ, ಅಧಿಕ ಖರ್ಚು, ಯತ್ನ ಕಾರ್ಯದಲ್ಲಿ ಜಯ.

ಧನಸ್ಸು: ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಮನಸ್ಸಿಗೆ ಸಂತೋಷ, ನಿದ್ರಾಭಂಗ, ದೂರ ಪ್ರಯಾಣ, ಷೇರು ವ್ಯವಹಾರಗಳಲ್ಲಿ ಲಾಭ.

ಮಕರ: ತೀರ್ಥಕ್ಷೇತ್ರ ದರ್ಶನ, ವಾಹನ ಖರೀದಿ, ಆತ್ಮೀಯ ಸ್ನೇಹಿತರ ಭೇಟಿ, ಮಾನಸಿಕ ಒತ್ತಡ, ಅತಿಯಾದ ಭಯ.

ಕುಂಭ: ಅಲ್ಪ ಆದಾಯ, ಅಧಿಕ ಖರ್ಚು, ಅಲ್ಪ ಕಾರ್ಯ ಸಿದ್ಧಿ, ವಸ್ತು ವ್ಯಾಪಾರಿಗಳಿಗೆ ಲಾಭ, ಯಾರನ್ನೂ ಹೆಚ್ಚು ನಂಬಬೇಡಿ.

ಮೀನ: ಗುರು ಹಿರಿಯರ ಆಶೀರ್ವಾದ, ರಿಯಲ್ ಎಸ್ಟೇಟ್‍ನವರಿಗೆ ಲಾಭ, ಎಲ್ಲರ ಪ್ರೀತಿಗೆ ಪಾತ್ರರಾಗುವಿರಿ, ಮಾನಸಿಕ ನೆಮ್ಮದಿ.

Leave a Reply

Your email address will not be published. Required fields are marked *