Wednesday, 20th June 2018

Recent News

ದಿನಭವಿಷ್ಯ: 13-01-2018

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಹಿಮಂತ ಋತು, ಪುಷ್ಯ ಮಾಸ,
ಕೃಷ್ಣ ಪಕ್ಷ, ದ್ವಾದಶಿ ತಿಥಿ,
ಶನಿವಾರ, ಅನೂರಾಧ ನಕ್ಷತ್ರ
ಬೆಳಗ್ಗೆ 10:14 ನಂತರ ಜ್ಯೇಷ್ಠ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:28 ರಿಂದ 2:09
ಅಶುಭ ಘಳಿಗೆ: ಬೆಳಗ್ಗೆ 9:06 ರಿಂದ 10:47

ರಾಹುಕಾಲ: ಬೆಳಗ್ಗೆ 9:40 ರಿಂದ 11:06
ಗುಳಿಕಕಾಲ: ಬೆಳಗ್ಗೆ 6:48 ರಿಂದ 8:14
ಯಮಗಂಡಕಾಲ: ಮಧ್ಯಾಹ್ನ 1:58 ರಿಂದ 3:24

ಮೇಷ: ಬಂಧುಗಳಿಂದ ಹಣಕಾಸು ನೆರವು, ಸಾಲ ಬಾಧೆ, ಸೇವಕರಿಂದ ಸಮಸ್ಯೆ, ಬಡ್ಡಿ ವ್ಯವಹಾರಸ್ಥರಿಂದ ಕಿರಿಕಿರಿ, ಪಿತ್ರಾರ್ಜಿತ ಆಸ್ತಿ ತಗಾದೆ, ಕೋರ್ಟ್ ಕೇಸ್‍ಗಳಲ್ಲಿ ಜಯ.

ವೃಷಭ: ಸ್ತಿರಾಸ್ತಿ ಮೇಲೆ ಸಾಲ ಮಾಡುವಿರಿ, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ, ಸ್ವಯಂಕೃತ್ಯಗಳಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಉದ್ಯಮದಲ್ಲಿ ನಿರಾಸೆ.

ಮಿಥುನ: ಉದ್ಯೋಗ ಬದಲಾವಣೆ, ಉನ್ನತ ಹಂತದ ಉದ್ಯೋಗ ಪ್ರಾಪ್ತಿ, ಸ್ಥಿರಾಸ್ತಿ ವ್ಯವಹಾರದಲ್ಲಿ ಲಾಭ, ಗೃಹ ಬದಲಾವಣೆಯಿಂದ ಶುಭ, ಮಕ್ಕಳಿಂದ ಆರ್ಥಿಕ ನೆರವು, ಆಹಾರ ವ್ಯತ್ಯಾಸದಿಂದ ಅನಾರೋಗ್ಯ.

ಕಟಕ: ಕೃಷಿಕರಿಗೆ ಅನುಕೂಲ, ವಾಹನಗಳಿಂದ ಸಂಪಾದನೆ, ಆದಾಯ-ಖರ್ಚು ಸಮ ಪ್ರಮಾಣ, ಕೆಲಸ ಕಾರ್ಯಗಳಲ್ಲಿ ಅಡೆತಡೆ, ವ್ಯಾಪಾರ-ಉದ್ಯೋಗದಲ್ಲಿ ಅಲ್ಪ ಆದಾಯ, ದುಶ್ಚಟಗಳು ಅಧಿಕವಾಗುವುದು.

ಸಿಂಹ: ಆರೋಗ್ಯಕ್ಕಾಗಿ ಅಧಿಕ ಖರ್ಚು, ಬಂಧು-ಮಿತ್ರರಿಂದ ಸಹಕಾರ, ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ, ಶುಭ ಕಾರ್ಯಗಳಿಗೆ ಮನಸ್ಸು, ಮಾನಸಿಕ ಚಿಂತೆ.

ಕನ್ಯಾ: ಸ್ವಂತ ಉದ್ಯಮದಲ್ಲಿ ಅನುಕೂಲ, ವ್ಯಾಪಾರ ವ್ಯವಹಾರದಲ್ಲಿ ಲಾಭ, ಧರ್ಮ ಗುರುಗಳ ಭೇಟಿ, ಧಾರ್ಮಿಕ ಕಾರ್ಯದಲ್ಲಿ ಆಸಕ್ತಿ, ಪ್ರಯಾಣಕ್ಕಾಗಿ ಖರ್ಚು, ವ್ಯಾಪಾರ ಆರಂಭಕ್ಕೆ ಶುಭ.

ತುಲಾ: ಉದ್ಯೋಗ ನಿಮಿತ್ತ ಪ್ರಯಾಣ, ಹಣಕಾಸು ವ್ಯವಹಾರ ಮಾಡುವಿರಿ, ಕೃಷಿ ಉತ್ಪನ್ನಗಳ ಖರೀದಿ, ವ್ಯಾಪಾರಕ್ಕಾಗಿ ಅಧಿಕ ಖರ್ಚು, ಭೂ ವ್ಯವಹಾರದಲ್ಲಿ ತಗಾದೆ, ಕುಟುಂಬದಲ್ಲಿ ವಾದ-ವಿವಾದ.

ವೃಶ್ಚಿಕ: ದೂರದ ಪ್ರದೇಶದಲ್ಲಿ ಉದ್ಯೋಗ ಪ್ರಾಪ್ತಿ, ಉದ್ಯೋಗ ಸ್ಥಳದಲ್ಲಿ ಅಧಿಕ ಖರ್ಚು, ಸ್ವಯಂಕೃತ್ಯಗಳಿಂದ ತೊಂದರೆ, ಪ್ರಯಾಣದಲ್ಲಿ ಸಮಸ್ಯೆ, ಕೆಲಸ ಕಾರ್ಯಗಳಲ್ಲಿ ವಿಘ್ನ.

ಧನಸ್ಸು: ಉದ್ಯೋಗ ಪ್ರಾಪ್ತಿ, ದೂರ ಪ್ರದೇಶದಲ್ಲಿ ಉದ್ಯೋಗಾವಕಾಶ, ಕೆಲಸದಲ್ಲಿ ನಿರಾಸಕ್ತಿ, ಮಿತ್ರರಿಂದ ಅನುಕೂಲ, ಪ್ರಯಾಣದಲ್ಲಿ ಶುಭ.

ಮಕರ: ಸಂಗಾತಿಯಿಂದ ಲಾಭ, ಆಕಸ್ಮಿಕ ಉದ್ಯೋಗ ಪ್ರಾಪ್ತಿ, ಅಧಿಕ ದೇಹಾಲಸ್ಯ, ಗ್ಯಾಸ್ಟ್ರಿಕ್-ನರ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು.

ಕುಂಭ: ಉದ್ಯೋಗ ಸ್ಥಳದಲ್ಲಿ ನಿಂದನೆ, ಮಿತ್ರರಿಂದ ಕಿರಿಕಿರಿ, ಪ್ರೇಮ ವಿಚಾರದಲ್ಲಿ ಯಶಸ್ಸು, ಕುಟುಂಬದಲ್ಲಿ ಸಹಕಾರ, ಮೇಲಾಧಿಕಾರಿಗಳಿಂದ ಪ್ರಶಂಸೆ.

ಮೀನ: ದಾಂಪತ್ಯದಲ್ಲಿ ಕಲಹ, ಮೇಲಾಧಿಕಾರಿಗಳಿಂದ ತೊಂದರೆ, ರಾಜಕೀಯ ವ್ಯಕ್ತಿಗಳಿಂದ ಉದ್ಯೋಗಕ್ಕೆ ಕಂಟಕ, ಸ್ಥಿರಾಸ್ತಿ ತಗಾದೆ, ಕೋರ್ಟ್ ಮೊರೆ ಹೋಗುವ ಸಾಧ್ಯತೆ, ಹಿರಿಯರಿಂದ ಸಹಕಾರ.

Leave a Reply

Your email address will not be published. Required fields are marked *