Wednesday, 20th June 2018

Recent News

ದಿನಭವಿಷ್ಯ 28-09-2017

ಪಂಚಾಂಗ
ಶ್ರೀ ಹೇವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಶುಕ್ಲ ಪಕ್ಷ, ಅಷ್ಠಮಿ ತಿಥಿ,
ಗುರುವಾರ, ಮೂಲಾ ನಕ್ಷತ್ರ

ಶುಭ ಘಳಿಗೆ: ಮಧ್ಯಾಹ್ನ 12:00 ರಿಂದ 12:55
ಅಶುಭ ಘಳಿಗೆ: ಬೆಳಗ್ಗೆ 10:12 ರಿಂದ 11:06
ರಾಹುಕಾಲ: ಮಧ್ಯಾಹ್ನ 1:44 ರಿಂದ 3:14
ಗುಳಿಕಕಾಲ: ಬೆಳಗ್ಗೆ 9:13 ರಿಂದ 10:43
ಯಮಗಂಡಕಾಲ: ಬೆಳಗ್ಗೆ 6:12 ರಿಂದ 7:43
ದಿನ ವಿಶೇಷ: ದುರ್ಗಾಷ್ಠಮಿ

ಮೇಷ: ಸ್ತ್ರೀಯರಿಂದ ಶುಭ, ಸೈಟ್-ವಾಹನ ಖರೀದಿಯೋಗ, ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ, ವಿವಾಹ ಭಾಗ್ಯ ಪ್ರಾಪ್ತಿ.

ವೃಷಭ: ವ್ಯಾಪಾರಿಗಳಿಗೆ ಅನುಕೂಲ, ಕಲಾವಿದರು-ಪತ್ರಕರ್ತರಿಗೆ ಅವಕಾಶ, ಆಧ್ಯಾತ್ಮಿಕ ಕ್ಷೇತ್ರದವರಿಗೆ ಅನುಕೂಲ, ಅಧಿಕ ಸಂಪಾದನೆ.

ಮಿಥುನ: ಪ್ರೀತಿ-ಪ್ರೇಮ ವಿಚಾರದಲ್ಲಿ ಯಶಸ್ಸು, ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಹಣಕಾಸು ವಿಚಾರದಲ್ಲಿ ಎಚ್ಚರ, ಮೋಜು ಮಸ್ತಿಗಾಗಿ ಖರ್ಚು.

ಕಟಕ: ದಾಂಪತ್ಯದಲ್ಲಿ ಸಂತಸ, ಬ್ಯಾಂಕಿನಿಂದ ಸಾಲ ಸೌಲಭ್ಯ, ತಂದೆ ಮಕ್ಕಳಲ್ಲಿ ಮನಃಸ್ತಾಪ, ನೆಮ್ಮದಿ ಇಲ್ಲದ ಜೀವನ.

ಸಿಂಹ: ಸಹೋದರಿಯಿಂದ ಲಾಭ, ಆತ್ಮೀಯ ಮಿತ್ರರಿಂದ ಪ್ರೇಮದ ಪ್ರಸ್ತಾವನೆ, ನಾನಾ ಕ್ಷೇತ್ರದಲ್ಲಿ ಉದ್ಯೋಗಾವಕಾಶ ಪ್ರಾಪ್ತಿ.

ಕನ್ಯಾ: ಸೈಟ್-ವಾಹನ ಮಾರಾಟದಿಂದ ಧನಾಗಮನ, ಐಷಾರಾಮಿ ಜೀವನಕ್ಕೆ ಮನಸ್ಸು, ಮಿತ್ರರಿಂದ ಸಂತಸ, ಮಾನಸಿಕ ನೆಮ್ಮದಿ, ಆಕಸ್ಮಿಕ ಅನುಕೂಲ.

ತುಲಾ: ಆಕಸ್ಮಿಕ ಸಂಕಷ್ಟಕ್ಕೆ ಸಿಲುಕುವಿರಿ, ವೃತ್ತಿಪರರಿಗೆ ಅನುಕೂಲ, ಉದ್ಯೋಗ ಬದಲಾವಣೆ, ಉತ್ತಮ ಉದ್ಯೋಗ ಪ್ರಾಪ್ತಿ.

ವೃಶ್ಚಿಕ: ಆರ್ಥಿಕ ಪರಿಸ್ಥಿತಿ ಚೇತರಿಕೆ, ಕೌಟುಂಬಿಕ ಸಮಸ್ಯೆ ಬಗೆಹರಿಯವುದು, ಆಕಸ್ಮಿಕ ವಿವಾಹ ಯೋಗ, ದುಶ್ಚಟ, ಮೋಜು-ಮಸ್ತಿಗಾಗಿ ಖರ್ಚು.

ಧನಸ್ಸು: ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸ್ನೇಹಿತರಿಂದ ಸಾಲ ಮಾಡುವಿರಿ, ಮಹಿಳಾ ಶತ್ರುಗಳಿಂದ ಕಾಟ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಪ್ರೇಮ ವಿಚಾರವಾಗಿ ಮನೆಯಿಂದ ದೂರ ಉಳಿಯುವ ಚಿಂತೆ, ಉದ್ಯೋಗದಲ್ಲಿ ಬಡ್ತಿ, ಉದ್ಯೋಗ ನಿಮಿತ್ತ ಪ್ರಯಾಣ.

ಕುಂಭ: ಹೆಣ್ಣು ಮಕ್ಕಳಿಂದ ಹಣಕಾಸು ನೆರವು, ಋಣ-ರೋಗ ಬಾಧೆಯಿಂದ ಮುಕ್ತಿ ಸಾಧ್ಯತೆ, ಸಹೋದರಿಯೊಂದಿಗೆ ಶತ್ರುತ್ವ.

ಮೀನ: ಕೆಲಸ ಕಾರ್ಯಗಳಲ್ಲಿ ಜಯ, ಸ್ಥಿರಾಸ್ತಿ ವಿಚಾರದಲ್ಲಿ ಅನುಕೂಲ, ಕೋರ್ಟ್ ಕೇಸ್‍ಗಳಲ್ಲಿ ಜಯ, ಉದ್ಯೋಗ ಸ್ಥಳದಲ್ಲಿ ಉತ್ತಮ ಹೆಸರು.

Leave a Reply

Your email address will not be published. Required fields are marked *