Friday, 25th May 2018

Recent News

ಯುವಕ, ಯುವತಿಯನ್ನ ನಗ್ನವಾಗಿ ಮೆರವಣಿಗೆ ಮಾಡಿದ ಗ್ರಾಮಸ್ಥರು- ವಿಡಿಯೋ ವೈರಲ್ ಆದ ಬಳಿಕ ಕೇಸ್ ದಾಖಲು

ಜೈಪುರ: ಗ್ರಾಮದಿಂದ ಓಡಿಹೋಗಿದ್ದ ಕಾರಣಕ್ಕೆ ಯುವಕ ಹಾಗೂ ಯುವತಿಯನ್ನು ಅಮಾನವೀಯವಾಗಿ ಥಳಿಸಿ, ಅವರನ್ನ ನಗ್ನವಾಗಿ ಮೆರವಣಿಗೆ ಮಾಡಿಸಿದ ಘಟನೆ ರಾಜಸ್ಥಾನದ ಗ್ರಾಮವೊಂದರಲ್ಲಿ ನಡೆದಿದೆ.

20 ವರ್ಷದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಕೋಲಿನಿಂದ ಅಮಾನವೀಯವಾಗಿ ಥಳಿಸಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆದ ನಂತರ ಪೊಲೀಸರು ಯುವಕ, ಯುವತಿಯ ತಂದೆ ಸೇರಿದಂತೆ ಐವರನ್ನ ಬಂಧಿಸಿ ಎಫ್‍ಐಆರ್ ದಾಖಲಿಸಿದ್ದಾರೆ. ಅಲ್ಲದೆ ಘಟನೆಗೆ ಸಂಬಂಧಿಸಿದಂತೆ 4 ಜನರನ್ನ ವಶಕ್ಕೆ ಪಡೆದಿದ್ದಾರೆ.

ಹಿರಿಯ ಅಧಿಕಾರಿ ಅನಂದ್ ಶರ್ಮಾ ಅವರು ವಿಡಿಯೋ ನೋಡಿದ ನಂತರ ಈ ಘಟನೆ ಬಗ್ಗೆ ಮಾಹಿತಿ ಪಡೆದು ಕ್ರಮಕ್ಕೆ ಮುಂದಾದ್ರು ಎಂದು ಪೊಲೀಸರು ಹೇಳಿದ್ದಾರೆ. ಬನ್ಸ್ವಾರಾ ಜಿಲ್ಲೆಯ ಈ ಗ್ರಾಮದಿಂದ ಯಾರೊಬ್ಬರೂ ಘಟನೆಯ ಬಗ್ಗೆ ದೂರು ದಾಖಲಿಸಿರಲಿಲ್ಲ. ಪೊಲೀಸರಿಗೆ ದೂರು ನಿಡುವುದಿಲ್ಲ ಎಂದು ಯುವಕ, ಯುವತಿಯಿಂದ ಮುಚ್ಚಳಿಕೆಗೆ ಸಹಿ ಹಾಕಿಸಿಕೊಂಡಿದ್ದರು ಎಂದು ವರದಿಯಾಗಿದೆ. ಬಂಧಿತರ ಮೇಲೆ ಕೊಲೆ ಯತ್ನ, ಬಂಧನ ಹಾಗೂ ಅತ್ಯಾಚಾರ ಆರೋಪಗಳಡಿ ಪ್ರಕರಣ ದಾಖಲಾಗಿದೆ.

ನಾವು ಯುವಕನನ್ನು ಪೊಲೀಸ್ ಠಾಣೆಗೆ ಕರೆತಂದು ಸಮಾಧಾನಪಡಿಸಿದೆವು. ಆಗ ಅವರು ನಡೆದ ಘಟನೆಯನ್ನು ವಿವರಿಸಿದರು. ಯುವತಿಯನ್ನ ಬೇರೋಬ್ಬರೊಂದಿಗೆ ಮದುವೆ ಮಾಡಿಸಲಾಗಿತ್ತು. ಲಿಮ್ತಾನ್ ಎಂಬ ಗ್ರಾಮದಲ್ಲಿ ಬಂಧನದಲ್ಲಿಸಿಕೊಂಡಿದ್ದ ಆ ಯುವತಿಯನ್ನು ರಕ್ಷಣೆ ಮಾಡಲಾಗಿದೆ ಎಂದು ಪೊಲೀಸ್ ಅಧಿಕಾರಿ ಶರ್ಮಾ ತಿಳಿಸಿದ್ದಾರೆ.

ಮಾರ್ಚ್ 22 ರಂದು ಈ ಜೋಡಿ ಗ್ರಾಮದಿಂದ ಗುಜರಾತ್‍ಗೆ ಓಡಿಹೋಗಿದ್ದರು. ಇವರು ಬುಡಕಟ್ಟು ಸಮುದಾಯವೊಂದಕ್ಕೆ ಸೇರಿದವರಾಗಿದ್ದು ಇಬ್ಬರ ಮಧ್ಯೆ ಸೋದರ ಸಂಬಂಧವಿದ್ದ ಕಾರಣ ಇವರ ಪ್ರೀತಿಗೆ ವಿರೋಧವಿತ್ತು. ಹೀಗಾಗಿ ಗ್ರಾಮ ಬಿಟ್ಟು ಓಡಿಹೋಗಿದ್ದ ಇವರನ್ನು ಪತ್ತೆಹಚ್ಚಿ ಗ್ರಾಮಕ್ಕೆ ವಾಪಸ್ ಕರೆತಂದು ಥಳಿಸಿ, ಸಾರ್ವಜನಿಕವಾಗಿ ಅವಮಾನಿಸಲಾಗಿದೆ.

ಮೊದಲು ನನ್ನನ್ನು, ನಂತರ ಇಬ್ಬರನ್ನೂ ಕೋಲು ಹಾಗೂ ರಾಡ್‍ಗಳಿಂದ ಹೊಡೆದರು. ನಂತರ ನಗ್ನವಾಗಿ ಮೆರವಣಿಗೆ ಮಾಡಿಸಿದ್ರು. ಅಲ್ಲಿ ನೆರೆದಿದ್ದ ಜನ ಇದನ್ನ ಮೊಬೈಲ್‍ನಲ್ಲಿ ವಿಡಿಯೋ ಮಾಡಿದ್ರು. ಜನರ ಗುಂಪಿನಲ್ಲಿ ಇಬ್ಬರ ತಂದೆಯರೂ ಇದ್ರು ಎಂದು ಥಳಿತಕ್ಕೊಳಗಾದ 21 ವರ್ಷದ ಯುವಕ ಪೊಲೀಸರಿಗೆ ತಿಳಿಸಿದ್ದಾರೆ.

ಏಪ್ರಿಲ್ 17ರಂದು ಯುವತಿಯನ್ನು ಬಲವಂತವಾಗಿ ಹತ್ತಿರದ ಗ್ರಾಮವೊಂದರ ವ್ಯಕ್ತಿಯ ಜೊತೆ ಮದುವೆ ಮಾಡಿಸಲಾಗಿದೆ. ಪೊಲೀಸರು ಯುವತಿಯನ್ನು ಏಪ್ರಿಲ್ 18ರಂದು ರಕ್ಷಿಸಿದ್ದಾರೆ. ನಂತರ ಆಕೆಗೆ ಥಳಿತದಿಂದಾಗಿದ್ದ ಗಾಯಗಳಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Leave a Reply

Your email address will not be published. Required fields are marked *