ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಭ್ರಷ್ಟಾಚಾರ- ಲೋಕಾಯುಕ್ತ, ಸದನ ಸಮಿತಿ ತನಿಖೆಯಲ್ಲಿ ಸಾಬೀತಾದ್ರೂ ಕ್ರಮ ಇಲ್ಲ

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕ ತಳವಾರ್ ಅಧಿಕಾರವಧಿಯಲ್ಲಿ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿರುವುದು ಸಾಕ್ಷಿ ಸಮೇತ ಸಾಬೀತಾಗಿದ್ರು ಈವರೆಗೂ ಸರ್ಕಾರ ಕ್ರಮ ತೆಗೆದುಕೊಳ್ಳದೆ ರಕ್ಷಣೆಗೆ ನಿಂತಿದೆ ಎನ್ನುವ ಮಾತು ಕೇಳಿ ಬಂದಿದೆ.

ತಳವಾರ್ ಮೇಲಿರುವ ಆರೋಪಗಳು:
ಆರೋಪ 1– ಸೋಲಾರ್ ಲ್ಯಾಂಪ್ ಮತ್ತು ಸ್ಟ್ರೀಟ್ ಲೈಟ್ ಅವ್ಯವಹಾರ 2 ಕೋಟಿ: 40 ಪಾಲಿಟೆಕ್ನಿಕ್ ಕಾಲೇಜುಗಳಿಗೆ ಹಾಗೂ ಹಾಸ್ಟೆಲ್‍ಗಳಲ್ಲಿ ಅಳವಡಿಸಲು 35 ಲೈಟು ಹಾಗೂ 15 ರಂತೆ ಸ್ಟ್ರೀಟ್‍ಲೈಟ್ ಅಳವಡಿಸಲಾಗಿತ್ತು. ಆದ್ರೆ ಒಂದು ಯುನಿಟ್‍ನಲ್ಲಿ ಇರಬೇಕಾದ ಸೋಲಾರ್ ಪ್ಲೇಟ್, ಲೈಟ್‍ಗಳಲ್ಲಿ ಅಕ್ರಮ ನಡೆದಿದೆ ಅನ್ನೋದು ಆರೋಪ.

ಆರೋಪ 2 – 7 ಆರ್ಮ್ ಲ್ಯಾಬ್ ಕಿಟ್ ಅವ್ಯವಹಾರ 3 ಕೋಟಿ: 81 ಪಾಲಿಟೆಕ್ನಿಕ್ ಕಾಲೇಜುಗಳಿಗೆ ಆರ್ಮ್ ಲ್ಯಾಬ್ ಕಿಟ್‍ಗಳನ್ನ ಖರೀದಿ ಮಾಡಲಾಗಿತ್ತು. ಮಾರುಕಟ್ಟೆ ಬೆಲೆ ಒಂದು ಯುನಿಟ್‍ಗೆ 9.500 ರೂಪಾಯಿ ಇದ್ರು ತಾಂತ್ರಿಕ ಶಿಕ್ಷಣ ಇಲಾಖೆ ಮಾತ್ರ ಒಂದು ಯುನಿಟ್‍ಗೆ 36 ಸಾವಿರ ರೂಪಾಯಿ ನೀಡಿ ಖರೀದಿ ಮಾಡಿದ್ದು, ಸುಮಾರು 2.5 ಕೋಟಿ ಅವ್ಯವಹಾರವಾಗಿದೆ ಅನ್ನೋದು ಎರಡನೇ ಆರೋಪ.

ಆರೋಪ 3 – ಎಲೆಕ್ಟ್ರಾನಿಕ್ ಏರ್ ಪ್ಯೂರಿಫೈರ್ & ಸ್ಪೀಡ್ ಕಂಟ್ರೋಲ್ ಆಫ್ ಮೋಟಾರ್ಸ್ ಅವ್ಯವಹಾರ 1 ಕೋಟಿ: 81 ಪಾಲಿಟೆಕ್ನಿಕ್ ಕಾಲೇಜುಗಳಿಗೆ ಎಲೆಕ್ಟ್ರಾನಿಕ್ ಏರ್ ಪ್ಯೂರಿಫೈರ್ ಖರೀದಿ ಮಾಡಲಾಗಿದೆ. ಮಾರುಕಟ್ಟೆ ಬೆಲೆ 1 ರಿಂದ 2 ಸಾವಿರ ಇದ್ರು 9,900 ರೂಪಾಯಿಗಳಂತೆ ಖರೀದಿ ಮಾಡಿರೋದು ಅನುಮಾನಕ್ಕೆ ಕಾರಣ. ಇನ್ನು ಸ್ಪೀಡ್ ಕಂಟ್ರೋಲ್ ಆಫ್ ಮೋಟಾರ್ಸ್ ಖರೀದಿಯಲ್ಲೂ ಅವ್ಯವಹಾರ ನಡೆದಿದ್ದು, ಇದೆಲ್ಲದ್ರ ಮೊತ್ತ 1 ಕೋಟಿ ರೂಪಾಯಿಗೂ ಹೆಚ್ಚು.

ತಳವಾರ್ ಮೇಲಿನ ಈ ಎಲ್ಲಾ ಆರೋಪಗಳ ಕುರಿತು ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಿದೆ. ತನಿಖೆಯಲ್ಲಿ ತಳವಾರ್ ಮೇಲಿನ ಆರೋಪಗಳು ಸಾಬೀತಾಗಿದೆ. ನಿಯಮಗಳನ್ನ ಮೀರಿ ಖರೀದಿ ಮಾಡಿರುವ ಅಂಶವೂ ಬಹಿರಂಗವಾಗಿದೆ. ಲೋಕಾಯುಕ್ತ ಮಾತ್ರವಲ್ಲದೆ ವಿಧಾನ ಪರಿಷತ್ ಸದನ ಸಮಿತಿಯೂ ಕೂಡ ಈ ಬಗ್ಗೆ ತನಿಖೆ ನಡೆಸಿದ್ದು, ಅಲ್ಲೂ ಆರೋಪ ಸಾಬೀತಾಗಿದೆ. ತಳವಾರ್ ಮೇಲೆ ಕ್ರಮ ತೆಗೆದುಕೊಳ್ಳಿ ಅಂತ ಸಮಿತಿ ವರದಿ ನೀಡಿದೆ. ಆದ್ರೂ ಯಾವುದೇ ಕ್ರಮ ಆಗಿಲ್ಲ.

ಇಷ್ಟೆಲ್ಲ ಆದ್ರೂ ನಿರ್ದೇಶಕ ತಳವಾರ್ ಮಾತ್ರ ನನ್ನದೇನು ತಪ್ಪಿಲ್ಲ. ನನ್ನ ವಿರೋಧಿಗಳು ಮಾಡುತ್ತಿರೋ ಷಡ್ಯಂತ್ರ ಅಂತಿದ್ದಾರೆ.

You might also like More from author

Leave A Reply

Your email address will not be published.

badge