Sunday, 24th June 2018

Recent News

ಅಡುಗೆ ಎಣ್ಣೆ ಟ್ಯಾಂಕರ್ ಪಲ್ಟಿ-ಕ್ಯಾನ್, ಬಾಟಲ್, ಡ್ರಮ್‍ ನಲ್ಲಿ ಎಣ್ಣೆ ತುಂಬಿಕೊಂಡ ಸ್ಥಳೀಯರು

ಬಳ್ಳಾರಿ: ಜಿಲ್ಲೆಯ ಕೂಡ್ಲಗಿ ತಾಲೂಕಿನ ಇಮ್ಮಡಾಪುರ ಗ್ರಾಮದ ಬಳಿ ಅಡುಗೆ ಎಣ್ಣೆ ಸಾಗಿಸುತ್ತಿದ್ದ ಟ್ಯಾಂಕರ್ ಪಲ್ಟಿಯಾಗಿದೆ. ಇದೇ ಅವಕಾಶವೆಂದು ಸ್ಥಳೀಯರು ಕ್ಯಾನ್, ವಾಟರ್ ಬಾಟಲ್, ದೊಡ್ಡ ಡ್ರಮ್‍ನಲ್ಲಿ ಎಣ್ಣೆ ತುಂಬಿಕೊಂಡು ಹೋಗಿದ್ದಾರೆ.

ಟ್ಯಾಂಕರ್ ಗುಜರಾತಿನಿಂದ ತಮಿಳುನಾಡು ಕಡೆ ತೆರಳುತ್ತಿತ್ತು. ಈ ವೇಳೆ ಇಮ್ಮಡಾಪುರ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿ ಟ್ಯಾಂಕರ್ ಪಲ್ಟಿಯಾಗಿದೆ. ವಿಷಯ ತಿಳಿದು ಪೊಲೀಸರು ಕ್ರೇನ್ ಮೂಲಕ ಟ್ಯಾಂಕರ್ ಎತ್ತುವ ಕಾಯ ಮಾಡುತ್ತಿದ್ದರೂ, ಸ್ಥಳೀಯರು ತಾ ಮುಂದು ತಾನು ಎಂದು ಎಣ್ಣೆ ತುಂಬಿಕೊಳ್ಳುವದರಲ್ಲಿ ಬ್ಯುಸಿಯಾಗಿದ್ದರು.

ಟ್ಯಾಂಕರ್ ಎತ್ತಲು ತೊಂದರೆ ಮಾಡುತ್ತಿದ್ದ ಸ್ಥಳೀಯರನ್ನು ಚದುರಿಸಲು ಪೊಲೀಸರು ಲಾಠಿ ಚಾರ್ಜ್ ಸಹ ಮಾಡಿದ್ದಾರೆ. 30 ಸಾವಿರ ಲೀಟರ್ ಸಾಮರ್ಥ್ಯ ಟ್ಯಾಂಕರ್ ನಲ್ಲಿ ಸುಮಾರು 20 ಸಾವಿರ ಲೀಟರ್ ಎಣ್ಣೆ ಪೋಲಾಗಿದೆ ಎಂದು ಹೇಳಲಾಗಿದೆ. ಈ ಸಂಬಂಧ ಖಾನಾವಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದೇ ಜೂನ್ ನಲ್ಲಿ ಪಾಕಿಸ್ತಾನದಲ್ಲಿ ತೈಲ ಟ್ಯಾಂಕರ್ ಪಲ್ಟಿಯಾಗಿ ಬಿದ್ದಿತ್ತು. ತೈಲ ತುಂಬಿಸಿಕೊಳ್ಳಲು ಜನರು ಮುಂದಾಗುತ್ತಿದ್ದ ವೇಳೆ ಟ್ಯಾಂಕರ್ ಬೆಂಕಿ ಹೊತ್ತಿಕೊಂಡ ಪರಿಣಾಮ ಸುಮಾರು 300 ಮಂದಿ ಮೃತಪಟ್ಟಿದ್ದರು.

Leave a Reply

Your email address will not be published. Required fields are marked *