ರಜೆ ಕೇಳಿದ ಕಂಡಕ್ಟರ್ ಕೈ ಮುರಿದ ಡಿಪೋ ಮ್ಯಾನೇಜರ್!

ಧಾರವಾಡ: ಒಂದು ದಿನ ರಜೆ ಕೇಳಿದಕ್ಕೆ ಡಿಪೋ ಮ್ಯಾನೇಜರ್ ಬಸ್‍ನ ನಿರ್ವಾಹಕರಿಗೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ನಗರದ ಕೆಎಸ್‍ಆರ್‍ಟಿಸಿ ಬಸ್ ಡಿಪೋ ಮ್ಯಾನೇಜರ್ ದೀಪಕ್ ಜಾಧವ್, ಕಂಡೆಕ್ಟರ್ ಮಂಜುನಾಥ್ ಹುಕ್ಕೇರಿ ಎಂಬವರಿಗೆ ಹಲ್ಲೆ ಮಾಡಿದ್ದಾರೆ. ಲಾಠಿಯಿಂದ ಹೊಡೆದಿದ್ದರಿಂದ ಮಂಜುನಾಥ್ ಅವರ ಕೈ ಮುರಿದಿದೆ. ಸದ್ಯ ಮಂಜುನಾಥ್ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಮಂಜುನಾಥ್ ಅವರ ಮೇಲಿನ ಹಲ್ಲೆಯನ್ನು ಖಂಡಿಸಿರುವ ಡಿಪೋ ಕಾರ್ಮಿಕರು ಇಂದು ಎಲ್ಲಾ ಬಸ್‍ಗಳನ್ನ ಬಂದ್ ಮಾಡಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ. ವಿಷಯ ತಿಳಿದ ಜಿಲ್ಲಾ ಉಸ್ತುವಾರಿ ಸಚಿವ ವಿನಯ್ ಕುಲಕರ್ಣಿ ಹಲ್ಲೆಗೊಳಗಾದ ಕಂಡಕ್ಟರ್ ಆರೋಗ್ಯ ವಿಚಾರಿಸಿದ್ರು. ಬಳಿಕ ಡಿಪೋ ಮ್ಯಾನೇಜರ್ ವಿರುದ್ಧ ಕ್ರಮ ಕೈಗೊಳ್ತಿವಿ ಹೋರಾಟ ಕೈಬಿಡಿ ಎಂದು ಮನವಿ ಮಾಡಿದ್ದಾರೆ.

ಈ ಸಂಬಂಧ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

You might also like More from author

Leave A Reply

Your email address will not be published.

badge