Wednesday, 20th June 2018

Recent News

ರಾಹುಲ್‍ಗೆ ದಲಿತ ಹೆಣ್ಣನ್ನು ಕೊಡಲು ಸಿದ್ಧ ಎಂಬ ಕಾರಜೋಳ ಹೇಳಿಕೆಗೆ ಸಿಎಂ ತಿರುಗೇಟು ನೀಡಿದ್ದು ಹೀಗೆ

ಮೈಸೂರು: ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ದಲಿತ ಹೆಣ್ಣು ಮಗಳನ್ನು ಕೊಡಲು ಸಿದ್ಧರಿದ್ದೇವೆ. ರಾಹುಲ್ ದಲಿತ ಹೆಣ್ಣು ಮಗಳನ್ನು ಮದುವೆಯಾಗಲು ಸಿದ್ಧರಿದ್ದಾರಾ? ಎಂದು ಬಿಜೆಪಿ ಹಿರಿಯ ನಾಯಕ ಗೋವಿಂದ ಕಾರಜೋಳ ನೀಡಿದ್ದ ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಮೈಸೂರಿನ ನಿವಾಸದಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ನೆಹರು ಕುಟುಂಬದಲ್ಲಿ ಆಗಿರುವಷ್ಟು ಅಂತರ್ಜಾತಿ ವಿವಾಹಗಳು ಬೇರಾವುದೇ ಕುಟುಂಬದಲ್ಲಿ ಆಗಿಲ್ಲ. ಇಂದಿರಾಗಾಂಧಿ, ರಾಜೀವ್ ಗಾಂಧೀಜಿಯವರು ಅನ್ಯಧರ್ಮೀಯರನ್ನು ಮದುವೆಯಾಗಿದ್ದಾರೆ. ಬಿಜೆಪಿ ನಾಯಕರಿಗೆ ಈ ಬಗ್ಗೆ ಪ್ರಶ್ನಿಸಲು ಯಾವುದೇ ರೀತಿಯ ನೈತಿಕತೆಯಿಲ್ಲ. ಈ ಕುರಿತು ಬಿಜೆಪಿ ನಾಯಕರಿಂದ ಪಾಠ ಕಲಿಯುವ ಅಗತ್ಯವಿಲ್ಲ ಎಂದು ಹರಿಹಾಯ್ದರು.

ಇದನ್ನೂ ಓದಿ: ರಾಹುಲ್‍ಗಾಂಧಿ ದಲಿತರನ್ನು ಮದ್ವೆಯಾಗ್ಲಿ, ಹೆಣ್ಣು ಕೊಡಲು ನಾವು ಸಿದ್ಧ- ಸಿಎಂಗೆ ಕಾರಜೋಳ ಸವಾಲ್

ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತ, ಕೆಪಿಸಿಸಿ ಕಾರ್ಯದರ್ಶಿ ವಿಜಯ ಮುಳಗುಂದ ನಿವಾಸದ ಮೇಲೆ ಐಟಿ ದಾಳಿ ಪ್ರಕರಣದ ಬಗ್ಗೆ ಮಾತನಾಡಿ, ಐಟಿಯವರಿಗೆ ಮಾಹಿತಿ ಇರುತ್ತೆ, ದಾಳಿ ಮಾಡಲಿ. ಅದಕ್ಕೆ ನಮ್ಮ ಅಭ್ಯಂತರ ಇಲ್ಲ. ಆದರೆ ಕಾಂಗ್ರೆಸ್ ನಾಯಕರನ್ನೇ ಹುಡುಕಿ ಹುಡುಕಿ ದಾಳಿ ನಡೆಸುತ್ತಿರುವುದು ಸರಿಯಲ್ಲ. ಚುನಾವಣಾ ಸಂದರ್ಭದಲ್ಲಿ ಇದು ಆತ್ಮಸ್ಥೈರ್ಯ ಕುಗ್ಗಿಸುವ ಯತ್ನ ಎಂದರು.

 

Leave a Reply

Your email address will not be published. Required fields are marked *