Thursday, 22nd March 2018

ನಿವೇದಿತಾ ಮನೆಗೆ ಚಂದನ್ ಸರ್ಪ್ರೈಸ್ ಭೇಟಿ- ನಿಮ್ಮಿಬ್ಬರ ಮದ್ವೆ ಯಾವಾಗ? ಎಂದು ಅಭಿಮಾನಿ ಕೇಳಿದ್ದಕ್ಕೆ ಹೀಗಂದ್ರು

ಬೆಂಗಳೂರು: ಬಿಗ್ ಬಾಸ್ ವಿಜೇತ ಚಂದನ್ ಶೆಟ್ಟಿ ಮೈಸೂರಿನಲ್ಲಿರುವ ನಿವೇದಿತಾ ಗೌಡ ಮನೆಗೆ ಭೇಟಿ ನೀಡಿ ಸರ್ಪ್ರೈಸ್ ನೀಡಿದ್ದಾರೆ. ಈ ವೇಳೆ ಚಂದನ್ ಶೆಟ್ಟಿ ಫೇಸ್ ಬುಕ್ ಲೈವ್ ಮಾಡಿದ್ದು, ಅಭಿಮಾನಿಯೊಬ್ಬರು ನಿಮ್ಮ ಮತ್ತು ನಿವೇದಿತಾ ಮದುವೆ ಯಾವಾಗ ಎಂದು ಹೇಳಿದ್ದಕ್ಕೆ ಪ್ರತಿಕ್ರಿಯಿಸಿದ್ದಾರೆ.

ನಾನು ಈಗ ನಿವೇದಿತಾ ಗೌಡ ಮನೆಯಲ್ಲಿದ್ದೇನೆ. ತುಂಬಾ ದಿನದಿಂದ ನಿವೇದಿತಾಳನ್ನು ಭೇಟಿಯಾಗಲು ಕಾಯುತ್ತಿದೆ. ಸುಮಾರು ಕಡೆ ಇಬ್ಬರೂ ಒಂದೇ ಜಾಗದಲ್ಲಿದ್ದರೂ ಭೇಟಿಯಾಗಲು ಸಾಧ್ಯವಾಗಲಿಲ್ಲ ಎಂದು ಚಂದನ್ ಹೇಳಿದ್ರು. ಈ ವೇಳೆ ನಿವೇದಿತಾ ಕೂಡ ಮಾತನಾಡಿ ಚಂದನ್ ನನ್ನ ಮನೆಗೆ ಬರುತ್ತಾರೆಂದು ನಾನು ಅಂದುಕೊಂಡಿರಲಿಲ್ಲ. ಆದರೆ ಈಗ ನನಗೆ ಖುಷಿಯಾಗಿದೆ. ಚಂದನ್ ನಮ್ಮ ಮನೆಗೆ ಬರುತ್ತಿರುವುದು ಮೊದಲೇ ಗೊತ್ತಿದ್ದರೆ ನಾನು ಕಾಲೇಜಿನಿಂದ ಬೇಗ ಬರುತ್ತಿದೆ ಎಂದು ಹೇಳಿದ್ರು.

ಈ ವೇಳೆ ಫೇಸ್ ಬುಕ್ ಲೈವ್‍ನಲ್ಲಿ ಅಭಿಮಾನಿಯೊಬ್ಬರು ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಪ್ರಶ್ನೆಗೆ, ನಾವಿಬ್ಬರೂ ಒಳ್ಳೆಯ ಸ್ನೇಹಿತರು. ಸದ್ಯ ನಮಗೆ ಆ ತರಹ ಯಾವುದೇ ಅಲೋಚನೆಗಳಿಲ್ಲ. ಬಿಗ್ ಬಾಸ್ ಮನೆಯಿಂದ ಹೊರಬಂದ ಮೇಲೆ ನಮ್ಮ ಶಾರ್ಟ್ ವಿಡಿಯೋಗಳನ್ನು ನೋಡಿದ್ದೀವಿ. ಆ ವಿಡಿಯೋ ನೋಡಿ ನಮಗೆ ಖುಷಿಯಾಯಿತು. ಆ ವಿಡಿಯೋಗಳಲ್ಲಿ ನಮ್ಮಿಬ್ಬರ ಸಂಭಾಷಣೆ ನೋಡಿ ಖುಷಿಯಾಯಿತು ಎಂದು ಚಂದನ್ ಹಾಗೂ ನಿವೇದಿತಾ ಅಭಿಮಾನಿ ಪ್ರಶ್ನೆಗೆ ಉತ್ತರಿಸಿದ್ದಾರೆ.

ಈ ಹಿಂದೆ ಚಂದನ್ ತಮ್ಮ ಗೆಳಯನಾದ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ಬಿಗ್ ಬಾಸ್ ಸೀಸನ್ ರನ್ನರ್ ಅಪ್ ದಿವಾಕರ್ ಮತ್ತು ಅವರ ಪತ್ನಿ ಮಮತಾ ಅವರ ವಿವಾಹ ವಾರ್ಷಿಕೋತ್ಸವ ಸಂಭ್ರಮವಿತ್ತು. ಈ ಸಂದರ್ಭದಲ್ಲಿ ಚಂದನ್ ದಿವಾಕರ್ ಮನೆಗೆ ಸರ್ಪ್ರೈಸ್ ಭೇಟಿ ನೀಡಿದ್ದರು. ವಿದ್ಯಾರಣ್ಯಪುರದಲ್ಲಿರುವ ದಿವಾಕರ್ ಮನೆಗೆ ಚಂದನ್ ಶೆಟ್ಟಿ ಭೇಟಿ ನೀಡಿ ದಿವಾಕರ್ ದಂಪತಿಗೆ ವಿವಾಹ ವಾರ್ಷಿಕೋತ್ಸವಕ್ಕೆ ಶುಭ ಹಾರೈಸಿದ್ದರು. ಈ ವೇಳೆ ದಿವಾಕರ್ ದಂಪತಿ, ಸಂಬಂಧಿಕರು ಮತ್ತು ಸ್ನೇಹಿತರ ಜೊತೆ ಕೇಕ್ ಕತ್ತರಿಸಿ ಚಂದನ್ ಸಂಭ್ರಮಿಸಿದರು.


Leave a Reply

Your email address will not be published. Required fields are marked *