‘ರೈಡ್ ಫಾರ್ ರೋಟರಿ’ ದೇಶ ಪರ್ಯಟನೆಗೆ ಜ.14ರಂದು ಮೈಸೂರಿನಲ್ಲಿ ಚಾಲನೆ

ಮೈಸೂರು: ರೋಟರಿ ಪ್ರತಿಷ್ಠಾನದ ಶತಮಾನೋತ್ಸವದ ಅಂಗವಾಗಿ “ರೈಡ್ ಫಾರ್ ರೋಟರಿ” ಎಂಬ ದೇಶ ಪರ್ಯಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಪರ್ಯಟನೆಯು ಕರ್ನಾಟಕ, ಗೋವ, ತಮಿಳುನಾಡು ರಾಜ್ಯಗಳಲ್ಲಿ 14 ದಿನಗಳ ನಡೆಯಲಿದ್ದು 25 ಮೋಟಾರು ಸವಾರರು ಪರ್ಯಟನೆ ನಡೆಸಲಿದ್ದಾರೆ.

ಈ ಪರ್ಯಟನೆಗೆ ಜನವರಿ 14ರ ಸಂಜೆ 4 ಗಂಟೆಗೆ ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ರೋಟರಿ ಜಿಲ್ಲಾ ಗವರ್ನರ್ ಡಾ.ಆರ್.ಎಸ್.ನಾಗರ್ಜುನ್ ಚಾಲನೆ ನೀಡಲಿದ್ದಾರೆ.

ಈ ಪರ್ಯಟನೆಯಲ್ಲಿ ಇಂಗ್ಲೆಂಡ್, ಸ್ವೀಡನ್, ಪೋರ್ಚುಗಲ್, ನ್ಯೂಜಿಲ್ಯಾಂಡ್, ಆಸ್ಟ್ರೇಲಿಯ ಮತ್ತು ಅಮೇರಿಕ ದೇಶಗಳಿಂದ 15ಕ್ಕೂ ಅಧಿಕ ಮಂದಿ ವಿದೇಶಿ ರೋಟರಿ ಸವಾರರು ಕೂಡ ಪಾಲ್ಗೊಳ್ಳಲಿದ್ದಾರೆ. ಈ ಪರ್ಯಟನೆಯೂ ಜನವರಿ 27 ರಂದು ತಮಿಳುನಾಡಿನ ಉದಕಮಂಡಲದಲ್ಲಿ ಮುಕ್ತಾಯಗೊಳ್ಳಲಿದೆ ಎಂದು ರೋಟರಿ ಮೈಸೂರು ಉತ್ತರ ವಲಯದ ಎಚ್.ಆರ್. ಕೇಶವ್ ತಿಳಿಸಿದ್ದಾರೆ.

LEAVE A REPLY