ವಾಷಿಂಗ್ಟನ್: 4 ವರ್ಷದ ಬಾಲಕಿಯೊಬ್ಬಳು ಮನೆಯ ಬಾಗಿಲು ತೆರೆಯೋಕೆ ಹೋದಾಗ ಜೋರಾಗಿ ಬೀಸಿದ ಗಾಳಿಗೆ ಬಾಗಿಲನ್ನ ಹಿಡಿದುಕೊಂಡೇ ಪಕ್ಕಕ್ಕೆ ತೂರಿಕೊಂಡು ಹೋದ ಘಟನೆ ಅಮೆರಿಕದ ಒಹಿಯೋದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗಿದೆ.
ಕಾರಿನಿಂದ ಇಳಿದ 4 ವರ್ಷದ ಮ್ಯಾಡಿಸನ್ ಗರ್ಡನರ್ ತನ್ನ ತಾಯಿಗಿಂತಲೂ ಮೊದಲೇ ಬಂದು ಮನೆಯ ಬಾಗಿಲನ್ನ ತೆರೆಯುತ್ತಾಳೆ. ಬಾಗಿಲು ತೆರೆದೊಡನೆ ಜೋರಾಗಿ ಗಾಳಿ ಬೀಸಿದ್ದು, ಬಾಗಿಲಿನ ಸಮೇತ ಪಕ್ಕಕ್ಕೆ ತೂರಿಕೊಂಡು ಹೋಗಿದ್ದಾಳೆ. ಆಕೆ ಬಗಿಲಿನ ಚಿಲಕ ಹಿಡಿದುಕೊಂಡಿದ್ದರಿಂದ ಬಾಗಿಲಲ್ಲೇ ನೇತಾಡಿದ್ದು ಯಾವುದೇ ಹೆಚ್ಚಿನ ಅಪಾಯವಾಗಿಲ್ಲ. ಬಳಿಕ ಮ್ಯಾಡಿಸನ್ ತಾಯಿ ಬ್ರಿಟನಿ ಓಡಿಬಂದು ಮಗಳನ್ನ ರಕ್ಷಿಸಿದ್ದಾರೆ. ಈ ಎಲ್ಲಾ ದೃಶ್ಯಾವಳಿ ಮನೆ ಮುಂದೆ ಹಾಕಿದ್ದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ 9 ಸೆಕೆಂಡ್‍ಗಳ ವೀಡಿಯೋವನ್ನ ಬ್ರಿಟನಿ ಫೇಸ್‍ಬುಕ್‍ನಲ್ಲಿ ಹಂಚಿಕೊಂಡಿದ್ದು ಈವರೆಗೆ 15 ಲಕ್ಷಕ್ಕೂ ಹೆಚ್ಚು ಬಾರಿ ವೀಕ್ಷಣೆಯಾಗಿದೆ. ಅಲ್ಲದೆ 15 ಸಾವಿರಕ್ಕೂ ಹೆಚ್ಚು ಬಾರಿ ಶೇರ್ ಆಗಿದೆ.
It sure is windy out there! �� All I hear is "mommm!" So I looked back and she's pinned between the house and the glass door. She is okay and laughing along with it!Jukin Media Verified Email: licensing@jukinmedia.com
Nai-post ni Brittany Gardner noong Miyerkules, Marso 8, 2017