ಶಾಲೆಗಳಲ್ಲಿ ಸಮವಸ್ತ್ರ, ಪುಸ್ತಕಗಳ ಮಾರಾಟ ಮಾಡದಂತೆ ಸಿಬಿಎಸ್‍ಇ ಸೂಚನೆ

ನವದೆಹಲಿ: ಶಾಲೆಗಳಲ್ಲಿ ಸಮವಸ್ತ್ರ, ಪುಸ್ತಕ ಹಾಗೂ ಇನ್ನಿತರ ಅಧ್ಯಯನ ಸಲಕರಣೆಗಳನ್ನ ಮಾರಾಟ ಮಾಡಬಾರದು ಎಂದು ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್(ಸಿಬಿಎಸ್‍ಇ) ಎಚ್ಚರಿಕೆ ನೀಡಿದೆ.

ಈ ಬಗ್ಗೆ ಸುತ್ತೋಲೆ ಹೊರಡಿಸಲಾಗಿದ್ದು, ಸಿಬಿಎಸ್‍ಇ ಅಡಿ ಬರುವ ಶಾಲೆಗಳಲ್ಲಿ ಪುಸ್ತಕ, ಸಮವಸ್ತ್ರ, ಶೂ, ಬ್ಯಾಗ್ ಹಾಗೂ ಅಧ್ಯಯನ ಸಲಕರಣೆಗಳನ್ನ ಮಾರಾಟ ಮಾಡಿದರೆ ನಿಮಯಗಳ ಉಲ್ಲಂಘನೆ ಮಾಡಿದಂತೆ ಎಂದು ಹೇಳಿದೆ.

ಶಾಲೆಗಳು ಸಮವಸ್ತ್ರ, ಪುಸ್ತಕಗಳ ಮಾರಾಟ ಮಾಡುವ ಮೂಲಕ ವಾಣಿಜ್ಯ ಚಟುವಟಿಕೆಯಲ್ಲಿ ತೊಡಗಿವೆ ಎಂದು ಪೋಷಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ¸ಸಿಬಿಎಸ್‍ಇ ಈ ಸೂಚನೆ ನೀಡಿದೆ.

ಸಿಬಿಎಸ್‍ಇ ನಿಯಮಗಳ ಪ್ರಕಾರ ಶಾಲೆಗಳು ಕಾರ್ಯ ನಿರ್ವಹಿಸುವುದು ಸಮುದಾಯದ ಸೇವೆಗಾಗಿಯೇ ಹೊರತು ವಾಣಿಜ್ಯ ಉದ್ದೇಶ್ಕಕಾಗಿ ಅಲ್ಲ. ಶೈಕ್ಷಣಿಕ ಸಂಸ್ಥೆಗಳು ವಾಣಿಜ್ಯ ಸಂಸ್ಥೆಗಳಲ್ಲ. ಗುಣಮಟ್ಟದ ಶಿಕ್ಷಣ ನೀಡುವುದು ಅವುಗಳ ಪ್ರಮುಖ ಉದ್ದೇಶ ಎಂದು ಸುತ್ತೋಲೆಯಲ್ಲಿ ಹೇಳಿದೆ.

ಅಲ್ಲದೆ ಎನ್‍ಸಿಇಆರ್‍ಟಿಯಿಂದ ಪ್ರಕಟವಾದ ಪಠ್ಯಪುಸ್ತಕಗಳನ್ನೇ ಬಳಸುವಂತೆ ನೀಡಲಾಗಿದ್ದ ನಿರ್ದೇಶನವನ್ನು ಸಿಬಿಎಸ್‍ಇ ಮತ್ತೊಮ್ಮೆ ಪುನರುಚ್ಛರಿಸಿದೆ.

You might also like More from author

Leave A Reply

Your email address will not be published.

badge