Tuesday, 27th June 2017

Recent News

4 days ago

ಜೀವಜಲಕ್ಕಾಗಿ ಗ್ರಾಮಸ್ಥರಲ್ಲಿ ಒಗ್ಗಟ್ಟು – ಸ್ವಂತ ಖರ್ಚಿನಲ್ಲಿ ಕೆರೆಗೆ ಕಾಯಕಲ್ಪ ನೀಡಿದ ಹಾವೇರಿಯ ರುದ್ರೇಶ್

ಹಾವೇರಿ: ರಾಜ್ಯದಲ್ಲಿ ಮಳೆ ಕೊರತೆ ಮತ್ತು ಬರಗಾಲಕ್ಕೆ ಕಾರಣ ಏನು ಅನ್ನೋದು ಎಲ್ಲರ ಅರಿವಿಗೆ ಬಂದಿದೆ. ಅದ್ರಲ್ಲೂ ರೈತಾಪಿ ವರ್ಗ ಭಾರೀ ಕಾಳಜಿ ವಹಿಸಿದೆ. ಹೀಗಾಗಿ, ರೈತರು, ಸ್ಥಳೀಯರು, ಸಂಘ ಸಂಸ್ಥೆಗಳು ಮೊದಲಿಗೆ ಹೂಳೆತ್ತುವ ಮೂಲಕ ಕೆರೆಗಳಿಗೆ ಕಾಯಕಲ್ಪ ನೀಡ್ತಿವೆ. ಹೀಗೆ ಹೂಳೆತ್ತಿರುವವರ ಪೈಕಿ ಇವತ್ತಿನ ಹಾವೇರಿಯ ರುದ್ರೇಶ್ ಸಹ ಒಬ್ರು. ವಿಶಾಲವಾದ ಕೆರೆಯಲ್ಲಿ ಬೆಳೆದಿರೋ ಮುಳ್ಳು-ಕಂಟಿಗಳು. ಹೂಳು ತೆಗೆಯುತ್ತಿರೋ ಜೆಸಿಬಿಗಳು. ಜೊತೆಗೆ ಕೆರೆಯನ್ನ ತೋರಿಸ್ತಿರೋ ಇವರೇ ಇವತ್ತಿನ ಪಬ್ಲಿಕ್ ಹೀರೋ. ಹೆಸರು ರುದ್ರೇಶ್ ಚಿನ್ನಣ್ಣವರ್. ಹಾವೇರಿ […]

6 days ago

ಸರ್ಕಾರಿ ಆಸ್ಪತ್ರೆಯಲ್ಲಿ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸ್ತಿರೋ ಹಾಸ್ಟೆಲ್ ಸೂಪರಿಂಟೆಂಡೆಂಟ್ ರಾಜೇಂದ್ರ ಚಕ್ರವರ್ತಿ

ಚಿತ್ರದುರ್ಗ: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸರ್ಕಾರಿ ಆಸ್ಪತ್ರೆಯನ್ನ ಮಾದರಿ ಆಸ್ಪತ್ರೆಯನ್ನಾಗಿ ಮಾಡ್ತಿದ್ದಾರೆ. ಆದರೆ ಆಸ್ಪತ್ರೆಯನ್ನ ಬದಲು ಮಾಡ್ತೀರೋದು ಡಾಕ್ಟರ್ ಅಲ್ಲ, ಬದಲಿಗೆ ಒಬ್ಬ ಸಾಮಾನ್ಯ ವ್ಯಕ್ತಿ. ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜು ಹಾಸ್ಟೆಲ್‍ನ ಸುಪರಿಂಟೆಂಡೆಂಟ್ ರಾಜೇಂದ್ರ ಚಕ್ರವರ್ತಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ರಾಜೇಂದ್ರ ಚಕ್ರವರ್ತಿ ಮತ್ತು ತಂಡ ಚಿತ್ರದುರ್ಗ ಸರ್ಕಾರಿ ಆಸ್ಪತ್ರೆಯನ್ನು ಮಾದರಿ...

ಮುಖದ ಮೇಲೆ ಜೇನು ಬಿಟ್ಟುಕೊಂಡರೂ ಕಚ್ಚಲ್ಲ- ಜೇನು ಸಾಕಾಣೆಯಲ್ಲಿ ಪರಿಣತಿ ಹೊಂದಿರೋ ಮಂಗಳೂರಿನ ಕುಮಾರ್

2 weeks ago

ಮಂಗಳೂರು: ಇವತ್ತಿನ ನಮ್ಮ ಪಬ್ಲಿಕ್ ಹೀರೋ ಸ್ವಲ್ಪ ಭಿನ್ನವಾಗಿದ್ದಾರೆ. ಸಾಮಾನ್ಯವಾಗಿ ಜೇನುನೋಣ ಅಂದ್ರೆ ಅಯ್ಯಯ್ಯೋ ಅಂತ ಓಡೋವ್ರೋ ಜಾಸ್ತಿ. ಆದರೆ ಮಂಗಳೂರಿನ ನಮ್ಮ ಪಬ್ಲಿಕ್ ಹೀರೋಗೆ ಜೇನುನೊಣಗಳು ಅಂದರೆ ಬಲು ಪ್ರೀತಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ನೆಟ್ಟಣ ಮುಡ್ನೂರು...

20 ವರ್ಷಗಳಿಂದ ಪರಿಸರ ರಕ್ಷಣೆ- ಸಸಿ ನೆಡೋದ್ರಲ್ಲೇ ಹಬ್ಬ, ಹುಟ್ಟುಹಬ್ಬದ ಖುಷಿ ಕಾಣುವ ಆನಂದ್ ಮೇಷ್ಟ್ರು

2 weeks ago

ಚಿಕ್ಕಬಳ್ಳಾಪುರ: ಮೇಷ್ಟ್ರುಗಳಿಗೆ ಶನಿವಾರ ಮತ್ತು ಭಾನುವಾರ ಬಂದ್ರೆ ಸಾಕು ಸ್ವಲ್ಪ ರಿಲ್ಯಾಕ್ಸ್ ಆಗ್ತಾರೆ. ಆದರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಮಾತ್ರ ಶನಿವಾರ ಮತ್ತು ಭಾನುವಾರ ಎರಡು ದಿನ ಬರೀ ಸಸಿ ನೆಡೋದ್ರಲ್ಲೇ ಖುಷಿ ಕಾಣ್ತಾರೆ. ಚಿಕ್ಕಬಳ್ಳಾಪುರ ನಗರದ ಸರ್ಕಾರಿ ಅನುದಾನಿತ...

ದುಬೈ ಕೆಲಸಕ್ಕೆ ಗುಡ್‍ಬೈ- ಬುದ್ಧಿಮಾಂದ್ಯ ಮಕ್ಕಳ ಪಾಲಿನ ತ್ರಿವಿಧ ದಾಸೋಹಿ ಕಾರವಾರದ ಸಿರಿಲ್

2 weeks ago

ಕಾರವಾರ: ಸಮಾಜ ಸೇವೆಗಾಗಿ ವಿದೇಶದಲ್ಲಿ ಸಿಕ್ಕಿರುವ ಕೆಲಸವನ್ನು ಬಿಟ್ಟು ತಾಯ್ನಾಡಿನಲ್ಲಿ ಬುದ್ಧಿಮಾಂದ್ಯರ ಸೇವೆ ಮಾಡುತ್ತಿರುವ ವ್ಯಕ್ತಿಯೇ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಅಳ್ವೆಕೋಡಿಯ ನಿವಾಸಿ ಸಿರಿಲ್ ಲೋಪಿಸ್ ನಮ್ಮ ಪಬ್ಲಿಕ್ ಹೀರೋ. ಬಡತನದಲ್ಲಿ ಹುಟ್ಟಿ ಕಷ್ಟಪಟ್ಟು...

ಬಡರೋಗಿಗಳು, ಅನಾಥರಿಗೆ ಆಶ್ರಯದಾತ ಹಾವೇರಿಯ ಅಬ್ದುಲ್ ಖಾದರ್

3 weeks ago

ಹಾವೇರಿ: ಅಪಘಾತಗಳಾದಾಗ ಜನ ಸಹಾಯಕ್ಕೆ ಬರದೆ ಮಾನವೀಯತೆ ಮರೆತುಬಿಟ್ಟಿದ್ದಾರೆ ಅನ್ನೋ ಸುದ್ದಿಯನ್ನೇ ನೋಡಿದ್ವಿ. ಆದ್ರೆ, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಹಾವೇರಿಯ ಅಬ್ದುಲ್ ಖಾದರ್ ಅವ್ರು ಇದನ್ನ ಸುಳ್ಳು ಮಾಡಿದ್ದಾರೆ. ಮಾನವೀಯತೆಗೆ ಮಿಡಿಯುವ ವ್ಯಕ್ತಿ ಅಬ್ದುಲ್ ಖಾದರ್ ಧಾರವಾಡ ಇವತ್ತಿನ ನಮ್ಮ...

ಗ್ರಾಮೀಣ ರಂಗಕಲೆ ಉಳಿಸಲು ಪಣ- ಉಚಿತವಾಗಿ ಹಾರ್ಮೋನಿಯಂ ಕಲಿಸ್ತಿರೋ ನೆಲಮಂಗಲದ ಗಂಗರಾಜು

3 weeks ago

ಬೆಂಗಳೂರು: ಪಾಶ್ಚಾತ್ಯ, ಅಬ್ಬರದ ಸಂಗೀತದ ಸಾಧನಗಳ ಮಧ್ಯೆ ನಶಿಸಿ ಹೋಗಿರುವ ಗ್ರಾಮೀಣ ರಂಗಕಲೆಯ ಸಾಧನಗಳಲ್ಲಿ ಹಾರ್ಮೋನಿಯಂ ಸಹ ಒಂದು. ಆದ್ರೆ ನೆಲಮಂಗಲದ ಇವತ್ತಿನ ಪಬ್ಲಿಕ್ ಹೀರೋ ಗಂಗರಾಜು ದೃಷ್ಟಿ ಸಮಸ್ಯೆ ಹೊಂದಿದ್ರೂ ಹಾರ್ಮೋನಿಯಂ ಮೂಲಕ ಗಮನ ಸೆಳೆದಿದ್ದಾರೆ. ರಾಗಬದ್ಧವಾಗಿ ಹಾರ್ಮೋನಿಯಂ ನುಡಿಸೋ...

ಮುಕ್ಕಾಲು ಇಂಚು ನೀರಲ್ಲೇ 5 ಎಕರೆಯಲ್ಲಿ ಕೃಷಿ ಮಾಡ್ತಿರೋ ಚಿತ್ರದುರ್ಗದ ದಯಾನಂದ್ ಮೂರ್ತಿ

3 weeks ago

ಚಿತ್ರದುರ್ಗ: ಈ ಬೇಸಿಗೆಯಲ್ಲಿ ನೀರಿಲ್ಲದೇ ಎಷ್ಟೋ ಅಡಿಕೆ, ತೆಂಗಿನ ತೋಟಗಳು ಒಣಗಿ ಹೋಗಿವೆ. ಆದರೆ ಚಿತ್ರದುರ್ಗದ ರೈತರೊಬ್ಬರು ಕೇವಲ ಮುಕ್ಕಾಲು ಇಂಚು ನೀರಿನಲ್ಲೇ ಸಮಗ್ರ ಕೃಷಿ ಮಾಡ್ತಿದ್ದಾರೆ. ಅಡಿಕೆ, ದಾಳಿಂಬೆ ಸೇರಿದಂತೆ ಸೊಂಪಾಗಿ ಮರ ಗಿಡಗಳನ್ನ ಬೆಳೆಸುತ್ತಿದ್ದಾರೆ. ಜಿಲ್ಲೆಯ ಚಳ್ಳಕೆರೆ ತಾಲೂಕಿನ...