Friday, 23rd February 2018

Recent News

12 months ago

ಆಮೆಯ ಹೊಟ್ಟೆಯಿಂದ 915 ನಾಣ್ಯಗಳನ್ನ ಹೊರತೆಗೆದ ವೈದ್ಯರು

ಬ್ಯಾಂಕಾಕ್: ಆಮೆಯೊಂದರ ಹೊಟ್ಟೆಯಿಂದ 915 ನಾಣ್ಯಗಳನ್ನು ಹೊರತೆಗೆಯುವಲ್ಲಿ ಥೈಲ್ಯಾಂಡ್‍ನ ಪಶುವೈದ್ಯರು ಯಶಸ್ವಿಯಾಗಿದ್ದಾರೆ. 25 ವರ್ಷದ ಓಮ್ಸಿನ್ ಹೆಸರಿನ ಆಮೆಗೆ ಸೋಮವಾರದಂದು 7 ಗಂಟೆಗಳ ಕಾಲ ಸರ್ಜರಿ ಮಾಡಿ 5 ಕೆಜಿ ತೂಕದ ನಾಣ್ಯಗಳನ್ನ ಹೊರತೆಗೆದಿದ್ದಾರೆ. ಆಮೆಯ ಮೇಲ್ಮೈನ ಚಿಪ್ಪಿನಲ್ಲಿ ಬಿರುಕು ಕಾಣಿಸಿಕೊಂಡಿದ್ದರಿಂದ ಅದನ್ನು ಪಶುವೈದ್ಯರ ಬಳಿ ತೆಗೆದುಕೊಂಡು ಹೋಗಲಾಗಿತ್ತು, ವೈದ್ಯರು ಆಮೆಯ ಎಕ್ಸ್‍ರೇ ತೆಗೆದು ನೋಡಿದಾಗ ಅದರ ಹೊಟ್ಟೆಯಲ್ಲಿ ನಾಣ್ಯಗಳಿದ್ದಿದ್ದು ಗೊತ್ತಾಯ್ತು. ಆಮೆಯ ಹೊಟ್ಟೆಯಲ್ಲಿ 915 ನಾಣ್ಯಗಳಿದ್ದವು. ಅವನ್ನು ಒಂದೊಂದಾಗಿ ಹೊರತೆಗೆದಿದ್ದೇವೆ ಎಂದು ತಿಳಿಸಿರೋ ವೈದ್ಯರು ಈ […]

12 months ago

ವಿಡಿಯೋ: 100ರ ಸಂಭ್ರಮದಲ್ಲಿ ಅಜ್ಜಿ ಸಖತ್ ಸ್ಟೆಪ್ ಹಾಕಿದ್ರು!

ವಾಷಿಂಗ್ಟನ್: ಹೆಚ್ಚಾಗಿ ವಯಸ್ಸಾದಂತೆ ಜನರು ಹುಟ್ಟುಹಬ್ಬ ಆಚರಿಸಲು ಹಿಂದೇಟು ಹಾಕ್ತಾರೆ. ಆದ್ರೆ ಇದಕ್ಕೆ ಅಪವಾದವೆಂಬಂತೆ ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಅಜ್ಜಿಯೊಬ್ಬರು 100 ವರ್ಷದ ಹುಟ್ಟುಹಬ್ಬ ಆಚರಿಸಿದ್ದಾರೆ. ಫೆಬ್ರವರಿ 26ರಂದು ಎಲಿಜಬೆತ್ ಕೊಕ್ರೆಲ್ ಎಂಬ ಅಜ್ಜಿ 100 ರ ಸಂಭ್ರಮದಲ್ಲಿ ತನ್ನ ಗೆಳೆಯರ ಹಾಗೂ ಕುಟುಂಬದವರ ಮುಂದೆ ಸಖತ್ ಸ್ಟೆಪ್ ಹಾಕುವ ಮೂಲಕ ಯುವಜನತೆಯನ್ನೇ ನಾಚುವಂತೆ ಮಾಡಿದ್ದಾರೆ. ಅಜ್ಜಿಯ...

ನವದಂಪತಿಯ ಜೊತೆ ಸಪ್ತಪದಿ ತುಳಿದ ನಾಯಿ!

12 months ago

ನವದೆಹಲಿ: ಮದುವೆಯ ವೇಳೆ ಮಾಲಕಿಯ ಜೊತೆ ಸಾಕುನಾಯಿಯೊಂದು ಸಪ್ತಪದಿ ತುಳಿಯುತ್ತಿರುವ ವಿಡಿಯೋ ಈಗ ವೈರಲ್ ಆಗಿದೆ. ದೆಹಲಿಯಲ್ಲಿ ಕೆಲ ದಿನಗಳ ಹಿಂದೆ ಮದುವೆ ನಡೆದಿತ್ತು. ಒಡತಿ ಮಾನಸಿಗೆ ಮದುವೆ ವೇಳೆಯೂ ತಾನು ಸಾಕಿದ್ದ ಸಾಕುನಾಯಿ ಸುಲ್ತಾನ್ ತನ್ನ ಜೊತೆ ಇರಬೇಕೆಂದು ಬಯಸಿದ್ದರು....

ವೀಡಿಯೋ: ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಹೊರಗೆಳೆದು ತಂದ ಪೊಲೀಸ್

12 months ago

ಬೀಜಿಂಗ್: ಪೊಲೀಸ್ ಅಧಿಕಾರಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಧರಧರನೆ ಹೊರಗೆಳೆದು ತಂದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇಲ್ಲಿನ ಜಿಯಾಂಗ್ಸು ಪ್ರದೇಶದ ಮನೆಯೊಂದರಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ...

ಬರಿಗೈಯ್ಯಲ್ಲೇ 1 ನಿಮಿಷದಲ್ಲಿ 124 ತೆಂಗಿನಕಾಯಿ ಒಡೆದು ವಿಶ್ವದಾಖಲೆ ನಿರ್ಮಿಸಿದ ಭಾರತೀಯ

12 months ago

ತಿರುವನಂತಪುರಂ: ಕೇರಳ ಮೂಲದ ವ್ಯಕ್ತಿಯೊಬ್ಬರು 1 ನಿಮಿಷದಲ್ಲಿ ಬರೋಬ್ಬರಿ 124 ತೆಂಗಿನಕಾಯಿಗಳನ್ನ ಒಡೆದು ಹೊಸ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ತ್ರಿಶೂರಿನ ಸೋಭಾ ಸಿಟಿ ಮಾಲ್‍ನಲ್ಲಿ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕೇರಳದ ಪೂಂಜರ್ ನಿವಾಸಿ ಅಭೀಷ್ ಪಿ ಡೊಮನಿಕ್ ಕೇವಲ ಒಂದು ನಿಮಿಷದಲ್ಲಿ...

ಏಕಾಏಕಿ ಶಾಪಿಂಗ್ ಸ್ಟೋರ್‍ನೊಳಗೆ ನುಗ್ಗಿದ ಕಾರ್: ಮುಂದೇನಾಯ್ತು? ಶಾಕಿಂಗ್ ವಿಡಿಯೋ ನೋಡಿ

1 year ago

ನ್ಯೂಯಾರ್ಕ್: ಕಾರೊಂದು ಏಕಾಏಕಿಯಾಗಿ ಶಾಪಿಂಗ್ ಸ್ಟೋರ್‍ನೊಳಗೆ ನುಗ್ಗಿದ್ದು, ಗ್ರಾಹಕರೊಬ್ಬರು ಪವಾಡ ಸದೃಶರಾಗಿ ಪಾರಾದ ಘಟನೆ ಅಮೆರಿಕಾದಲ್ಲಿ ನಡೆದಿದೆ. ಈ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನ್ಯೂಯಾರ್ಕ್‍ನ ಸ್ಟೋರ್‍ವೊಂದರಲ್ಲಿ ಗ್ರಾಹಕರೊಬ್ಬರು ಎರಡು ಕಪಾಟಿನ ಮಧ್ಯದಲ್ಲಿ ನಿಂತು...

ವೈರಲಾಯ್ತು ರಷ್ಯಾ ಮಾಡೆಲ್‍ನ ಭಯಾನಕ ಫೋಟೋ ಶೂಟ್..!

1 year ago

ಮಾಸ್ಕೋ: ದುಬೈನಲ್ಲಿರುವ ವಿಶ್ವದ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ರೂಪದರ್ಶಿಯೊಬ್ಬಳು ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 23 ವರ್ಷದ ವಿಕಿ ಒಡಿಂಕ್ಟೊವಾ ಎಂಬ ರಷ್ಯಾ ರೂಪದರ್ಶಿ ದುಬೈನಲ್ಲಿರುವ...

ವೀಡಿಯೋ: ಹೆಬ್ಬಾವು ನುಂಗಿದ್ದ ಟೆನ್ನಿಸ್ ಬಾಲ್ ಹೊರತೆಗೆದ್ರು!

1 year ago

ಸಿಡ್ನಿ: ಸಾಮಾನ್ಯವಾಗಿ ಹೆಬ್ಬಾವುಗಳು ಮೊಲ, ನಾಯಿ, ಕುರಿಯಂತಹ ಪ್ರಾಣಿಗಳನ್ನ ತಿಂದು ಅವುಗಳ ಹೊಟ್ಟೆ ಊದಿಕೊಂಡಿರೋದನ್ನ ನೋಡಿರ್ತೀರ. ಹಾಗೆ ಕೆಲವೊಮ್ಮೆ ಹೆಬ್ಬಾವುಗಳು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ನುಂಗಿಬಿಡುತ್ತವೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೆಬ್ಬಾವೊಂದರ ಬಾಯಿಯಿಂದ ಟೆನ್ನಿಸ್ ಬಾಲ್ ಹೊರತೆಗೆಯೋ ವೀಡಿಯೋ ಸಾಮಾಜಿಕ...