Tuesday, 23rd January 2018

Recent News

2 weeks ago

ಮಾಲ್‍ನಲ್ಲಿ ಪಟಾಕಿ ಸಿಡಿಸಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಕದ್ದರು: ವಿಡಿಯೋ ನೋಡಿ

ವಾಷಿಂಗ್ಟನ್: ಖತರ್ನಾಕ್ ಕಳ್ಳರು ಮಾಲ್‍ನಲ್ಲಿ ಪಟಾಕಿ ಸಿಡಿಸುವ ಮೂಲಕ ಸಿನಿಮೀಯ ರೀತಿಯಲ್ಲಿ 7 ಲಕ್ಷ ರೂ. ಮೌಲ್ಯದ ರೋಲೆಕ್ಸ್ ವಾಚ್ ಕಳ್ಳತನ ಮಾಡಿರೋ ಘಟನೆ ಅಮೆರಿಕದ ಫ್ಲೋರಿಡಾದಲ್ಲಿನ ಸಿಟಿ ಆಫ್ ಸನ್‍ರೈಸ್‍ನಲ್ಲಿ ನಡೆದಿದೆ. ಹೊಸ ವರ್ಷದ ಹಿಂದಿನ ದಿನ ಇಲ್ಲಿನ ಸಾಗ್ರಾಸ್ ಮಿಲ್ಸ್ ಮಾಲ್‍ನಲ್ಲಿ ಈ ಘಟನೆ ನಡೆದಿದೆ. ಪಟಾಕಿ ಶಬ್ದ ಕೇಳಿ ಅಲ್ಲಿದ್ದ ಜನ ಗುಂಡಿನ ದಾಳಿ ಎಂದುಕೊಂಡು ಗಾಬರಿಯಿಂದ ಅತ್ತಿತ್ತ ಓಡಿದ್ದಾರೆ. ಇದರ ಲಾಭ ಪಡೆದ ಕಳ್ಳರು ವಾಚ್‍ನೊಂದಿಗೆ ಪರಾರಿಯಾಗಿದ್ದಾರೆ. ಈ ಎಲ್ಲಾ ದೃಶ್ಯ […]

2 weeks ago

ವಿಡಿಯೋ: ಕಾರ್ ಡಿಕ್ಕಿಯಾಗಿ ನದಿಗೆ ಬಿದ್ದ ಬಸ್- ಹೀರೋ ಥರ ಬಂದು ಪ್ರಯಾಣಿಕರನ್ನ ಪಾರು ಮಾಡಿದ ಕ್ರೇನ್ ಚಾಲಕ

ಬೀಜಿಂಗ್: ಅಪಘಾತವಾಗಿ ಬಸ್ಸೊಂದು ನದಿಗೆ ಬಿದ್ದ ನಂತರ ಅದೇ ರಸ್ತೆಯಲ್ಲಿದ್ದ ಕ್ರೇನ್ ಚಾಲಕ ಪ್ರಯಾಣಿಕರನ್ನ ಪಾರು ಮಾಡಿರೋ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಜನವರಿ 3ರಂದು ಜಿಯಾಂಗ್ಸು ಪ್ರಾಂತ್ಯದ ಚಾಂಗ್‍ಝೌನಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ಮಾಧ್ಯಮವೊಂದು ಘಟನೆಯ ವಿಡಿಯೋವನ್ನ ಪೋಸ್ಟ್ ಮಾಡಿದೆ. ರಸ್ತೆಯಲ್ಲಿ ವೇಗವಾಗಿ ಬಂದ ಕಾರ್...

ಹೇರ್‍ಕಟ್‍ಗೆ ಹೋದ್ರೆ ಕಿವಿಗೆ ಕತ್ತರಿ ಹಾಕಿ ಈ ಅವಸ್ಥೆ ಮಾಡಿದ ಕ್ಷೌರಿಕ

4 weeks ago

ವಾಷಿಂಗ್ಟನ್: ಹೇರ್‍ಕಟ್‍ಗೆ ಅಂತ ಹೋದಾಗ ಕೆಲವೊಮ್ಮೆ ಕ್ಷೌರಿಕರು ಮಾಡಿದ ಹೇರ್‍ಕಟ್ ನಿಮಗೆ ಇಷ್ಟವಾಗಿಲ್ಲದಿರೋ ದಿನಗಳು ಇದ್ದೇ ಇರುತ್ತದೆ. ಆದ್ರೆ ಅಮೆರಿಕದ ವಿಸ್ಕಾನ್‍ಸಿನ್‍ನ ಈ ವ್ಯಕ್ತಿಗೆ ಆದ ಗತಿ ಅವೆಲ್ಲವನ್ನೂ ಮೀರಿಸುಂತದ್ದು. 22 ವರ್ಷದ ವ್ಯಕ್ತಿಯೊಬ್ಬರು ಕ್ರಿಸ್‍ಮಸ್‍ಗೆ ಅಂತ ಹೇರ್‍ಕಟ್ ಮಾಡಿಸಲು ಹೋಗಿದ್ದರು....

ಬರಿಗೈಯಿಂದ ಮಂಜುಗಟ್ಟಿದ ನೀರಿಗೆ ಹೊಡೆದು ಮಹಿಳೆಯ ರಕ್ಷಣೆ: ವೈರಲ್ ವಿಡಿಯೋ

4 weeks ago

ಬೀಜಿಂಗ್: ಮಂಜುಗಟ್ಟಿದ ನೀರಿನಲ್ಲಿ ಸಿಲುಕಿದ್ದ ಮಹಿಳೆಯನ್ನು ವ್ಯಕ್ತಿಯೊಬ್ಬರು ಚೀನಾದಲ್ಲಿ ರಕ್ಷಿಸಿದ್ದು ವಿಡಿಯೋ ವೈರಲ್ ಆಗಿದೆ. ಮಂಗಳವಾರ ಬೆಳಗ್ಗೆ ಉತ್ತರ ಚೀನಾದ ಹೆಬೈ ಪ್ರಾಂತ್ಯದಲ್ಲಿ ನಲ್ಲಿ ಈ ಘಟನೆ ನಡೆದಿದ್ದು, 54 ವರ್ಷದ ಶೀ ಲೀ ಎಂಬವರು ನದಿಗೆ ಜಾರಿ ಬಿದಿದ್ದಾರೆ. ಆಗ...

ತೊಟ್ಟಿಲು ತೂಗೋ ಮೂಲಕ 8 ದಿನದ ಮಗುವನ್ನು ನಿದ್ರೆ ಮಾಡಿಸುತ್ತೆ ಈ ಚಿಕ್ಕು- ವಿಡಿಯೋ

1 month ago

ಹಾಂಕಾಂಗ್: ಇತ್ತೀಚಿನ ದಿನಗಳಲ್ಲಿ ತಂದೆ-ತಾಯಿ ಇಬ್ಬರೂ ಕೆಲಸದಲ್ಲಿದ್ದರೆ ಮಗುವನ್ನು ನೋಡಿಕೊಳ್ಳಲು ಆಯಾಗಳನ್ನು ನೇಮಿಸುತ್ತಾರೆ. ಅಂತೆಯೇ ಹಾಂಕಾಂಗ್ ನಲ್ಲಿ ನಾಯಿಯೊಂದು ಮಗು ಜೋಪಾನವಾಗಿ ನೋಡಿಕೊಳ್ಳುತ್ತದೆ. ಹೌದು. 1 ವರ್ಷದ ಚಿಕ್ಕು 8 ದಿನದ ಕಂದಮ್ಮ ಲಿಯೋನಾಲ್ಡೋ ಮಲಗಿರುವಾಗ ತೊಟ್ಟಿಲು ತೂಗುವ ಮೂಲಕ ನಿದ್ರೆ...

ತನ್ನ ಬೈಕ್ ಮೇಲೆ ಕುಳಿತೇ ಮತ್ತೊಂದು ಬೈಕ್‍ನಲ್ಲಿ ಲಿಫ್ಟ್ ಪಡೆದ

1 month ago

ಮನಿಲಾ: ಬೈಕ್ ಅಥವಾ ಯಾವುದೇ ವಾಹನ ರಸ್ತೆ ಮಧ್ಯೆ ಕೆಟ್ಟು ಹೋದ್ರೆ ಬೇರೆ ವಾಹನಗಳಿಂದ ಲಿಫ್ಟ್ ಪಡೆಯೋದು ಕಾಮನ್. ಈ ವೇಳೆ ಕೆಟ್ಟು ಹೋದ ವಾಹನವನ್ನ ಲಾಕ್ ಮಾಡಿ ಅಲ್ಲೇ ಬಿಟ್ಟು ಲಿಫ್ಟ್ ಕೊಡಲು ಒಪ್ಪಿದವರ ವಾಹನ ಏರಿ ಹೋಗ್ತಾರೆ. ಆದ್ರೆ...

ವಿಡಿಯೋ: ಮಹಿಳಾ ಉದ್ಯೋಗಿಗಳು ಪರಸ್ಪರ ಕಪಾಳಕ್ಕೆ ಹೊಡೆಯುವಂತೆ ಶಿಕ್ಷೆ ನೀಡಿದ ಸಂಸ್ಥೆ

1 month ago

ಬೀಜಿಂಗ್: ಮಹಿಳಾ ಉದ್ಯೋಗಿಗಳು ಒಬ್ಬರಿಗೊಬ್ಬರು ಕಪಾಳಕ್ಕೆ ಹೊಡೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಇವರೆಲ್ಲರೂ ಚೀನಾದ ನಾಂಚಂಗ್ ಜಿನ್‍ಹುವಾಯಾನ್ ಮೈಯೇ ಎಂಬ ಸೌಂದರ್ಯವರ್ಧಕಗಳ ಸಂಸ್ಥೆಯಲ್ಲಿ ಕೆಲಸ ಮಾಡೋ ಉದ್ಯೋಗಿಗಳಾಗಿದ್ದು, ಈ ವರ್ಷ ಕಳಪೆ ಪ್ರದರ್ಶನ ತೋರಿದ್ದಾರೆ ಎನ್ನಲಾಗಿದೆ. ಹೀಗಾಗಿ ಇವರ ಬಾಸ್...

ವಿಡಿಯೋ ಗೇಮ್ ಆಡಿ ತನಗೆ ಗೊತ್ತಿಲ್ಲದೆ ಅಮ್ಮನ ಬ್ಯಾಂಕ್ ಅಕೌಂಟ್ ಖಾಲಿ ಮಾಡಿದ 14ರ ಬಾಲಕ

1 month ago

ಡಬ್ಲಿನ್: 14 ವರ್ಷದ ಬಾಲಕನೊಬ್ಬ ವಿಡಿಯೋ ಗೇಮ್ ಆಡಿ ತನಗೆ ಗೊತ್ತಿಲ್ಲದೆ ಅಮ್ಮನ ಬ್ಯಾಂಕ್ ಖಾತೆಯಲ್ಲಿದ್ದ ಹಣವನ್ನ ಖಾಲಿ ಮಾಡಿರೋ ಘಟನೆ ಐರ್ಲೆಂಡಿನಲ್ಲಿ ನಡೆದಿದೆ. ಇಲ್ಲಿನ ಕಾರ್ಕ್ ನಿವಾಸಿಯಾದ ಮಹಿಳೆ ಹಣ ವಿತ್‍ಡ್ರಾ ಮಾಡಲು ಹೋದಾಗ ಖಾತೆಯಲ್ಲಿ ಹಣ ಇಲ್ಲದಿರುವುದು ಗೊತ್ತಾಗಿ...