Monday, 16th October 2017

Recent News

8 months ago

ಇನ್ನು ಮುಂದೆ ರೌಡಿಗಳ ಆಕ್ರಮ ಆಸ್ತಿಯನ್ನು ಕಲೆ ಹಾಕಲಿದ್ದಾರೆ ಪೊಲೀಸರು

ಬೆಂಗಳೂರು: ಇಲ್ಲಿಯವರೆಗೆ ರೌಡಿ ಚಟುವಟಿಕೆಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೆವು. ಇನ್ನು ಮುಂದೆ ರೌಡಿಗಳ ಅಕ್ರಮ ಆಸ್ತಿಗಳನ್ನು ಕಲೆ ಹಾಕಲಾಗುವುದು ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಹೇಮಂತ್ ನಿಬಾಳ್ಕರ್ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಾರ್ವಜನಿಕರ ಹಿತಾಸಕ್ತಿ ಕಾಪಾಡುವುದು ನಮ್ಮ ಹೊಣೆ. ಕಾನೂನು ಸುವ್ಯವಸ್ಥೆ ವಿರುದ್ಧವಾಗಿದ್ದವರನ್ನು ಸುಮ್ಮನೇ ಬಿಡುವುದಿಲ್ಲ. ಸಾರ್ವಜನಿಕರು ಧೈರ್ಯವಾಗಿ ಮುಂದೆ ಬಂದು ದೂರು ನೀಡಿ. ಸ್ಥಳೀಯ ಠಾಣೆಗಳಿಗೆ ದೂರು ನೀಡಿ, ಇಲ್ಲವಾದಲ್ಲಿ ನಮ್ಮ ಬಳಿ ಬನ್ನಿ ಎಂದು ಅವರು ಹೇಳಿದರು. […]

8 months ago

ಸೌದಿ ಅರೇಬಿಯಾದಿಂದ 39 ಸಾವಿರ ಪಾಕ್ ಪ್ರಜೆಗಳ ಗಡೀಪಾರು

ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದಕ್ಕೆ ಸೌದಿ ಅರೇಬಿಯಾ 39 ಸಾವಿರ ಪಾಕಿಸ್ತಾನದ ಪ್ರಜೆಗಳನ್ನು ಗಡೀಪಾರು ಮಾಡಿದೆ. ವೀಸಾ ಉಲ್ಲಂಘಿಸಿದ್ದಕ್ಕೆ ಕಳೆದ ನಾಲ್ಕು ತಿಂಗಳಿನಲ್ಲಿ ಸುಮಾರು 39 ಸಾವಿರ ಪಾಕಿಸ್ತಾನ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಸೌದಿ ಅರೇಬಿಯಾದ ಭದ್ರತಾ ಮೂಲಗಳನ್ನು ಆಧಾರಿಸಿ ‘ಸೌದಿ ಗ್ಯಾಜೆಟ್’ ವರದಿ ಮಾಡಿದೆ. ಕೆಲ ಪಾಕಿಸ್ತಾನ ಪ್ರಜೆಗಳು ಇಸ್ಲಾಮಿಕ್...

ಫ್ಯಾಷನ್ ಇವೆಂಟ್ ಮ್ಯಾನೇಜರ್‍ನಿಂದ ಅಪ್ರಾಪ್ತೆ ಮೇಲೆ ರೇಪ್

8 months ago

ಬೆಂಗಳೂರು: ಫ್ಯಾಷನ್ ಇವೆಂಟ್ ಮ್ಯಾನೇಜರ್‍ನಿಂದ ಅಪ್ರಾಪ್ತೆ ಮೇಲೆ ಅತ್ಯಾಚಾರ ನಡೆದಿರೋ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಗದೀಶ್ ಬಂಧಿತ ಆರೋಪಿ. ಬೆಂಗಳೂರಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಮುಂಬೈ ಮೂಲದ 17 ವರ್ಷದ ಯುವತಿ ಪ್ರಗದೀಶ್‍ಗೆ ಫೇಸ್‍ಬುಕ್‍ನಲ್ಲಿ ಪರಿಚಯವಾಗಿದ್ದಳು. ಫೆಬ್ರವರಿ...

ಆಸ್ಪತ್ರೆಯಲ್ಲಿ 1 ಬಾರಿಯೂ ಜಯಲಲಿತಾ ಭೇಟಿಗೆ ಬಿಡಲಿಲ್ಲ: ಪನ್ನೀರ್ ಸೆಲ್ವಂ

8 months ago

– ಜಯಾ ಸಾವಿನ ಬಗ್ಗೆ ನ್ಯಾಯಾಂಗ ತನಿಖೆ ಆಗ್ಬೇಕು ಚೆನ್ನೈ: ತಮಿಳುನಾಡಿನ ರಾಜಕೀಯದಲ್ಲಿ ಕ್ಷಿಪ್ರ ಬೆಳವಣಿಗೆಗಳು ನಡೆಯುತ್ತಿವೆ. ಮಂಗಳವಾರ ರಾತ್ರಿ ಇದ್ದಕ್ಕಿದ್ದಂತೆ ಜಯಲಲಿತಾ ಸಮಾಧಿ ಬಳಿ ಧ್ಯಾನ ಮಗ್ನರಾಗಿದ್ದ ಪನ್ನೀರ್ ಸೆಲ್ವಂ ಶಶಿಕಲಾ ವಿರುದ್ಧ ತಿರುಗಿಬಿದದ್ದಿದ್ದಾರೆ. ಜಯಲಲಿತಾ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ...

ಯುವತಿ ಕಣ್ಣೆದುರೇ ಹೊಟ್ಟೆಗೆ ಚಾಕು ಚುಚ್ಚಿಕೊಂಡ ಯುವಕ

8 months ago

ಮಂಡ್ಯ: ಯುವತಿಯೊಬ್ಬಳು ತನ್ನ ಪ್ರೀತಿಯನ್ನ ನಿರಾಕರಿಸಿದಳು ಎಂಬ ಕಾರಣಕ್ಕೆ ಅವಳ ಎದುರೇ ಭಗ್ನ ಪ್ರೇಮಿ ತನ್ನ ಹೊಟ್ಟೆಗೆ ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದಿದೆ. ಹಾಸನ ಮೂಲದ 29 ವರ್ಷದ ಯುವಕ ಉಮೇಶ್ ಆತ್ಮಹತ್ಯೆಗೆ ಯತ್ನಿಸಿದ...

ಉತ್ತರ ಕರ್ನಾಟಕದಲ್ಲಿ 10 ರೂ. ಕಾಯಿನ್ ತಗೊಳ್ಳೋಕ್ಕೆ ಹೆದರ್ತಾರೆ ಜನ!

8 months ago

ಹುಬ್ಬಳ್ಳಿ: ನೋಟ್ ಬ್ಯಾನ್‍ನಿಂದ ಕಂಗೆಟ್ಟಿದ್ದ ಜನಕ್ಕೆ ಮತ್ತೊಂದು ಶಾಕ್ ಎದುರಾಗಿದೆ. 10 ರೂಪಾಯಿ ಕಾಯಿನ್ ಬ್ಯಾನ್ ಆಗಿದೆ ಎಂಬ ಸುಳ್ಳು ಸುದ್ದಿ ಹರಿದಾಡ್ತಿದ್ದು, ಇದ್ರಿಂದ ಉತ್ತರ ಕರ್ನಾಟಕದ ಜನ 10 ರೂ, ಕಾಯಿನ್ ಸ್ವೀಕರಿಸೋಕೆ ಹಿಂಜರಿಯುತ್ತಿದ್ದಾರೆ. ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ...

ಅಕ್ರಮ ಸಿಎಚ್ ಪೌಡರ್ ದಂಧೆ: ರಾಯಚೂರಿನಲ್ಲಿ ಸೇಂದಿಗೆ ದಾಸರಾದ ಚಿಕ್ಕಮಕ್ಕಳು

8 months ago

ರಾಯಚೂರು: ರಾಯಚೂರು ಜಿಲ್ಲೆಯಲ್ಲಿ ಸಾಮಾಜಿಕ ಪಿಡುಗಾಗಿ ಕಾಡುತ್ತಿರುವ ಅಕ್ರಮ ಸಿಎಚ್ ಪೌಡರ್ ಸೇಂದಿ ದಂಧೆಗೆ ಈಗ ಅಪ್ರಾಪ್ತರು ಬಲಿಯಾಗುತ್ತಿದ್ದಾರೆ. ಎಗ್ಗಿಲ್ಲದೆ ರೈಲ್ವೆ ನಿಲ್ದಾಣದಲ್ಲೇ ಬಾಲಕರು ಕಲಬೆರಿಕೆ ಸೇಂದಿಯನ್ನ ಕುಡಿದು ತೂರಾಡುವ ದೃಶ್ಯಾವಳಿಗಳು ಪಬ್ಲಿಕ್ ಟಿವಿಗೆ ಲಭ್ಯವಾಗಿವೆ. ಮಜ್ಜಿಗೆಯ ಹಾಗೇ ಕಾಣೋ ಕಲಬೆರಿಕೆ...

ತಮಗೇ ಬಡತನವಿದ್ರೂ ಅನಾಥರ ಸೇವೆ ಮಾಡ್ತಾರೆ!

8 months ago

ಬಳ್ಳಾರಿ: ಇವರು ಹಣದಲ್ಲಿ ಶ್ರೀಮಂತರಲ್ಲ. ಆದ್ರೆ ಗುಣದಲ್ಲಿ ಶ್ರೀಮಂತರು. ತಾವೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಬೆಳಕಾಗಿದ್ದಾರೆ. ಅನಾಥರು, ಮಾನಸಿಕ ಅಸ್ವಸ್ಥರು, ವೃದ್ಧರಿಗಾಗಿ ಅನಾಥಾಶ್ರಮ ನಡೆಸುತ್ತಿದ್ದಾರೆ. ಬಳ್ಳಾರಿಯ ಆ ಅಪರೂಪದ ಸಮಾಜ ಸೇವಕಿಯೇ ನಮ್ಮ ಪಬ್ಲಿಕ್ ಹೀರೋ. ಇವತ್ತಿನ ನಮ್ಮ...