Monday, 20th November 2017

Recent News

6 months ago

ಇನ್ಫೋಸಿಸ್ ಉದ್ಯೋಗಿಯ ನಗ್ನ ಶವ ಕಚೇರಿಯ ಟಾಯ್ಲೆಟ್‍ನಲ್ಲಿ ಪತ್ತೆ

ಚೆನ್ನೈ: ಇನ್ಫೋಸಿಸ್ ಉದ್ಯೋಗಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದು, ಅವರ ಮೃತದೇಹ ಕಚೇರಿಯ ಟಾಯ್ಲೆಟ್‍ನಲ್ಲಿ ಪತ್ತೆಯಾದ ಘಟನೆ ಇಂದು ಚೆನ್ನೈನಲ್ಲಿ ನಡೆದಿದೆ. 32 ವರ್ಷದ ಇಳಯರಾಜ ಅರಣಾಚಲಂ ಅವರ ಬಟ್ಟೆಗಳಿಲ್ಲದ ಮೃತದೇಹ ಕಚೇರಿಯ ಟಾಯ್ಲೆಟ್‍ನಲ್ಲಿ ಪತ್ತೆಯಾಗಿದೆ. ಇಳಯರಾಜ ಮೂಲತಃ ತಿರುವಣ್ಣಾಮಲೈ ಜಿಲ್ಲೆಯವರಾಗಿದ್ದು, ಟಾಯ್ಲೆಟ್‍ನಲ್ಲಿ ಚಲನರಹಿತರಾಗಿ ಬಿದ್ದಿದ್ದನ್ನು ನೋಡಿ ಸಹೋದ್ಯೋಗಿಗಳು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಆದ್ರೆ ಅಷ್ಟರಲ್ಲಾಗಲೇ ಇಳಯರಾಜ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದ್ದಾರೆ. ನಮ್ಮ ಉದ್ಯೋಗಿಗಳಲ್ಲೊಬ್ಬರು ಬುಧವಾರ ಬೆಳಿಗ್ಗೆ ಕಚೇರಿಯಲ್ಲಿ ಸಾವನ್ನಪ್ಪಿದ್ದಾರೆ. ನಾವು ಅವರನ್ನು ಗುರುತಿಸಿದ್ದೇವೆ. ಪೊಲೀಸರು ಇದರ ಬಗ್ಗೆ ತನಿಖೆ […]

6 months ago

ಬೆಳಗಾವಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಉಪಾಧ್ಯಕ್ಷೆ ಕಾಣೆ

ಬೆಳಗಾವಿ: ಇದು ಜಿಲ್ಲೆಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಮಿಸ್ಸಿಂಗ್ ಕಹಾನಿ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಇಬ್ಬರೂ ಕಾಣೆಯಾಗಿದ್ದಾರೆ. ಬೆಳಗಾವಿ ಜಿಲ್ಲೆಯ ಸಂಕೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಗರ್ ಪಾಟೀಲ ಹಾಗೂ ಮಹಿಳಾ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷೆ ಬಾಳಾಬಾಯಿ ಕುರಾಡೆ ಇಬ್ಬರೂ ಕಳೆದ 15 ದಿನಗಳಿಂದ ಕಾಣೆಯಾಗಿದ್ದಾರೆ. ಸಾಗರ್ ಪಾಟೀಲ್ ಮತ್ತು...

ಪಾರ್ವತಮ್ಮರನ್ನು ಕಳೆದುಕೊಂಡು ಕಣ್ಣೀರಿಟ್ಟ ಬಾಲ್ಯದ ಗೆಳತಿ ಜಾನಕಮ್ಮ

6 months ago

ಮೈಸೂರು: ಪಾರ್ವತಮ್ಮ ರಾಜ್‍ಕುಮಾರ್ ಅವರ ಬಾಲ್ಯದ ಗೆಳತಿ ಜಾನಕಮ್ಮ, ಪಾರ್ವತಮ್ಮ ಅವರ ಸಾವಿನ ಸುದ್ದಿ ಕೇಳಿ ಕಣ್ಣೀರಿಟ್ಟಿದ್ದಾರೆ. ಪಾರ್ವತಮ್ಮ ಅವರಿಗೆ ಇದ್ದಿದ್ದು ಒಬ್ಬರೇ ಬಾಲ್ಯದ ಗೆಳತಿ. ಆ ಬಾಲ್ಯದ ಗೆಳತಿ ಹೆಸರು ಜಾನಕಮ್ಮ. ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಸಾಲಿಗ್ರಾಮ...

ನನ್ನ ಹಾಗೂ ಪಾರ್ವತಮ್ಮನ ಜೊತೆ ದ್ವೇಷವಿರಲಿಲ್ಲ: ಹಿರಿಯ ನಟಿ ಲೀಲಾವತಿ

6 months ago

ಬೆಂಗಳೂರು: ವರನಟ ಡಾ. ರಾಜ್ ಕುಮಾರ್ ಧರ್ಮಪತ್ನಿ ಹಾಗೂ ಹಿರಿಯ ನಟಿ ಪಾರ್ವತಮ್ ರಾಜ್ ಕುಮಾರ್ ಮತ್ತು ನನ್ನ ಮಧ್ಯೆ ಯಾವುದೇ ದ್ವೇಷವಿರಲಿಲ್ಲ ಅಂತಾ ಹಿರಿಯ ನಟಿ ಲೀಲಾವತಿ ಹೇಳಿದ್ದಾರೆ. ಪಬ್ಲಿಕ್ ಟಿವಿ ಸ್ಟುಡಿಯೋದಲ್ಲಿ ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಅವರು,...

ಕಾಬುಲ್‍ನಲ್ಲಿ ಕಾರ್ ಬಾಂಬ್ ಸ್ಫೋಟ- 65 ಸಾವು, 300ಕ್ಕೂ ಹೆಚ್ಚು ಮಂದಿಗೆ ಗಾಯ

6 months ago

ಕಾಬುಲ್: ಅಫ್ಘಾನಿಸ್ತಾನದ ಕಾಬುಲ್‍ನಲ್ಲಿ ಇಂದು ಬೆಳಿಗ್ಗೆ ಪ್ರಬಲ ಕಾರ್ ಬಾಂಬ್ ಸ್ಫೋಟ ನಡೆದಿದೆ. ಘಟನೆಯಲ್ಲಿ 65 ಮಂದಿ ಸಾವನ್ನಪ್ಪಿದ್ದು, 300ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳುಗಳನ್ನು ಕಾಬುಲ್‍ನ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು...

ವಿಡಿಯೋ: ಅಮ್ಮನನ್ನು ನೆನೆದು ಗಳಗಳನೆ ಅತ್ತ ಸಚಿವೆ ಉಮಾಶ್ರೀ

6 months ago

ಬಾಗಲಕೋಟೆ: ನಟಿ ಹಾಗು ಸಚಿವೆಯಾಗಿರುವ ಶ್ರೀಮತಿ ಉಮಾಶ್ರೀ ಅವರು ಪಾರ್ವತಮ್ಮ ರಾಜಕುಮಾರ್ ಅವರನ್ನು ನೆನೆದು ದುಃಖ ತಡೆಯಲಾರದೇ ಗಳಗಳನೇ ಕಣ್ಣೀರು ಹಾಕಿದ್ದಾರೆ. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ ಉಮಾಶ್ರೀ ಅವರು, ಪಾರ್ವತಮ್ಮ ಅವರು ನನಗೆ ತಾಯಿಯಾಗಿ, ಅಕ್ಕಳಾಗಿ ಇದ್ದರು. ನಾನು ಶಾಸಕಿ,...

ರಾಜ್‍ ಕುಮಾರ್ ಸಮಾಧಿ ಬಳಿಯೇ ಪಾರ್ವತಮ್ಮ ರಾಜ್‍ ಕುಮಾರ್ ಅಂತ್ಯಕ್ರಿಯೆ

6 months ago

ಬೆಂಗಳೂರು: ಹಿರಿಯ ನಿರ್ಮಾಪಕಿ ಪಾವರ್ತಮ್ಮ ರಾಜ್‍ಕುಮಾರ್ ಇಹಲೋಕ ತ್ಯಜಿಸಿದ್ದಾರೆ. ಸದಾಶಿವನಗರದ ಪೂರ್ಣಪ್ರಜ್ಞ ಆಟದ ಮೈದಾನದಲ್ಲಿ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಮಾಡಲಾಗಿದೆ. ಇಂದು ಮಧ್ಯಾಹ್ನ 4:30 ಕ್ಕೆ ಪಾರ್ಥಿವ ಶರೀರವನ್ನು ಕಂಠೀರವ ಸ್ಟುಡಿಯೋಗೆ ತೆಗೆದುಕೊಂಡು ಹೋಗಲಾಗುತ್ತದೆ. ಸರ್ಕಾರದಿಂದ ರಾಜ್‍ಕುಮಾರ್ ಸಮಾಧಿ ಬಳಿ ಪಾರ್ವತಮ್ಮ...

ಕೊನೆಗೂ `ಅಮ್ಮ’ನ ಈ ಆಸೆ ಈಡೇರಲಿಲ್ಲ- ಹಿರಿಯ ನಟ ಶ್ರೀನಿವಾಸ್ ಮೂರ್ತಿ

6 months ago

ಬೆಂಗಳೂರು: ತನ್ನ ಮೂರು ಮಕ್ಕಳನ್ನು ಒಂದೇ ಸಿನಿಮಾದಲ್ಲಿ ನೋಡಬೇಕೆಂಬ ಆಸೆ ಡಾ. ಪಾರ್ವತಮ್ಮ ರಾಜ್ ಕುಮಾರ್ ಅವರಿಗಿತ್ತು. ಆದ್ರೆ ಇಂದು ಅವರು ವಿಧಿವಶರಾಗಿದ್ದು, ಅವರ ಆಸೆ ಈಡೇರಲೇ ಇಲ್ಲ ಅಂತಾ ಹಿರಿಯ ನಟ ಶ್ರೀನಿವಾಸ್ ಮೂರ್ತಿ ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ...