Wednesday, 23rd August 2017

Recent News

6 months ago

ಹುಬ್ಬಳ್ಳಿಯಲ್ಲಿ ನಡೆಯ್ತು ಅಚ್ಚರಿಯ ಘಟನೆ: ಸತ್ತಿದ್ದಾನೆಂದು ಭಾವಿಸಿದ್ದ ಬಾಲಕ ಸ್ಮಶಾನದಲ್ಲಿ ಉಸಿರಾಡಿದ..!

ಹುಬ್ಬಳ್ಳಿ: ರಾಜ್ಯದಲ್ಲಿ ಅಪರೂಪದಲ್ಲೇ ಅಪರೂಪ ಎನ್ನುವಂತಹ ಘಟನೆಯೊಂದು ಧಾರವಾದ ಮನಗುಂಡಿ ಗ್ರಾಮದಲ್ಲಿ ನಡೆದಿದೆ. ಬಾಲಕನೊಬ್ಬ ಸತ್ತಿದ್ದಾನೆಂದು ತಿಳಿದು, ಇನ್ನೇನು ಆತನ ಮೃತದೇಹವನ್ನು ಸುಡಲು ರೆಡಿ ಮಾಡುತ್ತಿದ್ದ ಸಂದರ್ಭದಲ್ಲಿ ಬಾಲಕ ಉಸಿರಾಡಿದ ಅಚ್ಚರಿಯ ಘಟನೆಯೊಂದು ಬೆಳಕಿಗೆ ಬಂದಿದೆ. ಹೌದು. ಜಿಲ್ಲೆಯ ಮನಗುಂಡಿ ಗ್ರಾಮದ ನಿಂಗಪ್ಪ ಅವರ ಪುತ್ರ ಕುಮಾರ್ ಎಂಬ ಬಾಲಕನಿಗೆ ಇತ್ತೀಚೆಗೆ ಬೀದಿ ನಾಯಿಗಳು ಕಚ್ಚಿದ್ದವು. ಇದರಿಂದ ಗಂಭೀರ ಗಾಯಗೊಂಡ ಕುಮಾರ್ ಮೂರ್ಛೆ ಹೋಗಿದ್ದನು. ಸ್ಥಳೀಯ ಎಸ್‍ಡಿಎಂ ಆಸ್ಪತ್ರೆಯಲ್ಲಿ 4 ದಿನ ನಿರಂತರವಾಗಿ ಚಿಕಿತ್ಸೆ ನೀಡಿದರೂ, ಪ್ರಯೋಜನವಾಗಿರಲಿಲ್ಲ. […]

6 months ago

ವಿಚಿತ್ರ ಕಾಯಿಲೆಗೆ ಸೂಕ್ತ ಚಿಕಿತ್ಸೆಯ ನಿರೀಕ್ಷೆಯಲ್ಲಿದ್ದಾನೆ 4ನೇ ಕ್ಲಾಸಿನ ವಿದ್ಯಾರ್ಥಿ!

ಬೆಂಗಳೂರು: ನಗರದ ಕುಂಬಾರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಎಲ್ಲಾ ಮಕ್ಕಳು ಆಟವಾಡುತ್ತಿರುವಾಗ ವಿದ್ಯಾರ್ಥಿ ಉದಯ್ ಮಾತ್ರ ಸೈಲೆಂಟಾಗಿ ಕುಳಿತಿರುತ್ತಾನೆ. ಸದ್ಯ ಶಾಲೆಯಲ್ಲಿ 4ನೇ ತರಗತಿಯಲ್ಲಿ ಓದುತ್ತಿರುವ ಈತ ಕಳೆದ ಎರಡು ವರ್ಷದಿಂದ ವಿಚಿತ್ರವಾದ ಕಾಯಿಲೆಯಿಂದ ಬಳಲುತ್ತಿದ್ದಾನೆ. ಹೌದು. ಉದಯ್‍ನ ಎರಡೂ ಕಿವಿಗಳಲ್ಲಿ ಕಳೆದ ಎರಡು ವರ್ಷದಿಂದ ರಕ್ತ ಮಿಶ್ರಿತ ನೀರು ಬರುತ್ತದೆ. ಈ ಹುಡುಗನಿಗೆ ಏಕೆ...

ಐಟಿ ದಾಳಿ ವೇಳೆ ಸಿಕ್ಕಿಬಿದ್ದಿದ್ದ ಚಂದ್ರಕಾಂತ್ ಈಗ ಶಶಿಕಲಾ ಕೇರ್‍ಟೇಕರ್!

6 months ago

ಬೆಂಗಳೂರು: ನೋಟ್‍ಬ್ಯಾನ್ ಬಳಿಕ ಐಟಿ ರೇಡ್‍ನಲ್ಲಿ ಸಿಕ್ಕಿಬಿದ್ದು ಜೈಲು ಸೇರಿ ರಿಲೀಸ್ ಆಗಿರುವ ರಾಮಲಿಂಗಂ ಕನ್‍ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ಈಗ ಶಶಿಕಲಾ ಕೇರ್‍ಟೇಕರ್ ಆಗಿದ್ದಾರೆ. ಜೈಲಾಧಿಕಾರಿಗಳ ಸ್ನೇಹ ಸಂಪಾದನೆ ಮಾಡಿದ್ದ ಚಂದ್ರಕಾಂತ್ ಅಧಿಕಾರಿಗಳ ಮೂಲಕ ಚಿನ್ನಮ್ಮನ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ...

150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

6 months ago

ಪಣಜಿ: ವಿದೇಶದ ಕೆಲವು ದ್ವೀಪಗಳಲ್ಲಿ ಜ್ವಾಲಾಮುಖಿ ಸುದ್ದಿಗಳನ್ನು ನೀವು ಓದಿರಬಹುದು. ಆದರೆ ಈಗ ನಿಮಗೆಲ್ಲರಿಗೂ ಅಚ್ಚರಿ ಮೂಡಿಸುವ ಸುದ್ದಿ ಎನ್ನುವುಂತೆ 150 ವರ್ಷಗಳ ಬಳಿಕ ಭಾರತದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ತಜ್ಞರ ತಂಡವೊಂದು ತಿಳಿಸಿದೆ. ಹೌದು. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು...

ಏರೋ ಇಂಡಿಯಾಗೆ ತೆರೆ: ಫೋಟೋಗಳಲ್ಲಿ ವಿಮಾನಗಳ ಕಸರತ್ತು ನೋಡಿ

6 months ago

ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಫೆ.14ರಿಂದ ನಡೆಯುತ್ತಿದ್ದ ಏರೋ ಇಂಡಿಯಾ-2017 ವೈಮಾನಿಕ ಪ್ರದರ್ಶನ ಮುಕ್ತಾಯವಾಗಿದೆ. ವೀಕೆಂಡ್ ಆದ ಹಿನ್ನೆಲೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಲೋಹದ ಹಕ್ಕಿಗಳ ಕಸರತ್ತನ್ನು ವೀಕ್ಷಿಸಿದ್ದಾರೆ. 600 ರೂಪಾಯಿ, 1500 ರೂಪಾಯಿ ಹಾಗೂ 2500 ರೂಪಾಯಿ ಟಿಕೆಟ್ ದರ...

ಕರಾವಳಿಗೂ ಬಂತು ಬಿರುಬಿಸಿಲ ಕಾಲ! – ಬಿಸಿಲಿನ ಝಳದಲ್ಲಿ ದಾಖಲೆ

6 months ago

ಮಂಗಳೂರು: ಕರಾವಳಿಯ ಮಂಗಳೂರು ಅಕ್ಷರಶಃ ಈಗ ಕಾದ ಕಾವಲಿಯಾಗಿದೆ. ಬಿರುಬಿಸಿಲಿನಿಂದಾಗಿ ಜನ ತತ್ತರಿಸಿ ಹೋಗಿದ್ದಾರೆ. ಸಾಮಾನ್ಯವಾಗಿ ಸಮೃದ್ಧವಾಗಿ ಮಳೆಯಾಗುವ ನಾಡು ಕರಾವಳಿ, ಪಶ್ಚಿಮ ಘಟ್ಟದ ತಪ್ಪಲಿನಿಂದ ಸಮುದ್ರ ತೀರದ ತನಕ ಧಾರಾಕಾರ ಮಳೆಯಾಗುತ್ತದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆ ಈ ವರ್ಷ ಬರದ...

ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ವಿವಾಹ ಮಸೂದೆ ಸರ್ವಾನುಮತದಿಂದ ಅಂಗೀಕಾರ

6 months ago

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತಿನಲ್ಲಿ ಬಹುಚರ್ಚಿತ ಹಿಂದೂ ವಿವಾಹ ಮಸೂದೆ 2017 ಸರ್ವಾನುಮತದಿಂದ ಅಂಗೀಕಾರವಾಗಿದೆ. ಶುಕ್ರವಾರದಂದು ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆಯನ್ನು ಅಳವಡಿಸಿಕೊಂಡಿದೆ. ಈ ಮಸೂದೆ 2015ರ ಸೆಪ್ಟೆಂಬರ್ 26ರಂದೇ ಕಳಮನೆ/ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಂಗೀಕಾರವಾಗಿತ್ತು. ಈಗ ಇದಕ್ಕೆ ರಾಷ್ಟ್ರಪತಿಗಳ ಅಂಕಿತವಷ್ಟೆ...

ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

6 months ago

ಚೆನ್ನೈ: ಗದ್ದಲ, ಕೋಲಾಹಲ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದ್ದ ತಮಿಳುನಾಡು ವಿಶೇಷ ಅಧಿವೇಶನದಲ್ಲಿ ಕೊನೆಗೂ ಶಶಿಕಲಾ ಬಣ ಗೆದ್ದಿದೆ. ಸಿಎಂ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಪರೀಕ್ಷೆಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಾಂಗ್ರೆಸ್, ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ...