Saturday, 23rd September 2017

Recent News

5 months ago

ಬೇರೊಬ್ಬರ ಬಿಡಿಎ ಸೈಟ್ ಮೇಲೆ ಸಚಿವರ ಕಣ್ಣು – ಅಧಿಕಾರ ಬಳಸಿ ಶರಣ್‍ಪ್ರಕಾಶ್ ಪಾಟೀಲ್ ದರ್ಪ

ಬೆಂಗಳೂರು: ವೈದ್ಯಕೀಯ ಶಿಕ್ಷಣ ಸಚಿವರಾದ ಶರಣ್ ಪ್ರಕಾಶ್ ಪಾಟೀಲ್ ಯಾರದ್ದೋ ಬಿಡಿಎ ಸೈಟನ್ನ ನನಗೆ ಕೊಡಿ ಅಂತಿದ್ದಾರೆ. 30/40 ಬೇಡ 50/80 ಸೈಟು ಕೊಡಿ ಅಂತ ದುಂಬಾಲು ಬಿದ್ದಿದ್ದಾರೆ. ಬೆಂಗಳೂರಿನ ಹೆಚ್‍ಬಿಆರ್ ಲೇಔಟ್‍ನ 1ನೇ ಹಂತದಲ್ಲಿ ಸಚಿವರಿಗೆ 40/60 ಸೈಟ್ ಹಂಚಿಕೆಯಾಗಿತ್ತು. ಅದನ್ನ ರಿಜಿಸ್ಟರ್ ಕೂಡ ಮಾಡಿಕೊಂಡ್ರು. ಆದ್ರೆ ಸಚಿವರು ಈಗ ನನಗೆ ಆ ಸೈಟ್ ಬೇಡ, ಹೆಚ್‍ಎಸ್‍ಆರ್ ಲೇಔಟ್‍ನಲ್ಲಿರೋ ಸರ್ವೇ ನಂಬರ್ 1089ಎ ನಲ್ಲಿರುವ ಕುಮಾರ್ ಅನ್ನೋರ 50/80 ಸೈಟನ್ನು ಬದಲಿ ನಿವೇಶನವಾಗಿ ಕೊಡಿ ಅಂತ ಬಿಡಿಎಗೆ […]

5 months ago

ತುಮಕೂರು: ಪೆಟ್ರೋಲ್ ಗೆ ಸೀಮೆಎಣ್ಣೆ ಬೆರೆಸಿದ ಆರೋಪ- ಗ್ರಾಹಕರ ಪ್ರತಿಭಟನೆ

ತುಮಕೂರು: ಬಂಕ್‍ನಲ್ಲಿ ಪೆಟ್ರೋಲ್‍ಗೆ ಸೀಮೆಎಣ್ಣೆ ಮಿಶ್ರಣ ಮಾಡಿದ್ದಾರೆಂದು ಆರೋಪಿಸಿ ತುಮಕೂರಿನ ಗ್ರಾಹಕರು ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ನಗರದ ಕೆಆರ್ ಬಡಾವಣೆಯಲ್ಲಿರುವ ಅಣೇಕಾರ್‍ನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್‍ನಲ್ಲಿ ಗ್ರಾಹಕರು ಪೆಟ್ರೋಲ್ ಹಾಕಿಸಿಕೊಳ್ಳುವ ವೇಳೆ ಸೀಮೆಎಣ್ಣೆ ವಾಸನೆ ಬಂದಿದೆ. ಈ ವೇಳೆ ಆಕ್ರೋಶಗೊಂಡ ಗ್ರಾಹಕರು ಬಂಕ್‍ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ್ರು. ಎ.ಪಿ.ವಾಸುದೇವ್ ಎಂಬವರಿಗೆ ಸೇರಿದ ಬಂಕ್...

ಕೊನೆಗೂ ಕರ್ನಾಟಕದ ಮಲ್ಟಿಪ್ಲೆಕ್ಸ್ ಗಳಲ್ಲಿ 200 ರೂ. ಗರಿಷ್ಟ ಟಿಕೆಟ್ ದರ ಫಿಕ್ಸ್: ಆದೇಶದ ಪೂರ್ಣ ಪ್ರತಿ ಇಲ್ಲಿದೆ

5 months ago

ಬೆಂಗಳೂರು: ಕರ್ನಾಟಕದ ಸಿನಿ ಅಭಿಮಾನಿಗಳಿಗೆ ಗುಡ್ ನ್ಯೂಸ್. ಕೊನೆಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಗರಿಷ್ಟ ಟಿಕೆಟ್ ದರ 200 ರೂ. ಫಿಕ್ಸ್ ಆಗಿದ್ದು, ಇಂದಿನಿಂದಲೇ ಅಧಿಕೃತ ಆದೇಶ ಜಾರಿಯಾಗಿದೆ. ಕನ್ನಡ ಮತ್ತು ಸಂಸ್ಕೃತಿ, ವಾರ್ತಾ ಇಲಾಖೆಯಿಂದ ಆದೇಶ ಪ್ರಕಟವಾಗಿದ್ದು, ಎಲ್ಲ ಭಾಷೆಯ ಚಿತ್ರಗಳಿಗೆ...

ಮನೆಯವರ ವಿರೋಧದ ಮಧ್ಯೆಯೂ ಹಿಂದೂ ಯುವಕ- ಮುಸ್ಲಿಂ ಯುವತಿ ಸತಿಪತಿಗಳಾದ್ರು

5 months ago

– ಮತಾಂತರವಾಗಲ್ಲ, ಎಷ್ಟೇ ಕಷ್ಟ ಬಂದ್ರೂ ಇಬ್ರೂ ಒಟ್ಟಿಗೆ ಬಾಳ್ತೀವಿ ಎಂದ ಜೋಡಿ ಉಡುಪಿ: ಆತ ಹಿಂದೂ, ಆಕೆ ಮುಸ್ಲಿಂ. ಅವರಿಬ್ಬರದ್ದು ಎರಡು ವರ್ಷಗಳ ಹಿಂದಿನ ಪ್ರೀತಿ. ಸಲ್ಮಾ ಮನೆಯವರ ವಿರೋಧದ ನಡುವೆಯೇ ಮನೆಬಿಟ್ಟು ಬಂದು ಕರಿಮಣಿಗೆ ಕೊರಳು ಕೊಟ್ಟಿದ್ದಾಳೆ. ಇಬ್ಬರ...

ಮನಕಲಕುವ ವಿಡಿಯೋ: ತನ್ನ ಮರಿಗಳನ್ನ ಬಲಿ ಪಡೆದ ಟ್ರಕ್ ಮುಂದೆ ಹೋಗದಂತೆ ಅಡ್ಡ ನಿಂತ ಮೇಕೆ

5 months ago

ತಾಯಿ ಮೇಕೆಯೊಂದು ತನ್ನ ಮರಿಗಳನ್ನ ಬಲಿ ಪಡೆದ ಟ್ರಕ್ ಮುಂದೆ ಹೋಗದಂತೆ ಅಡ್ಡ ನಿಂತು ಮೂಕವೇದನೆ ವ್ಯಕ್ತಪಡಿಸಿದ ಮನಕಲಕುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಕೆಂಪು ಬಣ್ಣದ ಟ್ರಕ್ ತಟಸ್ಥವಾಗಿ ನಿಂತಿದ್ದರೂ ಮೇಕೆ ಮಾತ್ರ ತನ್ನ ಅಷ್ಟೂ ಶಕ್ತಿಯನ್ನ ಹಾಕಿ ತಲೆಯನ್ನ...

ಅಪ್ಪನ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು: ಪಾ(ಪಿ)ಕಿಗಳಿಂದ ಶಿರಚ್ಛೇದನಗೊಂಡ ಯೋಧನ ಮಗಳ ಮಾತು

5 months ago

ನವದೆಹಲಿ: ನನ್ನ ತಂದೆಯ ಸಾವಿಗೆ ಪ್ರತೀಕಾರವಾಗಿ 50 ತಲೆಗಳು ಬೇಕು ಎಂದು ಪಾಕಿಸ್ತಾನದ ಸೈನಿಕರ ಪೈಶಾಚಿಕ ಕೃತ್ಯದಿಂದ ಹುತಾತ್ಮರಾದ ಯೋಧರೊಬ್ಬರ ಮಗಳು ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದಾರೆ. ಸೋಮವಾರದಂದು ಪಾಕಿಸ್ತಾನದ ಸೈನಿಕರು ಕಾಶ್ಮೀರದಲ್ಲಿ ಭಾರತದೊಳಗೆ ನುಗ್ಗಿ ಇಬ್ಬರು ಯೋಧರನ್ನು ಕೊಂದು ಅವರ...

ಸಿನಿಮಾ ಟಿಕೆಟ್ ನೀಡದ್ದಕ್ಕೆ ಕೊಲೆ: ಆರೋಪಿಗಳು 5 ತಿಂಗಳ ಬಳಿಕ ಸುಲಭವಾಗಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದು ಹೇಗೆ?

5 months ago

ಬಳ್ಳಾರಿ: ಬಾಹುಬಲಿ ಚಿತ್ರದ ಟಿಕೆಟ್ಟಿಗೆ ಇದೀಗ ಎಲ್ಲೆಡೆ ಭಾರೀ ಬೇಡಿಕೆಯಿದೆ. ಸಾವಿರಾರು ರೂಪಾಯಿ ಕೊಟ್ಟಾದ್ರೂ ಸರಿ ಚಿತ್ರ ನೋಡಬೇಕು ಅಂತಾ ಪೇಕ್ಷಕರು ಮುಗಿಬಿದ್ದು ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಆದ್ರೆ ಈ ಹಿಂದೆ ಬಿಡುಗಡೆಯಾಗಿ ಭಾರೀ ಯಶಸ್ವಿ ಕಂಡ ಅಲ್ಲು ಅರ್ಜುನ್ ನಟನೆಯ...

ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ಶ್ರೀನಿವಾಸ್ ಪ್ರಸಾದ್ ನೇಮಕ

5 months ago

ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಶ್ರೀನಿವಾಸ್ ಪ್ರಸಾದ್ ಅವರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಉಪಾಧ್ಯಕ್ಷ ಸ್ಥಾನವನ್ನು ನೀಡಿದ್ದಾರೆ. ಮೈಸೂರು ಭಾಗದಲ್ಲಿ ಬಿಜೆಪಿ ಬಲಪಡಿಸಲು ಬಿಜೆಪಿ ಪ್ಲಾನ್ ರೂಪಿಸಿದ್ದು, ಈ ಕಾರಣಕ್ಕಾಗಿ ದಲಿತ ಸಮುದಾಯಕ್ಕೆ ಪಕ್ಷ ಸಂಘಟನೆಯಲ್ಲಿ ಒತ್ತು ನೀಡಲು...