Tuesday, 23rd January 2018

Recent News

5 hours ago

1 ಕೋಟಿಗಾಗಿ ಮಗಳಿಗೆ ಸೈನೈಡ್ ಹಾಕಿ, ನೇಣು ಬಿಗಿದು ಆತ್ಮಹತ್ಯೆಗೆ ಯತ್ನ ಎಂದು ನಂಬಿಸಿದ!

ರಾಮನಗರ: ಹಣಕ್ಕಾಗಿ ಮಗಳನ್ನೇ ಕೊಂದ ಪಾಪಿ ತಂದೆ ಸೇರಿದಂತೆ ನಾಲ್ವರನ್ನು ಕಗ್ಗಲೀಪುರ ಪೊಲೀಸರು ಬಂಧಿಸಿದ್ದಾರೆ. ವೀಣಾ (24) ಕೊಲೆಯಾಗಿದ್ದ ಗೃಹಿಣಿ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರದ ಕುಳ್ಳಯ್ಯನತೋಟದಲ್ಲಿ ಜನವರಿ 11 ರಂದು ಕೊಲೆ ಪ್ರಕರಣ ನಡೆದಿದ್ದು, ಚಿಕ್ಕಬ್ಯಾಟಪ್ಪ ಅಲಿಯಾಸ್ ಸಂಪಂಗಿ, ಲಕ್ಷ್ಮಿ, ಇಸ್ಮಾಯಿಲ್ ಖಾನ್, ಮುನಿರಾಜು ಬಂಧಿತ ಆರೋಪಿಗಳು. ಒಂದು ವರ್ಷದ ಹಿಂದೆ ತನ್ನ ಜಮೀನನ್ನು 2 ಕೋಟಿ ರೂ. ಹಣಕ್ಕೆ ಸಂಪಂಗಿ ಮಾರಾಟ ಮಾಡಿದ್ದ. ಪತ್ನಿ ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಸಂಪಂಗಿ ಲಕ್ಷ್ಮಿ ಜೊತೆ ಅನೈತಿಕ ಸಂಬಂಧ […]

5 hours ago

ಮೋದಿ, ಅಮಿತ್ ಷಾ ಅಂದ್ರೆ ಸಿಎಂ ಸಿದ್ದರಾಮಯ್ಯ ಕನಸಲ್ಲೂ ಗಡಗಡ ನಡುಗ್ತಾರೆ- ಡಿವಿಎಸ್

ಮಂಡ್ಯ: ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತಾ ಅಂದ್ರೆ ಕನಸಲ್ಲೂ ಗಡಗಡ ನಡುಗುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ದೊಡ್ಡ ಕಾರ್ಯಕ್ರಮಗಳನ್ನು ನಡೆಸುತ್ತಿರುವಾಗಲೇ ಬಂದ್ ನಡೆಸಲು ಪ್ರೇರಣೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಡಿವಿ ಸದಾನಂದಗೌಡ ಕಿಡಿಕಾರಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ಮಹದಾಯಿ ವಿಚಾರವಾಗಿ ಉತ್ತರ ಕರ್ನಾಟಕದಲ್ಲಿ ಬಂದ್ ಮಾಡೋದು ಅಥವಾ ರಾಜಧಾನಿಯಲ್ಲಿ ಬಂದ್ ಮಾಡೋದು ಸ್ವಾಭಾವಿಕ....

ಬಂಟ್ವಾಳದಲ್ಲಿ ರಮಾನಾಥ್ ರೈ-ರಾಜೇಶ್ ನಡುವೆ ಸ್ಪರ್ಧೆ ಅಲ್ಲ, ಅಲ್ಲಾ-ರಾಮನ ನಡುವೆ ಸಮರ: ಶಾಸಕ ಸುನಿಲ್ ಕುಮಾರ್

7 hours ago

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದಲ್ಲಿ ಈ ಬಾರಿಯ ಚುನಾವಣೆಯಲ್ಲಿ ಅರಣ್ಯ ಸಚಿವ ರಮಾನಾಥ ರೈ ಹಾಗೂ ರಾಜೇಶ್ ನಾಯ್ಕ್ ನಡುವೆ ಸ್ಫರ್ಧೆ ಅಲ್ಲ. ಈ ಚುನಾವಣೆ ಅಲ್ಲಾ ಮತ್ತು ರಾಮನ ನಡುವೆ ನಡೆಯುವ ಸ್ಪರ್ಧೆ ಎಂದು ಕಾರ್ಕಳದ ಬಿಜೆಪಿ ಶಾಸಕ...

ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಸಿಎಂ ಸಮರ್ಥನೆ

7 hours ago

ಬೆಂಗಳೂರು: ಖಡಕ್ ಅಧಿಕಾರಿ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಯನ್ನು ಸಿಎಂ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಬೆಂಗಳೂರಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಆಡಳಿತಾತ್ಮಕ ದೃಷ್ಟಿಯಿಂದ ವರ್ಗ ಮಾಡಿದ್ದೇವೆ. ಇದರಲ್ಲಿ ಯಾರ ಒತ್ತಡವೂ ಇಲ್ಲ, ಯಾವ ರಾಜಕೀಯವೂ ಇಲ್ಲ. ಮಹಿಳಾ ಅಧಿಕಾರಿಗಳನ್ನು...

ಹಣ ಹೊಡೆಯಲು ಬಿಟ್ಟಿಲ್ಲ ಅಂತ ಹೆಣ್ಮಗಳ ವರ್ಗ, ಸಿಎಂ ಜೊತೆ ವೇದಿಕೆ ಏರಲ್ಲ- ಸರ್ಕಾರಕ್ಕೆ ಥೂ ಎಂದು ಉಗಿದ ಹೆಚ್‍ಡಿಡಿ

7 hours ago

ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವರ್ಗಾವಣೆಗೆ ಮಾಜಿ ಪ್ರಧಾನಿ ಹೆಚ್‍ಡಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶ್ರವಣಬೆಳಗೊಳದಲ್ಲಿ ನಡೆಯೋ ಮಹಾಮಸ್ತಕಾಭಿಷೇಕದಲ್ಲಿ ಹಣ ಹೊಡೆಯಲು ಬಿಟ್ಟಿಲ್ಲ ಅಂತಾ ಹೆಣ್ಮಗಳನ್ನು ವರ್ಗ ಮಾಡಿದ್ದಾರೆ ಅಂತ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಬೆಂಗಳೂರಿನ ತಮ್ಮ ನಿವಾಸದಲ್ಲಿ...

ಬೈಕ್‍ ನೊಳಗೆ ಪ್ರತ್ಯಕ್ಷವಾದ ಹಾವಿಗೆ ಸಿಕ್ತು ಜೀವದಾನ!

7 hours ago

ಮಂಡ್ಯ: ಬೈಕಿನ ಚೈನ್ ಪಾಕೆಟ್ ಒಳಗೆ ಹಾವಿನ ಮರಿ ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ಪಟ್ಟಣದ ರೈಲ್ವೆ ನಿಲ್ದಾಣದ ಬಳಿ ನಡೆದಿದೆ. ಸಂತೋಷ್ ಎಂಬುವವರ ಟೀ ಶಾಪ್ ಮುಂಭಾಗ ಕೋದಂಡರಾಮು ಎಂಬುವವರು ಟೀ ಕುಡಿಯಲು ಬೈಕ್ ನಿಲ್ಲಿಸಿದ್ದರು....

ಒಂದು ಕಾಲದ ಯಡಿಯೂರಪ್ಪ ಆಪ್ತ ಸದ್ದಿಲ್ಲದೇ ಜೆಡಿಎಸ್ ಸೇರ್ಪಡೆ

7 hours ago

ಬೆಂಗಳೂರು: ಒಂದು ಕಾಲದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಆಪ್ತ ಮಂಜುನಾಥ ಗೌಡ ಇಂದು ಜೆಡಿಎಸ್ ಸೇರ್ಪಡೆಗೊಂಡಿದ್ದಾರೆ. ಬೆಂಗಳೂರಿನ ಪದ್ಮನಾಭ ನಗರದ ಹೆಚ್.ಡಿ.ದೇವೇಗೌಡರ ನಿವಾಸದಲ್ಲಿ ಜೆಡಿಎಸ್ ಸೇರ್ಪಡೆಗೊಂಡರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪಕ್ಷದಿಂದ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ...

ನವಜಾತ ಹೆಣ್ಣುಮಗು ಬದುಕಲ್ಲ ಎಂದು ಕಸದ ತೊಟ್ಟಿಗೆ ಎಸೆದ ನಿರ್ದಯಿ ತಂದೆ- ನಂತರ ನಡೆದಿದ್ದು ಪವಾಡ

7 hours ago

ಬೀಜಿಂಗ್: ಆ ಮಗು ಜನಿಸಿ ಕೇವಲ 2 ಗಂಟೆಗಳಷ್ಟೇ ಕಳೆದಿತ್ತು. ಅದರ ಕರುಳ ಬಳ್ಳಿಯೂ ಕೂಡ ಹಾಗೇ ಇತ್ತು. ಮಗು ಬದುಕುಳಿಯೋದಿಲ್ಲ ಎಂದು ತಂದೆ ಅದನ್ನ ಬ್ಯಾಗ್‍ನಲ್ಲಿ ತುಂಬಿ ಕಸದ ತೊಟ್ಟಿಗೆ ಎಸೆದು ಹೋಗಿದ್ದ. ಆದ್ರೆ ಆ ಮಗು ಇನ್ನೂ ಜೀವಂತವಾಗಿದ್ದು,...