Thursday, 21st June 2018

1 year ago

ಐಟಿ ದಾಳಿ ವೇಳೆ ಸಿಕ್ಕಿಬಿದ್ದಿದ್ದ ಚಂದ್ರಕಾಂತ್ ಈಗ ಶಶಿಕಲಾ ಕೇರ್‍ಟೇಕರ್!

ಬೆಂಗಳೂರು: ನೋಟ್‍ಬ್ಯಾನ್ ಬಳಿಕ ಐಟಿ ರೇಡ್‍ನಲ್ಲಿ ಸಿಕ್ಕಿಬಿದ್ದು ಜೈಲು ಸೇರಿ ರಿಲೀಸ್ ಆಗಿರುವ ರಾಮಲಿಂಗಂ ಕನ್‍ಸ್ಟ್ರಕ್ಷನ್ ಮಾಲೀಕ ಚಂದ್ರಕಾಂತ್ ಈಗ ಶಶಿಕಲಾ ಕೇರ್‍ಟೇಕರ್ ಆಗಿದ್ದಾರೆ. ಜೈಲಾಧಿಕಾರಿಗಳ ಸ್ನೇಹ ಸಂಪಾದನೆ ಮಾಡಿದ್ದ ಚಂದ್ರಕಾಂತ್ ಅಧಿಕಾರಿಗಳ ಮೂಲಕ ಚಿನ್ನಮ್ಮನ ಚೆನ್ನಾಗಿ ನೋಡಿಕೊಳ್ಳುವ ಜವಾಬ್ದಾರಿ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಪಬ್ಲಿಕ್ ಟಿವಿಗೆ ಸಿಕ್ಕಿದೆ. ಶಶಿಕಲಾ ಬಂಟನಾಗಿರುವ ಸಿಎಂ ಪಳನಿಸ್ವಾಮಿಯ ಮಗ ಮಿಥುನ್ ಮತ್ತು ಚಂದ್ರಕಾಂತ್ ಸಹೋದರ ಸೂರ್ಯಕಾಂತ್ ಮದುವೆಯಾಗಿರೋದು ಅಕ್ಕ-ತಂಗಿಯರನ್ನಂತೆ. ಹೀಗಾಗಿ, ಚಂದ್ರಕಾಂತ್ ಮತ್ತು ಪಳನಿಸ್ವಾಮಿ ಸಂಬಂಧಿಗಳೇ. ಈರೋಡು ಮೂಲದ ಅಡ್ವೊಕೇಟ್ […]

1 year ago

150 ವರ್ಷಗಳ ಬಳಿಕ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯ

ಪಣಜಿ: ವಿದೇಶದ ಕೆಲವು ದ್ವೀಪಗಳಲ್ಲಿ ಜ್ವಾಲಾಮುಖಿ ಸುದ್ದಿಗಳನ್ನು ನೀವು ಓದಿರಬಹುದು. ಆದರೆ ಈಗ ನಿಮಗೆಲ್ಲರಿಗೂ ಅಚ್ಚರಿ ಮೂಡಿಸುವ ಸುದ್ದಿ ಎನ್ನುವುಂತೆ 150 ವರ್ಷಗಳ ಬಳಿಕ ಭಾರತದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ತಜ್ಞರ ತಂಡವೊಂದು ತಿಳಿಸಿದೆ. ಹೌದು. ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪ ಸಮೂಹದಲ್ಲಿರುವ ದೇಶದ ಏಕೈಕ ಜ್ವಾಲಾಮುಖಿ ಸಕ್ರಿಯವಾಗಿದೆ ಎಂದು ಗೋವಾದಲ್ಲಿರುವ ರಾಷ್ಟ್ರೀಯ...

ಪಾಕಿಸ್ತಾನ ಸಂಸತ್ತಿನಲ್ಲಿ ಹಿಂದೂ ವಿವಾಹ ಮಸೂದೆ ಸರ್ವಾನುಮತದಿಂದ ಅಂಗೀಕಾರ

1 year ago

ಇಸ್ಲಾಮಾಬಾದ್: ಪಾಕಿಸ್ತಾನದ ಸಂಸತ್ತಿನಲ್ಲಿ ಬಹುಚರ್ಚಿತ ಹಿಂದೂ ವಿವಾಹ ಮಸೂದೆ 2017 ಸರ್ವಾನುಮತದಿಂದ ಅಂಗೀಕಾರವಾಗಿದೆ. ಶುಕ್ರವಾರದಂದು ಪಾಕಿಸ್ತಾನ ಸಂಸತ್ತು ಹಿಂದೂ ವಿವಾಹ ಮಸೂದೆಯನ್ನು ಅಳವಡಿಸಿಕೊಂಡಿದೆ. ಈ ಮಸೂದೆ 2015ರ ಸೆಪ್ಟೆಂಬರ್ 26ರಂದೇ ಕಳಮನೆ/ ನ್ಯಾಷನಲ್ ಅಸೆಂಬ್ಲಿಯಲ್ಲಿ ಅಂಗೀಕಾರವಾಗಿತ್ತು. ಈಗ ಇದಕ್ಕೆ ರಾಷ್ಟ್ರಪತಿಗಳ ಅಂಕಿತವಷ್ಟೆ...

ಭಾರೀ ಹೈಡ್ರಾಮದ ಬಳಿಕ ವಿಶ್ವಾಸ ಮತಯಾಚನೆಯಲ್ಲಿ ಗೆದ್ದಿತು ಶಶಿಕಲಾ ಬಣ

1 year ago

ಚೆನ್ನೈ: ಗದ್ದಲ, ಕೋಲಾಹಲ ರಾಜಕೀಯ ಹೈಡ್ರಾಮಕ್ಕೆ ಕಾರಣವಾಗಿದ್ದ ತಮಿಳುನಾಡು ವಿಶೇಷ ಅಧಿವೇಶನದಲ್ಲಿ ಕೊನೆಗೂ ಶಶಿಕಲಾ ಬಣ ಗೆದ್ದಿದೆ. ಸಿಎಂ ಪಳನಿಸ್ವಾಮಿ ವಿಶ್ವಾಸ ಮತ ಯಾಚನೆ ಪರೀಕ್ಷೆಯಲ್ಲಿ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಕಾಂಗ್ರೆಸ್, ಡಿಎಂಕೆ ಶಾಸಕರ ಅನುಪಸ್ಥಿತಿಯಲ್ಲಿ ಸರ್ಕಾರದ ಪರವಾಗಿ...

ಎಣ್ಣೆ ವ್ಯಾಪಾರಿ ಕೊಲೆಗೆ ಸುಪಾರಿ: 6 ಆರೋಪಿಗಳ ಬಂಧನ

1 year ago

– ಎರಡು ಬಾರಿ ಮಾರಣಾಂತಿಕ ಹಲ್ಲೆ ಮಾಡಿದ ಸುಪಾರಿ ಕಿಲ್ಲರ್ಸ್ ರಾಯಚೂರು: ರಾಯಚೂರಿನ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ವ್ಯಾಪಾರಿಯೊಬ್ಬರ ಮೇಲೆ ಹಾಡ ಹಗಲೇ ನಡೆದಿದ್ದ ಕೊಲೆ ಯತ್ನ ಪ್ರಕರಣದ ಆರೋಪಿಗಳು ಸೆರೆ ಸಿಕ್ಕಿದ್ದಾರೆ. ರಾಯಚೂರಿನ ಅಡುಗೆ ಎಣ್ಣೆ ಅಂಗಡಿ ವ್ಯಾಪಾರಿ ತಿರುಮಲೇಶ...

ರೈತನಿಗೆ ಕಳಪೆ ಬಿತ್ತನೆ ಬೀಜ ನೀಡಿದ ಜಿಕೆವಿಕೆ – 3 ತಿಂಗಳಾದ್ರೂ ರಾಗಿ ತೆನೆ ಕಾಳು ಕಟ್ಟಲೇ ಇಲ್ಲ

1 year ago

– ಕೇಳಲು ಹೋದ ರೈತನಿಗೆ ನಿನ್ನ ಹಣೆ ಬರಹ ಅಂತ ಹಾರಿಕೆ ಉತ್ತರ ಚಿಕ್ಕಬಳ್ಳಾಪುರ: ಕಡಿಮೆ ಅವಧಿಯಲ್ಲೇ ಅತ್ಯಧಿಕ ಇಳುವರಿ ಅಂತ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಸಂಶೋಧಕರ ಸಲಹೆಯಂತೆ ಖರೀದಿಸಿದ ರಾಗಿ ಬಿತ್ತನೆ ಬೀಜಗಳಿಂದ ನಾಟಿ ಮಾಡಿದ ಪೈರಿನ ತೆನೆಯಲ್ಲಿ ರಾಗಿ...

ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ರಾಯಚೂರಿನ ಗುಂಡಲಬಂಡೆ ಜಲಪಾತ

1 year ago

ಪ್ರವಾಸಿಗರನ್ನ ಕೈಬೀಸಿ ಕರೆಯುತ್ತಿರುವ ಜಲಪಾತಕ್ಕೆ ದಾರಿಯೇ ಇಲ್ಲ -ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದ ಕಾನನ ಮರೆಯಲ್ಲೇ ಉಳಿದ ಜಲಸೊಬಗು ವಿಜಯ್ ಜಾಗಟಗಲ್ ರಾಯಚೂರು: ಬಿಸಿಲನಾಡು ರಾಯಚೂರಿನಲ್ಲಿ ಬೇಸಿಗೆಯ ಬಿಸಿಲ ಬೇಗೆ ಜನರನ್ನ ಆಗಲೇ ತತ್ತರಿಸುವಂತೆ ಮಾಡಿದೆ. ಕುಡಿಯುವ ನೀರಿನ ಸಮಸ್ಯೆಯಿಂದ ಜಿಲ್ಲೆಯ ಜನ...

ಆಪರೇಷನ್ ಮಾಡದೆ 8 ತಿಂಗಳ ಮಗು ನುಂಗಿದ್ದ ಮೆಂಥೋಪ್ಲಸ್ ಡಬ್ಬಿ ಹೊರತೆಗೆದ ಕೊಪ್ಪಳದ ವೈದ್ಯರು

1 year ago

ಕೊಪ್ಪಳ: ಎಂಟು ತಿಂಗಳ ಮಗುವೊಂದು ಆಕಸ್ಮಿಕವಾಗಿ ನುಂಗಿದ್ದ ಮೆಂಥೋಪ್ಲಸ್ ಡಬ್ಬಿಯನ್ನ ಆಪರೇಷನ್ ಇಲ್ಲದೆ ಹೊರತೆಗೆಯುವಲ್ಲಿ ಕೊಪ್ಪಳದ ಕಿಮ್ಸ್ ವೈದ್ಯರು ಯಶಸ್ವಿಯಾಗಿದ್ದಾರೆ. ಕೊಪ್ಪಳದ ಜಿಲ್ಲಾಸ್ಪತ್ರೆಯಲ್ಲಿ ಶುಕ್ರವಾರ ಎಂಟು ತಿಂಗಳ ಮಗು ಮೆಂಥೋಪ್ಲಸ್ ಡಬ್ಬಿ ನುಂಗಿದ ಪರಿಣಾಮ ಸಾವು ಬದುಕಿನ ಮಧ್ಯೆ ಹೋರಾಡ್ತಿತ್ತು. ವೈದ್ಯರು...