Saturday, 24th March 2018

Recent News

1 year ago

ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಕೋರ್ಟ್ ಅಸ್ತು

ಚೆನ್ನೈ: ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ಡೈವೋರ್ಸ್ ಗೆ ಅಧಿಕೃತ ಮುದ್ರೆ ಬಿದ್ದಿದೆ. ಮಂಗಳವಾರ ಚೆನ್ನೈನ ಕೌಟುಂಬಿಕ ನ್ಯಾಯಾಲಯ ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಅಸ್ತು ಎಂದಿದೆ. ಈ ಮೂಲಕ ಅಮಲಾ ಪೌಲ್ ಹಾಗೂ ವಿಜಯ್ ಅವರ ಎರಡೂವರೆ ವರ್ಷದ ದಾಂಪತ್ಯ ಕೊನೆಯಾಗಿದೆ. 4 ವರ್ಷಗಳ ಕಾಲ ಪ್ರೀತಿಸಿದ್ದ ಅಮಲಾ-ವಿಜಯ್ ಜೋಡಿ 2014ರ ಜೂನ್ 12ರಂದು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ವಿಜಯ್ ಕುಟುಂಬದವರು ಸಿನೆಮಾ ನಟನೆಯನ್ನು ತಡೆಯಲು ಮುಂದಾದರು ಎಂಬ […]

1 year ago

ಉಡುಪಿಯಲ್ಲಿ ಪಾಳು ಬಾವಿಗೆ ಬಿದ್ದಿದ್ದ ಎರಡು ಹೆಬ್ಬಾವುಗಳ ರಕ್ಷಣೆ: ವಿಡಿಯೋ ನೋಡಿ

ಉಡುಪಿ: ಜಿಲ್ಲೆಯ ಹಾವಂಜೆ ಕಾಡಿನಲ್ಲಿರುವ ಪಾಳು ಬಾವಿಯಲ್ಲಿ ಬಿದ್ದಿದ್ದ ಎರಡು ಹೆಬ್ಬಾವುಗಳನ್ನು ಉರಗತಜ್ಞ, ಅಗ್ನಿಶಾಮಕದಳ ಸಿಬ್ಬಂದಿ ಹಾಗೂ ಅರಣ್ಯಾಧಿಕಾರಿಗಳು ರಕ್ಷಣೆ ಮಾಡಿದ್ದಾರೆ. ಹಾವಂಜೆ ಸಮೀಪದ ಜಮೀನನ್ನು ಲೆವೆಲ್ ಮಾಡುವ ಸಂದರ್ಭ ಹೆಬ್ಬಾವುಗಳು ಬಾವಿಗೆ ಬಿದ್ದಿತ್ತು. ಸುಮಾರು ಐದಾರು ತಿಂಗಳ ಕಾಲ ಯಾರ ಕಣ್ಣಿಗೂ ಹಾವುಗಳು ಕಾಣಿಸಿಕೊಂಡಿರಲಿಲ್ಲ. ವಾರಗಳ ಹಿಂದೆ ಸ್ಥಳೀಯರಿಗೆ ಹೆಬ್ಬಾವು ಇರುವುದನ್ನು ನೋಡಿದ್ದಾರೆ. ಉಡುಪಿಯ...

ರಾಯಚೂರು: ಟವರ್ ಏರಿ ಸರ್ಕಾರ ವಿರುದ್ಧ ಕೃಷಿ ವಿವಿ ವಿದ್ಯಾರ್ಥಿ ಪ್ರತಿಭಟನೆ

1 year ago

ರಾಯಚೂರು: ಕೃಷಿ ಇಲಾಖೆ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ ರಾಜ್ಯ ಸರ್ಕಾರ ಕೃಷಿ ತಾಂತ್ರಿಕ ಪದವಿಧರರನ್ನು ಕಡೆಗಣಿಸಿದ್ದನ್ನ ಖಂಡಿಸಿ ರಾಯಚೂರು ಕೃಷಿ ವಿವಿ ಎಂಜಿನಿಯರ್ ವಿದ್ಯಾರ್ಥಿಯೋರ್ವ ಮೊಬೈಲ್ ಟವರ್ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ಕೆಲ ಕಾಲ ಆತಂಕಕ್ಕೆ ಕಾರಣವಾಗಿತ್ತು. ರಾಯಚೂರು ಕೃಷಿ...

ಸಚಿವರಾಗಿ ಕೆಲಸ ಮಾಡದ್ದಕ್ಕೆ ಈಗ ಮಾತನಾಡಲು ಕೂರಿಸಲಾಗಿದೆ: ಗುಂಡೂರಾವ್‍ಗೆ ಪ್ರತಾಪ್ ಸಿಂಹ ತಿರುಗೇಟು

1 year ago

ಮೈಸೂರು: ಬಿಎಸ್ ಯಡಿಯೂರಪ್ಪನವರನ್ನು ಉಗಾಂಡದ ಸರ್ವಾಧಿಕಾರಿಯಾದ  ಇದಿ ಅಮೀನ್‍ಗೆ ಹೋಲಿಸಿ ವ್ಯಂಗ್ಯವಾಗಿ ಮಾತನಾಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿ ಸಾಕಷ್ಟು ಪ್ರಶ್ನೆಗಳನ್ನು ಕೇಳುವ ಮೂಲಕ ತಿರುಗೇಟು ನೀಡಿದ್ದಾರೆ. ಮಾಧ್ಯಮಗಳ ಜೊತೆ ನಗರದಲ್ಲಿ ಮಾತನಾಡಿದ...

ವಾಟ್ಸಪ್ ಓದುಗರು ಗ್ರೂಪ್‍ನಿಂದ ನಾಳೆ ಉಡುಪಿಯಲ್ಲಿ ಅಮರಾವತಿ ಚಿತ್ರ ಪ್ರದರ್ಶನ

1 year ago

ಉಡುಪಿ: ವಾಟ್ಸಾಪ್ ಓದುಗರು ಗ್ರೂಪ್ ಪೌರ ಕಾರ್ಮಿಕರ ಜೀವನ ಕಥೆಯುಳ್ಳ, ಬಿ.ಎಂ.ಗಿರಿರಾಜ್ ನಿರ್ದೇಶನದ “ಅಮರಾವತಿ” ಕನ್ನಡ ಚಲನಚಿತ್ರ ಪ್ರದರ್ಶನ ಫೆಬ್ರವರಿ 23 ಗುರುವಾರದಂದು ಉಡುಪಿಯ ಡಯಾನಾ ಥಿಯೇಟರಿನಲ್ಲಿ ಆಯೋಜಿಸಿದೆ. ಸಂಜೆ 4.30 ಹಾಗೂ 7.30 ಕ್ಕೆ ಎರಡು ಶೋಗಳು ಗುರುವಾರದಂದು ಪ್ರದರ್ಶನಗೊಳ್ಳಲಿವೆ....

ಬ್ಲಾಕ್‍ಮೇಲ್ ಕೇಸ್: ಪ್ರೇಮಲತಾ ದಂಪತಿಗೆ ಕ್ಲೀನ್‍ಚಿಟ್

1 year ago

ಕಾರವಾರ: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀ ಬ್ಲಾಕ್ ಮೇಲ್ ಕೇಸ್‍ನಲ್ಲಿ ಪ್ರೇಮಲತಾ ದಂಪತಿಗೆ ಕ್ಲೀನ್ ಚಿಟ್ ಸಿಕ್ಕಿದೆ. ಬ್ಲಾಕ್‍ಮೇಲ್ ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಸಿಐಡಿ ಯಾವುದೇ ಸಾಕ್ಷ್ಯಗಳು ಲಭ್ಯವಾಗದ ಹಿನ್ನೆಲೆಯಲ್ಲಿ ಇಂದು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿರುವ ಜಿಎಂಎಫ್‍ಸಿ ನ್ಯಾಯಾಲಯಕ್ಕೆ...

ಚಿತ್ರದುರ್ಗ: ಆಟೋಗೆ ಲಾರಿ ಡಿಕ್ಕಿ ಸ್ಥಳದಲ್ಲೇ ಇಬ್ಬರ ಸಾವು, 11 ಜನರಿಗೆ ಗಾಯ

1 year ago

ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದ ಬಳಿ ಭೀಕರ ಅಪಘಾತಕ್ಕೆ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಆಟೋಗೆ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, 11 ಜನರಿಗೆ ಗಾಯಗೊಂಡಿದ್ದಾರೆ. ಗಂಗಮ್ಮ (34) ಮತ್ತು ಚಿರಂಜೀವಿ (28) ಮೃತ...

1000 ರೂ. ನೋಟು ಮತ್ತೆ ಬರುತ್ತಾ?: ಎಲ್ಲ ವದಂತಿಗೆ ತೆರೆ ಎಳೆದ ಸರ್ಕಾರ

1 year ago

ನವದೆಹಲಿ: 2016ರ ನವೆಂಬರ್ 8ರಂದು ನಿಷೇಧಿಸಲಾದ 1 ಸಾವಿರ ರೂ. ನೋಟನ್ನು ಮತ್ತೆ ಚಲಾವಣೆಗೆ ತರುವ ಬಗ್ಗೆ ಸರ್ಕಾರ ಚಿಂತಿಸಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್ ದಾಸ್ ಸ್ಪಷ್ಟಪಡಿಸಿದ್ದಾರೆ. 1 ಸಾವಿರ ರೂ. ನೋಟನ್ನು ಹೊಸ ರೂಪದಲ್ಲಿ ಶೀಘ್ರದಲ್ಲೇ ಚಲಾವಣೆಗೆ...