Friday, 23rd February 2018

Recent News

1 year ago

ಕೊಪ್ಪಳ: ದೇವಸ್ಥಾನದ ಹುಂಡಿಯಲ್ಲಿ ಪತ್ತೆಯಾಯ್ತು 2000 ರೂ. ನಕಲಿ ನೋಟು

ಕೊಪ್ಪಳ: ದೇವಸ್ಥಾನದ ಕಾಣಿಕೆ ಡಬ್ಬಿಯಲ್ಲಿ 500 ಹಾಗೂ 2 ಸಾವಿರ ರೂ. ನಕಲಿ ನೋಟುಗಳು ಪತ್ತೆಯಾದ ಘಟನೆ ಕೊಪ್ಪಳದಲ್ಲಿ ನಡೆದಿದೆ. ಇಲ್ಲಿನ ಗಂಗಾವತಿ ನಗರದ ಹಿರೇಜಂತಕಲ್ ಐತಿಹಾಸಿಕ ದೇವಸ್ಥಾನದ ಪ್ರಸನ್ನ ಪಂಪಾತಿಯ ಕಾಣಿಕೆ ಹುಂಡಿಯಲ್ಲಿ ಈ ನೋಟುಗಳು ದೊರೆತಿವೆ. ದೇವಸ್ಥಾನದ ಆಡಳಿತಾಧಿಕಾರಿ ಗಂಗಾವತಿಯ ತಹಶೀಲ್ದಾರ್ ಎಲ್.ಡಿ. ಚಂದ್ರಕಾಂತ್ ನೇತೃತ್ವದಲ್ಲಿ ದೇವಸ್ಥಾನದ ಆವರಣದಲ್ಲಿ ಕಾಣಿಕೆ ಹುಂಡಿಯಲ್ಲಿನ ಹಣ ಸಂಗ್ರಹಿಸಲು ಮುಂದಾಗಿದ್ರು. ನಂವೆಬರ್ 8 ರಂದು 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧವಾಗಿದೆ. ಆದ್ರೆ ಹುಂಡಿ ತೆಗೆದಾಗ ನಿಷೇಧಿತ […]

1 year ago

ಆಂಬುಲೆನ್ಸ್ ಇಲ್ಲದೆ ಟಿವಿಎಸ್‍ನಲ್ಲೇ ಮಗಳ ಶವ ಸಾಗಿಸಿದ್ರು!

ತುಮಕೂರು: ಒಡಿಸ್ಸಾದಲ್ಲಿ ವ್ಯಕ್ತಿಯೊಬ್ಬರು ತನ್ನ ಪತ್ನಿಯ ಶವವನ್ನು ಹೆಗಲ ಮೇಲೆ ಸಾಗಿಸಿದ್ದಂತೆ ನಮ್ಮ ರಾಜ್ಯದಲ್ಲಿಯೂ ಅಂತದ್ದೇ ದುರಂತವೊಂದು ನಡೆದಿದೆ. ಅದೂ ಇಬ್ಬರು ಪ್ರಭಾವಿ ಸಚಿವರ ತವರು ಜಿಲ್ಲೆ, ದಕ್ಷ ಹಾಗೂ ಅಭಿವೃದ್ಧಿ ಪರ ಶಾಸಕ ಎಂಬ ಹೆಸರು ಪಡೆದಿರುವ ಕೆ.ಎನ್ ರಾಜಣ್ಣ ಅವರ ಕ್ಷೇತ್ರದಲ್ಲಿಯೇ ಈ ಘಟನೆ ನಡೆದಿರುವುದು ವಿಪರ್ಯಾಸ. ಜಿಲ್ಲೆಯ ಮಧುಗಿರಿ ತಾಲೂಕಿನ ಕೊಡಿಗೇನಹಳ್ಳಿಯಲ್ಲಿ...

ಕಾಫಿನಾಡಲ್ಲಿ ಕಣ್ಮನ ತಣಿಸಿದ ಬೈಕ್ ರೇಸ್

1 year ago

ಚಿಕ್ಕಮಗಳೂರು: ಕಾಫಿನಾಡು ಚಿಕ್ಕಮಗಳೂರಿನ ಮುಗುಳುವಳ್ಳಿಯಲ್ಲಿ ನಡೆದ ಮನಮೋಹಕ ಬೈಕ್ ರೇಸ್ ನೋಡುಗರ ಮನ ತಣಿಸ್ತು. ಕಳೆದ 10 ವರ್ಷಗಳಿಂದ ನಿಂತಿದ್ದ ಬೈಕ್ ರೇಸ್‍ಗೆ ಇಂದು ಚಾಲನೆ ಸಿಕ್ಕಂತಾಗಿದ್ದು ಮುಂದಿನ ದಿನಗಳಲ್ಲಿ ಕಾರ್ ರೇಸ್‍ನಂತೆ ಬೈಕ್ ರೇಸನ್ನೂ ಪ್ರತಿವರ್ಷ ನಡೆಸೋದಾಗಿ ಆಯೋಜಕರು ವಿಶ್ವಾಸ...

ಏರ್‍ ಶೋದಿಂದ ತೆರಳುತ್ತಿದ್ದ ಹೆಲಿಕಾಪ್ಟರ್ ಬನ್ನೇರುಘಟ್ಟದಲ್ಲಿ ತುರ್ತು ಭೂಸ್ಪರ್ಶ

1 year ago

ಆನೇಕಲ್: ತಾಂತ್ರಿಕ ದೋಷ ದಿಂದಾಗಿ ಭಾರತೀಯ ವಾಯುಸೇನೆಗೆ ಸೇರಿದ ಹೆಲಿಕಾಪ್ಟರ್ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬನ್ನೇರುಘಟ್ಟದ ಬಳಿಯ ಬೇಗೆಹಳ್ಳಿಯಲ್ಲಿ ಭಾನುವಾರ ಸಂಜೆ ತುರ್ತು ಭೂಸ್ಪರ್ಶ ಮಾಡಿದೆ. ಯಲಹಂಕದಲ್ಲಿ ನಡೆದಿದ್ದ ಏರೋ ಇಂಡಿಯಾ ಪ್ರದರ್ಶನಕ್ಕೆ ಆಗಮಿಸಿದ್ದ ಹೆಲಿಕಾಪ್ಟರ್ ಇಂದು ಸಂಜೆ ಎಚ್‍ಎಎಲ್‍ಗೆ ತೆರಳುತ್ತಿತ್ತು....

ಮಂಗಳೂರಿನಲ್ಲಿ ಕೊಲೆ, ಶ್ರೀಮಂತರ ದರೋಡೆಗೆ ಸಂಚು ರೂಪಿಸಿದ್ದ 7 ಮಂದಿ ಸೆರೆ

1 year ago

ಮಂಗಳೂರು: ನಗರದ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ವ್ಯಕ್ತಿಯೊಬ್ಬರ ಕೊಲೆಗೆ ಹಾಗೂ ಶ್ರೀಮಂತ ವ್ಯಕ್ತಿಗಳ ದರೋಡೆಗಾಗಿ ಸಂಚು ರೂಪಿಸುತ್ತಿದ್ದ ಕುಖ್ಯಾತ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 2 ಪಿಸ್ತೂಲ್, ಸಜೀವ ಗುಂಡುಗಳು, ಚೂರಿ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳೂರು...

ಕುಡಿತ, ಗಾಂಜಾ ಮತ್ತಿನಲ್ಲಿ ಸ್ನೇಹಿತನನ್ನೇ ಕೊಚ್ಚಿ ಕೊಂದ್ರು!

1 year ago

ಮಂಗಳೂರು: ಕುಡಿತ ಹಾಗೂ ಗಾಂಜಾ ಮತ್ತಿನಲ್ಲಿ ಸ್ನೇಹಿತನನ್ನೇ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಭಾನುವಾರ ಮಧ್ಯರಾತ್ರಿ ಮಂಗಳೂರು ನಗರದ ಮರೋಳಿಯಲ್ಲಿ ನಡೆದಿದೆ. ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತ ಸರಪಲ್ಲ ನಿವಾಸಿ ಪ್ರತಾಪ್ ಕೊಲೆಗೀಡಾದ ಯುವಕ. ಗಾಂಜಾ ಸೇವನೆ ಹಾಗೂ ಮದ್ಯಪಾನ...

ಐಪಿಎಲ್ 2017: ಪುಣೆ ನಾಯಕ ಸ್ಥಾನದಿಂದ ಧೋನಿಗೆ ಕೊಕ್, ಸ್ಮಿತ್‍ಗೆ ಮಣೆ

1 year ago

ಪುಣೆ: ಐಪಿಎಲ್ 10ನೇ ಆವೃತ್ತಿಯಲ್ಲಿ ಪುಣೆ ತಂಡದ ನಾಯಕ ಸ್ಥಾನದಿಂದ ಧೋನಿ ಅವರನ್ನು ಕಿತ್ತುಹಾಕಲಾಗಿದ್ದು, ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ತಂಡವನ್ನು ಮುನ್ನಡೆಸಲಿದ್ದಾರೆ. ಐಪಿಎಲ್ 2017ನೇ ಆವೃತ್ತಿಯ ಆಟಗಾರರ ಹರಾಜು ಪ್ರಕ್ರಿಯೆ ನಡೆಯುವ ಮುನ್ನಾ ದಿನ ಈ ಮಹತ್ವದ ಬೆಳವಣಿಗೆ ನಡೆದಿದೆ....

ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆಸಿದ್ರೆ ಮಗಳನ್ನೇ ರೇಪ್, ಕೊಲೆ ಮಾಡಿ ಆತ್ಮಹತ್ಯೆ ಮಾಡ್ಕೊಂಡ!

1 year ago

ಕಲಬುರ್ಗಿ: ಕುಟುಂಬಕ್ಕೆ ಆಶ್ರಯವಾಗಲಿ ಅಂತಾ ಕರೆ ತಂದರೆ ಮಗಳ ಪಾಲಿಗೆ ಸೋದರ ಮಾವನೇ ವಿಲನ್ ಆದ ಹೀನಾಯ ಘಟನೆ ಕಲಬುರ್ಗಿ ಜಿಲ್ಲೆಯ ಕೋಟನೂರ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ. ಇದೀಗ ಕಲಬುರ್ಗಿ ನಗರದ ಹೊರವಲಯದ ಕೋಟನೂರ(ಡಿ) ಗ್ರಾಮದ ನಿವಾಸಿಯಾಗಿರುವ ತಾಯಿ ಶಾಂತಾಬಾಯಿ...