Tuesday, 26th September 2017

2 days ago

ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕಿಸ್ತಾನ!

ನ್ಯೂಯಾರ್ಕ್: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಭಾರತದ ವಿರುದ್ಧ ಆರೋಪಗಳನ್ನು ಮಾಡಲು ಹೋಗಿ ತನ್ನ ಮಾನವನ್ನೇ ಹರಾಜು ಹಾಕಿ ನಗೆಪಾಟಲಿಗೆ ಪಾಕಿಸ್ತಾನ ಗುರಿಯಾಗಿದೆ. ವಿಶ್ವ ಸಂಸ್ಥೆಯ 72ನೇ ಮಹಾ ಅಧಿವೇಶನದಲ್ಲಿ ಭಾರತದ ವಿದೇಶಾಂಗ ಇಲಾಖೆ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ನೈಜ ಬಣ್ಣವನ್ನು ತೆರೆದಿಟ್ಟಿದ್ದರು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತ ಭಯೋತ್ಪಾದನೆಯ ತವರು ನೆಲ ಎಂಬ ಆರೋಪವನ್ನು ಮಾಡಿತ್ತು. ಆದರೆ ಈ ಆರೋಪವನ್ನು ಮಾಡಿದ ಕೆಲವೇ ಗಂಟೆಗಳಲ್ಲಿ ಪಾಕಿಸ್ತಾನ ಮಾನ ವಿಶ್ವಸಂಸ್ಥೆಯಲ್ಲಿ ತನ್ನ ಅಧಿಕಾರಿಯ ಮೂಲಕ ಹರಾಜು ಆಗಿದೆ. […]

3 days ago

ಎಲ್ಲಾ ಮದರಸಾಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜ ಹಾರಿಸಿ ಎಂದು ಕೇಳಿದ ಮಧ್ಯಪ್ರದೇಶದ ಶಿಕ್ಷಣ ಸಚಿವ

ಮಧ್ಯಪ್ರದೇಶ: ಮಕ್ಕಳಲ್ಲಿ ರಾಷ್ಟ್ರಪ್ರೇಮ ಬೆಳಸಲು ಮದರಸಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜವನ್ನು ಹಾರಿಸಬೇಕು. ಜೊತೆಯಲ್ಲಿ ರಾಷ್ಟ್ರಗೀತೆಯನ್ನು ಹಾಡಬೇಕು ಎಂದು ಮಧ್ಯ ಪ್ರದೇಶದ ಶಿಕ್ಷಣಸಚಿವ ವಿಜಯ್ ಶಾ ಹೇಳಿದ್ದಾರೆ. ಶುಕ್ರವಾರದಂದು ಭೋಪಾಲ್‍ನಲ್ಲಿ ಮಧ್ಯಪ್ರದೇಶ ಮದರಸ ಮಂಡಳಿಯ 20ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ವಿಜಯ್ ಶಾ, ಮಧ್ಯಪ್ರದೇಶದ ಎಲ್ಲಾ ಮದರಸಗಳಲ್ಲಿ ಪ್ರತಿದಿನ ತ್ರಿವರ್ಣ ಧ್ವಜವನ್ನ ಹಾರಿಸಬೇಕು, ರಾಷ್ಟ್ರಗೀತೆ...

ಹಾರ್ದಿಕ್ ಪಾಂಡ್ಯ ರನೌಟ್ ಆದ್ರೂ ನಾಟೌಟ್ ಆಗಿದ್ದು ಹೇಗೆ?

4 days ago

ಕೊಲ್ಕತ್ತಾ: ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತದ ತಂಡದ ಸ್ಟಾರ್ ಆಟಗಾರ ಹಾರ್ಧಿಕ್ ಪಾಂಡ್ಯ ನಾಟೌಟ್ ತೀರ್ಪು ಹೆಚ್ಚು ಚರ್ಚೆಗೆ ಗ್ರಾಸವಾಗಿದೆ. ಪಂದ್ಯದ 45ನೇ ಓವರ್‍ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ ಕೇನ್ ರಿಚರ್ಡ್ ಸನ್ ಫುಲ್ಟಾಸ್ ಬಾಲ್...

ಮಿಲಿಟರಿ ಹೆಲಿಕಾಪ್ಟರ್‍ ಗುರಿ ತಪ್ಪಿ ರಾಕೆಟ್ ಸಿಡಿತ, ಸ್ಥಳದಲ್ಲಿದ್ದ ವಾಹನ ಢಮಾರ್! ವಿಡಿಯೋ ನೋಡಿ

6 days ago

ಮಾಸ್ಕೋ: ರಷ್ಯಾದ ಮಿಲಿಟರಿ ಅಭ್ಯಾಸದ ವೇಳೆ ಎಡವಟ್ಟಾಗಿದ್ದು, ಹೆಲಿಕಾಪ್ಟರ್ ನಿಂದ ಚಿಮ್ಮಿದ ರಾಕೆಟ್ ನಿಲುಗಡೆ ಮಾಡಿದ್ದ ವಾಹನದ ಮೇಲೆ ಬಿದ್ದಿದ್ದು, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ. ಪಶ್ಚಿಮ ಭಾಗದಲ್ಲಿ ರಷ್ಯಾ ಸೇನೆ ಮಿಲಿಟರಿ ಯುದ್ಧ ಅಭ್ಯಾಸ ನಡೆಸುತ್ತಿದ್ದು ಹೆಲಿಕಾಪ್ಟರ್ ಮೂಲಕ ರಾಕೆಟ್ ಉಡಾಯಿಸುತಿತ್ತು....

ಪ್ರಬಲ ಭೂಕಂಪಕ್ಕೆ ಮೆಕ್ಸಿಕೋ ತತ್ತರ – 149 ಬಲಿ

6 days ago

ಮೆಕ್ಸಿಕೋ: ಸತತ ಎರಡನೇ ಬಾರಿ ಮೆಕ್ಸಿಕೋದಲ್ಲಿ ಮಂಗಳವಾರ ಸಂಭವಿಸಿದ ಭಾರೀ ಭೂಕಂಪದಲ್ಲಿ ಮೃತಪಟ್ಟವವರ ಸಂಖ್ಯೆ 149ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪಕದಲ್ಲಿ 7.1ರಷ್ಟು ತೀವ್ರತೆಯ ಕಂಪನ ದಾಖಲಾಗಿದೆ. 51 ಕಿಲೋ ಮೀಟರ್ ಆಳದ ಭೂಗರ್ಭದಲ್ಲಿ ಘಟಿಸಿರುವ ಕಂಪನಕ್ಕೆ ಸುಮಾರು 49 ಗಗನಚುಂಬಿ ಕಟ್ಟಡಗಳು...

ಜಾಗತಿಕ ಸಮುದಾಯದ ಒತ್ತಡಕ್ಕೆ ಭಯಪಡಲ್ಲ: ಆಂಗ್ ಸಾನ್ ಸೂಕಿ

6 days ago

ನೇಪಿಡಾ: ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆ ಆಗುತ್ತಿರುವ ರೋಹಿಂಗ್ಯಾ ಮುಸ್ಲಿಮರ ಸಂಘರ್ಷದಲ್ಲಿ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ವಿಜೇತೆ ಆಂಗ್ ಸಾನ್ ಸೂಕಿ ಹೇಳಿದ್ದಾರೆ. ಮ್ಯಾನ್ಮಾರ್ ವಿದೇಶಾಂಗ ಸಚಿವೆ ಆಗಿರುವ ಆಂಗ್ ಸಾನ್ ಸೂಕಿ, ತಮ್ಮ...

ಕೊರಿಯಾ ಓಪನ್ ಸೂಪರ್ ಸಿರೀಸ್: ಚೀನಾದ ಬಿಂಗ್ ಜಿವೊ ರನ್ನು ಸೋಲಿಸಿ ಫೈನಲ್‍ಗೆ ಲಗ್ಗೆಯಿಟ್ಟ ಪಿ.ವಿ.ಸಿಂಧು

1 week ago

ಸಿಯೋಲ್: ಕೊರಿಯಾ ಓಪನ್ ಸೂಪರ್ ಸಿರೀಸ್ ನ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಒಲಿಂಪಿಕ್ ಬೆಳ್ಳಿ ವಿಜೇತೆ ಪಿ.ವಿ.ಸಿಂಧು ಫೈನಲ್ ಪ್ರವೇಶಿಸಿದ್ದಾರೆ. ಇಂದು ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಸೆಮಿಫೈನಲ್ ನಲ್ಲಿ ಚೀನಾದ ಬಿಂಗ್ ಜಿವೊ ಅವರನ್ನು ಪಿ.ವಿ.ಸಿಂಧು 21-10, 17-21, 21-16...

ಮಹಿಳೆ ಮೇಲೆ 150 ಬಾರಿ ಅತ್ಯಾಚಾರವೆಸಗಿದ ಮಾಜಿ ಕ್ರಿಕೆಟಿಗನಿಗೆ 18 ವರ್ಷ ಜೈಲು!

2 weeks ago

ಲಂಡನ್: ಮಹಿಳೆಯೊಬ್ಬರ ಮೇಲೆ 10 ವರ್ಷಗಳಲ್ಲಿ 150 ಕ್ಕೂ ಹೆಚ್ಚು ಬಾರಿ ಅತ್ಯಾಚಾರವೆಸಗಿದ ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟ್ ಆಟಗಾರನೊಬ್ಬನಿಗೆ ನ್ಯಾಯಾಲಯ 18 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 47 ವರ್ಷದ ಡಿಯೊನ್ ತಾಲ್ಜರ್ಡ್ ಎಂಬ ಬಲಗೈ ವೇಗಿ ಶಿಕ್ಷೆಗೊಳಗಾಗಿರೋ ಕ್ರಿಕೆಟರ್....