Saturday, 24th March 2018

Recent News

1 day ago

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅಸ್ವಸ್ಥ- ಶಿಮ್ಲಾದಿಂದ ದೆಹಲಿಗೆ ಶಿಫ್ಟ್

ಶಿಮ್ಲಾ: ಯುಪಿಎ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಶಿಮ್ಲಾದಿಂದ ಸುಮಾರು 15 ಕಿಲೋ ಮೀಟರ್ ದೂರದ ಚರಾಬ್ರಾ ಪ್ರದೇಶದಲ್ಲಿ ಪ್ರಿಯಾಂಕ ಅವರ ನಿರ್ಮಾಣ ಹಂತದ ಮನೆಯನ್ನು ಪರಿಶೀಲಿಸಲು ಬಂದಾಗ ನಿತ್ರಾಣಗೊಂಡು ತೀವ್ರ ಬಳಲಿದ್ದ ಕಾರಣ ದೆಹಲಿಗೆ ವಾಪಸ್ ಕರೆದೊಯ್ಯಲಾಗಿದೆ. ಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ, ತಮ್ಮ ಮಗಳು ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಜೊತೆ ಶಿಮ್ಲಾಗೆ ಭೇಟಿ ನೀಡಿದ್ದ ವೇಳೆ ಅಸ್ವಸ್ಥರಾಗಿದ್ದರು. ತಕ್ಷಣ ಅವರನ್ನು ಶಿಮ್ಲಾದ ಇಂದಿರಾ ಗಾಂಧಿ ವೈದ್ಯಕೀಯ ಕಾಲೇಜಿ (ಐಜಿಎಂಸಿ) ಗೆ […]

1 day ago

ಏಕ್, ದೋ, ತೀನ್..! ವಿವಾದದ ಬಗ್ಗೆ ಕೊನೆಗೂ ಮೌನ ಮುರಿದ ಸರೋಜ್ ಖಾನ್

ಮುಂಬೈ: ಹಿರಿಯ ನೃತ್ಯ ನಿರ್ದೇಶಕಿ ಸರೋಜ್ ಖಾನ್‍ರವರು ಏಕ್ ದೋ ತೀನ್ ಗೀತೆಯ ವಿವಾದದ ಬಗ್ಗೆ ಮಾತನಾಡಿದ್ದಾರೆ. ನೃತ್ಯ ನಿರ್ದೇಶಕರಾದ ಅಹ್ಮದ್ ಖಾನ್ ಮತ್ತು ಗಣೇಶ್ ಆಚಾರ್ಯರ ಪರಿಶ್ರಮದ ಬಗ್ಗೆ ಹೆಮ್ಮೆ ಹಾಗೂ ಸಂತಸ ವ್ಯಕ್ತಪಡಿಸಿದ್ದಾರೆ ಮತ್ತು ಅವರಿಗೆ ನನ್ನ ಆಶೀರ್ವಾದ ಎಂದಿಗೂ ಇರುತ್ತದೆ ಎಂದು ಹೇಳಿದ್ದಾರೆ. ಏಕ್, ದೋ, ತೀನ್,  ಚಾರ್ ಹಾಡಿನ ವಿರುದ್ಧ...

ಕಪಿಲ್-ಸುನಿಲ್ ಗ್ರೋವರ್ ಮತ್ತೊಮ್ಮೆ ಜೊತೆಯಗ್ತಾರಾ? ಟ್ವಿಟ್ಟರ್ ನಲ್ಲಿ ಇಬ್ರು ನಟರೂ ಹೇಳಿದ್ದು ಹೀಗೆ

1 day ago

ಮುಂಬೈ: ತಮ್ಮ ಹಾಸ್ಯದ ಜುಗಲ್‍ಬಂದಿಯ ಮೂಲಕವೇ ದೇಶಾದ್ಯಂತ ಪರಿಚಿತರಾಗಿರುವ ಕಪಿಲ್ ಶರ್ಮಾ ಮತ್ತು ಸುನಿಲ್ ಗ್ರೋವರ್ ಇಬ್ಬರನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ಕಾತುರರಾಗಿದ್ದರೆ. ಆದ್ರೆ ಇಬ್ಬರ ನಡುವಿನ ಕಲಹದಿಂದಾಗಿ ಕಿರುತೆರೆಯಲ್ಲಿ ಪ್ರಸಿದ್ಧಿ ಪಡೆದಿದ್ದ ಶೋ ಕೂಡ ಕೊನೆಯಾಯ್ತು. ಸದ್ಯ ಕಪಿಲ್...

ಸಿಗರೇಟ್ ಗಾಗಿ 22 ವರ್ಷದ ತರುಣನನ್ನು ನಾಲ್ವರು, 6 ಬಾರಿ ಇರಿದು ಕೊಂದ್ರು!

2 days ago

ನವದೆಹಲಿ: ಸಿಗರೇಟ್ ಕೊಡಲಿಲ್ಲ ಎಂದು 22 ವರ್ಷದ ಯುವಕನನ್ನು ನಾಲ್ವರು ಸೇರಿ 6 ಬಾರಿ ಇರಿದು ಕೊಲೆ ಮಾಡಿರುವ ಘಟನೆ ನಗರದ ನೇತಾಜಿ ಸುಭಾಷ್ ಪ್ಲೇಸ್ ಸಿಗ್ನಲ್ ನಲ್ಲಿ ನಡೆದಿದೆ. ಮೋಹಿತ್ ಕೊಲೆಯಾದ ದುರ್ದೈವಿ. ಈ ಘಟೆನೆ ಬುಧವಾರ ರಾತ್ರಿ ನಡೆದಿದೆ....

ಯಾವಾಗ್ಲೂ ಇಂಗ್ಲಿಷ್ ನಲ್ಲೇ ಮಾತಾಡ್ತಾನೆ ಅಂತ ಕತ್ತು ಸೀಳಿ, 54 ಬಾರಿ ಇರಿದು ಕೊಂದೇ ಬಿಟ್ಟ!

2 days ago

ಮುಂಬೈ: 21 ವರ್ಷದ ಯುವಕನೊಬ್ಬ 18 ವರ್ಷದ ತನ್ನ ಗೆಳೆಯನನ್ನೇ ಕತ್ತು ಸೀಳಿ ಬಳಿಕ 54 ಬಾರಿ ಇರಿದು ಕೊಲೆಗೈದ ಆಘಾತಕಾರಿ ಘಟನೆಯೊಂದು ನಗರದಲ್ಲಿ ನಡೆದಿದೆ. ಮೊಹಮ್ಮದ್ ಆಫ್ರೋಜ್ ಆಲಂ ಶೇಖ್ ಎಂಬ ಯುವಕನನ್ನು ಮೊಹಮ್ಮದ್ ಅಮೀರ್ ಅಬ್ದುಲ್ ವಹೀದ್ ರಹೀನ್...

7 ವರ್ಷ ಬಳಿಕ ಮತ್ತೆ ಉಪವಾಸ ಸತ್ಯಾಗ್ರಹ ಆರಂಭಿಸಿದ ಅಣ್ಣಾ ಹಜಾರೆ

2 days ago

ನವದೆಹಲಿ: ಯುಪಿಎ ಆಡಳಿತ ಅವಧಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿ ಸಾವಿರಾರು ಜನರು ಬೀದಿಗಿಳಿದು ಹೋರಾಟ ನಡೆಸುವಂತೆ ಮಾಡಿದ್ದ ಹಿರಿಯ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ 7 ವರ್ಷಗಳ ಬಳಿಕ ಮತ್ತೆ ಸತ್ಯಾಗ್ರಹ ಆರಂಭಿಸಿದ್ದಾರೆ. ಅಂದು ಆಡಳಿತ ನಡೆಸುತ್ತಿದ್ದ ಕಾಂಗ್ರೆಸ್ ವಿರುದ್ಧ ಹೋರಾಟ...

7 ವರ್ಷದ ಬಾಲಕನ ಕನಸನ್ನು ನನಸು ಮಾಡಿದ ಮುಂಬೈ ಪೊಲೀಸ್ರು

2 days ago

ನವದೆಹಲಿ: ಕ್ಯಾನ್ಸರ್ ರೋಗಿಯಾದ ಏಳು ವರ್ಷದ ಬಾಲಕನ ಕನಸನ್ನು ಪೂರೈಸುವ ಮೂಲಕ ಮುಂಬೈ ಪೊಲೀಸರು ಮತ್ತೊಮ್ಮೆ ಜನರ ಹೃದಯಗಳನ್ನು ಗೆದ್ದಿದ್ದಾರೆ. 7 ವರ್ಷದ ಆರ್ಪಿತ್ ಮಂಡಲ್ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದಾನೆ. ಈತನಿಗೆ ಪೊಲೀಸ್ ಇನ್ಸ್ ಪೆಕ್ಟರ್ ಆಗಬೇಕೆಂಬ ಕನಸಿತ್ತು. ಆದ್ದರಿಂದ ಆರ್ಪಿತ್...

ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟ-5 ಸಾವು, 25 ಜನರಿಗೆ ತೀವ್ರ ಗಾಯ

2 days ago

ಪಾಟ್ನಾ: ಅಕ್ರಮ ಪಟಾಕಿ ಕಾರ್ಖಾನೆ ಸ್ಫೋಟಗೊಂಡು ಐದು ಜನ ಸಾವನ್ನಪ್ಪಿ, 25 ಜನರಿಗೆ ಗಂಭೀರ ಸ್ವರೂಪದ ಗಾಯಗಳಾಗಿರುವ ಘಟನೆ ಬಿಹಾರ ರಾಜ್ಯದ ನಳಂದ ಜಿಲ್ಲೆಯ ಜಲಾಲ್ಪುರ ಭಾಗದಲ್ಲಿ ಇಂದು ಬೆಳಗಿನ ಜಾವ ನಡೆದಿದೆ. ಸ್ಫೋಟದ ತೀವ್ರತೆಗೆ ಕಾರ್ಖಾನೆಯ ಅಕ್ಕ-ಪಕ್ಕದ ಸುಮಾರು ಐದು...