Saturday, 18th November 2017

Recent News

5 months ago

ಹಲ್ಲಿ ಮೈಮೇಲೆ ಎಸೆದು ಯವತಿಯರ ಅಂಗಾಂಗ ಮುಟ್ಟೋ ಗ್ಯಾಂಗ್ ಬೆಂಗ್ಳೂರಲ್ಲಿದೆ ಎಚ್ಚರ!

ಬೆಂಗಳೂರು: ಯುವತಿಯರೇ ಎಚ್ಚರ. ನೀವು ಬೆಂಗಳೂರಿನ ರಸ್ತೆಗಳಲ್ಲಿ ಓಡಾಡುತ್ತೀರಿ ಎಂದರೆ ಸ್ವಲ್ಪ ಎಚ್ಚರದಿಂದಿರಿ. ಯುವತಿಯರ ಮೇಲೆ ದೌರ್ಜನ್ಯವೆಸಗಲು ಬೆಂಗಳೂರಿನಲ್ಲಿ ಯುವಕರು ಹೊಸ ಟೆಕ್ನಿಕ್ ಬಳಸುತ್ತಿದ್ದಾರೆ. ತಮ್ಮ ವಾಂಛೆ ತೀರಿಸಿಕೊಳ್ಳಲು ಯುವಕರು ಯುವತಿಯರ ಮೇಲೆ ಹಲ್ಲಿಯನ್ನು ಎಸೆಯುತ್ತಾರೆ. ಬಳಿಕ ಅದನ್ನು ತೆಗೆಯುವ ನೆಪದಲ್ಲಿ ಬಂದು ಅಂಗಾಂಗ ಮುಟ್ಟಿ ಕಿರುಕುಳ ಕೊಟ್ಟಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಆಗಿದ್ದೇನು?: ಬಿಹಾರ ಮೂಲದ ಯುವತಿಯೊಬ್ಬಳು ಬೆಂಗಳೂರಿಗೆ 15 ದಿವಸದ ಟ್ರೈನಿಂಗ್ ಗೆಂದು ಆಗಮಿಸಿದ್ದಾಳೆ. ಎರಡು ದಿನಗಳ ಹಿಂದೆ ಇಂದಿರಾನಗರದ ಸಿಎಂಎಚ್ […]

5 months ago

ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾವು ಹಿಡಿದ ಮಹಿಳೆ!- ಮೈ ಜುಮ್ಮೆನಿಸೋ ವೈರಲ್ ವಿಡಿಯೋ ನೋಡಿ

  ವಾಷಿಂಗ್ಟನ್: ಮನೆಯಲ್ಲಿ ಜಿರಲೆ ಕಂಡ್ರೆ ಅದನ್ನ ಕಡ್ಡಿಯಲ್ಲೋ ಪೊರಕೆಯಲ್ಲೋ ಹಿಡಿದು ಹೊರಗೆಸೆಯುತ್ತಾರೆ. ಆದ್ರೆ ಹಾವು ಬಂದ್ರೆ ಹಾಗೆ ಮಾಡೋಕಾಗುತ್ತಾ? ಇಲ್ಲ ಅನ್ನೋದಾದ್ರೆ ಇಲ್ಲಿ ಕೇಳಿ, ಅಮೆರಿಕದಲ್ಲಿ ಮಹಿಳೆಯೊಬ್ಬರು ತಲೆದಿಂಬಿನ ಕವರ್‍ನಲ್ಲೇ ದೈತ್ಯ ಹಾಗೂ ಭಯಾನಕವಾದ ಹಾವನ್ನ ಹಿಡಿದು ಹೊರಗೆಸೆದಿದ್ದು, ಇದರ ವಿಡಿಯೋ ಈಗ ವೈರಲ್ ಆಗಿದೆ. ಇದನ್ನೂ ಓದಿ: ಮೃಗಾಲಯದ ಹುಲಿಗಳಿಗೆ ಜೀವಂತ ಕತ್ತೆಯನ್ನೇ ಮೇಲಿನಿಂದ...

ಯುವತಿಯರೇ ಎಚ್ಚರ: ಸಿನಿಮಾದಲ್ಲಿ ಆ್ಯಕ್ಟ್ ಮಾಡ್ಬೇಕು ಅಂತಾ ಆಡಿಷನ್ ಹೋಗೋ ಮೊದ್ಲು ಈ ಸುದ್ದಿ ಓದಿ

6 months ago

ಬೆಂಗಳೂರು: ಸ್ಯಾಂಡಲ್‍ವುಡ್ ನಲ್ಲಿ ಒಳ್ಳೆ ಸಿನಿಮಾಗಳು ಬರುತ್ತಿರುವಾಗಲೇ ಕನ್ನಡ ಚಿತ್ರರಂಗದ ತಲೆತಗ್ಗಿಸಿವಂತಹ ಕೆಲಸ ಮಾಡಿದ್ದಾರೆ ಕೆಲವರು. ಸಿನಿಮಾ ಮಾಡ್ತಿನಿ ನಿಮಗೆ ಅವಕಾಶಕೊಡ್ತಿನಿ ಅಂತ ಹೇಳಿ ದೂರದ ಪುಣೆಯಲ್ಲಿ ಅವಕಾಶಕ್ಕಾಗಿ ಕಾಯ್ತಿದ್ದ ಹೆಣ್ಣುಮಕ್ಕಳನ್ನ ಯಾಮಾರಿಸಿರೋ ಪ್ರಕರಣವೊಂದು ಬೆಳಕಿಗೆ ಬಂದಿದೆ. ರಾಮಾ ಶಾಮಾ ಭಾಮಾ,...

ಈಗ ಅಧಿಕೃತ: ಜುಲೈನಲ್ಲಿ ರಕ್ಷಿತ್- ರಶ್ಮಿಕಾ ಎಂಗೇಜ್‍ಮೆಂಟ್

6 months ago

ಉಡುಪಿ: ಸ್ಯಾಂಡಲ್‍ವುಡ್‍ನ ಕ್ಯೂಟ್ ಜೋಡಿ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಲವ್ ಸೈಲೆಂಟಾಗಿ ನಡೆಯುತ್ತಿದ್ದು, ಶೀಘ್ರದಲ್ಲೇ ಇವರಿಬ್ಬರ ಎಂಗೇಜ್‍ಮೆಂಟ್ ನಡೆಯಲಿದೆ. ಲವ್ ವಿಚಾರದ ಬಗ್ಗೆ ಮಾಧ್ಯಮಗಳು ಪ್ರಶ್ನೆ ಮಾಡಿದ್ದಕ್ಕೆ ನಮ್ಮದೇನು ಇಲ್ಲ ಅಂತ ಇಬ್ಬರೂ ಸುದ್ದಿಯನ್ನು ಸೈಡಿಗೆ ತಳ್ಳಿದ್ದರು. ಆದ್ರೆ...

2 ವರ್ಷ ಪ್ರೀತಿಸಿದವಳನ್ನ ನದಿಗೆ ತಳ್ಳಿದ ಪ್ರಿಯತಮ – ಕಾರಣ ಕೇಳಿದ್ರೆ ಶಾಕ್ ಆಗ್ತೀರ!

6 months ago

ಕಲಬುರಗಿ: ಪ್ರಿಯಕರನೊಬ್ಬ ಎರಡು ವರ್ಷಗಳ ಕಾಲ ಪ್ರೀತಿಸಿದ್ದ ಯುವತಿಯನ್ನು ನದಿಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಿದ ಘಟನೆ ಕಲಬುರಗಿ ತಾಲೂಕಿನ ಕುರಿಕೋಟಾ ಬ್ರಿಡ್ಜ್ ಬಳಿ ನಡೆದಿದೆ. ಶರಣು ಮತ್ತು ರೇಣುಕಾ ಎಂಬವರು ಕಳೆದ ಎರಡು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು...

ವಿಟಿಯು ಫಲಿತಾಂಶಕ್ಕಾಗಿ ಕಾಯ್ತಿದ್ದೀರಾ?- ಹಾಗಿದ್ರೆ ನೀವು ಈ ಸುದ್ದಿ ಓದ್ಲೇಬೇಕು

6 months ago

ಬೆಂಗಳೂರು: ಸಿಇಟಿ ಫಲಿತಾಂಶ ಪ್ರಕಟವಾದ ದಿನವೇ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್ ಸಿಕ್ಕಿದೆ. ಪ್ರತಿಷ್ಠಿತ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಮುಚ್ಚುವ ಭೀತಿ ಎದರಾಗಿದೆ. ಅಕ್ರಮದ ಗೂಡಾಗಿರುವ ವಿಶ್ವವಿದ್ಯಾಲಯದಲ್ಲಿ ಬಿಡಿಗಾಸು ಇಲ್ಲದೇ ಮುಚ್ಚುವ ಭೀತಿಯಿದೆ. 6 ತಿಂಗಳಾದ್ರೂ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಿಸದ ಪ್ರತಿಷ್ಠಿತ...

55 ವರ್ಷದಿಂದ ತುಂಬದ ಕೆರೆ 3 ದಿನದ ಮಳೆಗೆ ಭರ್ತಿಯಾಯ್ತು!

6 months ago

ಮೈಸೂರು: ಮೈಸೂರಿನಲ್ಲಿ ಕಳೆದ 3 ದಿನಗಳಿಂದ ನಿರಂತರ ಮಳೆ ಹಿನ್ನೆಲೆಯಲ್ಲಿ ಕಳೆದ 55 ವರ್ಷಗಳಿಂದ ಪೂರ್ಣವಾಗಿ ತುಂಬದ ಕೆರೆಯೊಂದು 3 ದಿನಕ್ಕೆ ಸಂಪೂರ್ಣವಾಗಿ ಭರ್ತಿಯಾಗಿದೆ. ನಂಜನಗೂಡು ತಾಲೂಕಿನ ಚುಂಚನಹಳ್ಳಿ ಗ್ರಾಮದ ಕೆರೆಯಲ್ಲಿ ಅಚ್ಚರಿಯ ಬೆಳವಣಿಗೆ ನಡೆದಿದ್ದು. ಸತತ ಮೂರು ದಿನದ ಮಳೆ...

50 ಲಕ್ಷ ರೂ. ಮೌಲ್ಯದ ಕಾಳಿಂಗ ಸರ್ಪದ ವಿಷ ಸಾಗಾಟ- ಮೈಸೂರಿನಲ್ಲಿ ಓರ್ವನ ಬಂಧನ

6 months ago

ಮೈಸೂರು: ಕಾಳಿಂಗ ಸರ್ಪದ ವಿಷ ಮಾರಾಟ ಮಾಡುತ್ತಿದ್ದ ಬೃಹತ್ ಜಾಲವೊಂದು ಮೈಸೂರಿನಲ್ಲಿ ಪತ್ತೆಯಾಗಿದೆ. ಸುಮಾರು 50 ಲಕ್ಷ ರೂ. ಮೌಲ್ಯದ ಕಾಳಿಂಗ ಸರ್ಪದ ವಿಷವನ್ನು ಅಕ್ರಮವಾಗಿ ಸಾಗಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿ, ಆತನಿಂದ ಒಂದು ಲೀಟರ್ ಕಾಳಿಂಗ ಸರ್ಪದ ವಿಷದ ಬಾಟಲಿಯನ್ನು ಅರಣ್ಯ...