Wednesday, 18th October 2017

Recent News

10 hours ago

ಚುನಾವಣೆಗೆ ಸ್ಪರ್ಧಿಸೋ ಆಸೆ ವ್ಯಕ್ತಪಡಿಸಿದ ಬಸವಾನಂದ ಸ್ವಾಮೀಜಿ: ಅಮಿತ್ ಶಾಗೆ ಬರೆದ ಪತ್ರದಲ್ಲಿ ಏನಿದೆ?

ಧಾರವಾಡ: ಜಿಲ್ಲೆಯ ಮನಗುಂಡಿ ಶ್ರೀ ಬಸವಾನಂದ ಸ್ವಾಮೀಜಿ ಯವರು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಈ ಕುರಿತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಅವರಿಗೂ ಪತ್ರವನ್ನು ಬರೆದಿದ್ದಾರೆ. ಧಾರವಾಡ ತಾಲೂಕಿನ ಮನಗುಂಡಿಯಲ್ಲಿ ಶ್ರೀ ಗುರು ಬಸವ ಮಹಾಮನೆ ಆಶ್ರಮ ಹೊಂದಿರುವ ಶ್ರೀ ಬಸವಾನಂದ ಸ್ವಾಮೀಜಿ, ತನಗೆ ದೃಷ್ಟಿ ಇಲ್ಲದೇ ಇದ್ದರೂ ಕಲಘಟಗಿ ಕ್ಷೇತ್ರದಿಂದ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಛೆ ಹೊಂದಿದ್ದೇನೆ ಎಂದು ಅಮಿತ್ ಶಾಗೆ ಪತ್ರವನ್ನು ಬರೆದಿದ್ದಾರೆ. ಸ್ವಾಮೀಜಿಗಳು ಬರೆದಿರುವ ಮೂರು ಪುಟಗಳ ಸುದೀರ್ಘ […]

10 hours ago

ಚನ್ನಪಟ್ಟಣದಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಡಿಕೆಶಿ, ಯೋಗೇಶ್ವರ್

ರಾಮನಗರ: ಇಂಧನ ಸಚಿವ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಯೋಗೇಶ್ವರ್ ಪರಸ್ಪರ ವಾಗ್ದಾಳಿ ನಡೆಸಿದ್ದಾರೆ. ಚನ್ನಪಟ್ಟಣ ಹೊರವಲಯದ ಖಾಸಗಿ ಹೋಟೆಲ್‍ನಲ್ಲಿ ಯೋಗೇಶ್ವರ್ ಮಾತನಾಡಿ ಡಿಕೆ ಸಹೋದರರ ವಿರುದ್ಧ  ಏಕವಚನದಲ್ಲಿ ಹರಿಹಾಯ್ದಿದ್ದಾರೆ. ಸಚಿವ ಡಿ.ಕೆ ಶಿವಕುಮಾರ್‍ರವರದ್ದು ಇದು ರಾಜಕೀಯದ ಅಂತಿಮಘಟ್ಟ. ಆತನ ಇತಿಹಾಸ ಇಡೀ ರಾಜ್ಯಕ್ಕೆ ಗೊತ್ತಿದ್ದು ಡಿಕೆಶಿ ಒಂದು ನೆಗೆಟಿವ್ ಫೋರ್ಸ್....

ಮಧ್ಯಾಹ್ನ ತೀರ್ಥರೂಪಿಣಿಯಾಗಿ ಭಕ್ತರಿಗೆ ಒಲಿದಳು ಕಾವೇರಿ

13 hours ago

ಮಡಿಕೇರಿ: ಕರುನಾಡ ಜೀವನದಿ ಕಾವೇರಿಯ ಉಗಮಸ್ಥಾನ ತಲಕಾವೇರಿಯಲ್ಲಿ ಇಂದು ಹಬ್ಬದ ವಾತಾವರಣ ಮನೆಮಾಡಿತ್ತು. ಪ್ರತಿವರ್ಷ ಭಕ್ತರಿಗೆ ದರ್ಶನ ನೀಡುವ ಕಾವೇರಿ ತಾಯಿ ಮಂಗಳವಾರ ಮಧ್ಯಾಹ್ನ 12.33ಕ್ಕೆ ತೀರ್ಥರೂಪಿಣಿಯಾಗಿ ಒಲಿದಳು. ಪುರೋಹಿತರು ಮಹಾ ಸಂಕಲ್ಪ ಪೂಜೆ, ಮಹಾಪೂಜೆ ಸಹಸ್ರನಾಮಾರ್ಚನೆ, ಮಹಾಮಂಗಳಾರತಿ ಮಾಡುತ್ತಿದ್ದಂತೆ ತೀರ್ಥಕುಂಡಿಕೆಯಿಂದ...

ಚನ್ನಗಿರಿ ಬೆಟ್ಟದಲ್ಲಿ ಸೆಲ್ಫಿ ದುರಂತ: ಜಲಪಾತದಿಂದ ನೂರು ಅಡಿ ಆಳಕ್ಕೆ ಬಿದ್ದು ವಿದ್ಯಾರ್ಥಿ ಸಾವು

14 hours ago

ಚಿಕ್ಕಬಳ್ಳಾಪುರ: ಸೆಲ್ಫಿ ತೆಗೆಯುವಾಗ ಜಲಪಾತದಿಂದ ನೂರು ಅಡಿ ಆಳಕ್ಕೆ ಆಯತಪ್ಪಿ ಬಿದ್ದು ಕಾಲೇಜು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕು ಬಳಿಯ ಚನ್ನಗಿರಿ ಬೆಟ್ಟದಲ್ಲಿ ನಡೆದಿದೆ. ವಿಶ್ವವಿಖ್ಯಾತ ನಂದಿಗಿರಿಧಾಮ ಪಕ್ಕದ ಚನ್ನಗಿರಿ ಬೆಟ್ಟದಲ್ಲಿ ಕಳೆದ ಒಂದು ತಿಂಗಳಿನಿಂದ ಜಲಪಾತ ಸೃಷ್ಟಿಯಾಗಿದ್ದು, ಜಲಪಾತ...

ರಾಕಿಂಗ್ ಸ್ಟಾರ್ ಯಶ್ ಎಷ್ಟು ಸಿಂಪಲ್ ಎಂಬುದಕ್ಕೆ ಈ ಸ್ಟೋರಿ ಓದಿ

15 hours ago

ಬೆಂಗಳೂರು: ಸ್ಯಾಂಡಲ್‍ವುಡ್ ರಾಕಿಂಗ್ ಸ್ಟಾರ್ ಯಶ್ ಸಿನಿಮಾ ಬಿಟ್ಟು ಖಾಸಗಿ ಜೀವನದಲ್ಲಿ ತುಂಬಾನೇ ಸಿಂಪಲ್ ಆಗಿರುತ್ತಾರೆ. ಯಶೋ ಮಾರ್ಗದ ಮೂಲಕ ಸಮಾಜಸೇವೆ ಮಾಡುತ್ತಾ ಅಭಿಮಾನಿಗಳನ್ನು ಪ್ರೀತಿಯಿಂದ ಕಾಣುತ್ತಾರೆ. ಇತ್ತೀಚೆಗೆ ಯಶ್ ಮತ್ತು ರಾಧಿಕಾ ಪಂಡಿತ್ ಔಟಿಂಗ್ ಗಾಗಿ ಬೆಂಗಳೂರಿನ ತಾಜ್ ವೆಸ್ಟೆಂಡ್...

ಬಿಜೆಪಿ ಸೇರಲಿದ್ದಾರೆ ಅನ್ನೋ ಉಹಾಪೋಹಗಳಿಗೆ ಸಚಿವ ಪ್ರಮೋದ್ ಮಧ್ವರಾಜ್ ಪ್ರತಿಕ್ರಿಯಿಸಿದ್ದು ಹೀಗೆ

15 hours ago

ಉಡುಪಿ: ನನ್ನನ್ನು ಬಿಟ್ಟುಬಿಡಿ. ಕೈಮುಗಿದು ಶಿರಬಾಗಿ ಕೇಳಿಕೊಳ್ಳುತ್ತೇನೆ. ಕೇಂದ್ರ ಸಚಿವ ಅನಂತ್ ಕುಮಾರ್ ಜೊತೆ ಸೌಜನ್ಯದ ಭೇಟಿ ಮಾಡಿದ್ದೇನೆ. ಗಾಳಕ್ಕೆ ಬಾಯಿ ಹಾಕುವ ಜಾತಿ ನಮ್ಮದಲ್ಲ ಅಂತ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಸಚಿವ ಪ್ರಮೋದ್ ಮಧ್ವರಾಜ್ ಬಿಜೆಪಿಗೆ ಸೇರಲಿದ್ದಾರೆ ಅನ್ನೋ...

ಚಾಲೆಂಜಿಂಗ್ ಹೀರೋ ದರ್ಶನ್ ಮುಡಿಗೆ ಮತ್ತೊಂದು ಗರಿ

16 hours ago

ಬೆಂಗಳೂರು: ದರ್ಶನ್ ಫ್ಯಾನ್ಸ್ ಗಳಿಗೆ ಇಂದು ಗುಡ್ ನ್ಯೂಸ್. ಪ್ರೀತಿಯ ದಾಸ ದರ್ಶನ್ ಖ್ಯಾತಿ ಇದೀಗ ಇಂಗ್ಲೆಂಡ್ ತಲುಪಿದ್ದು, ಅಲ್ಲಿನ ಸರ್ಕಾರದ ಗೌರವ ಪ್ರಶಸ್ತಿ ಒಲಿದು ಬಂದಿದೆ. ದರ್ಶನ್ ಸಿನಿಮಾ ಇಂಡಸ್ಟ್ರಿಗೆ ಬಂದು ಸುಮಾರು 20 ವರ್ಷ ಆಗುತ್ತಾ ಬಂದಿದೆ. ಇದುವರೆಗೂ...

ಎಚ್‍ಡಿ ಕೋಟೆಯಲ್ಲಿ ಕಬ್ಬಿನ ಗದ್ದೆಗೆ ನುಗ್ಗಿ ಕಾಡಾನೆಗಳಿಂದ ದಾಂಧಲೆ-ಬೆಳೆ ನಾಶ

16 hours ago

ಮೈಸೂರು: ಕಾಡಿನಿಂದ ನಾಡಿಗೆ ಬಂದ ಆನೆಗಳು ಕಬ್ಬಿನ ಗದ್ದೆಗೆ ನುಗ್ಗಿ ದಾಂಧಲೆ ನಡೆಸಿರುವ ಘಟನೆ ಮೈಸೂರು ಜಿಲ್ಲೆಯ ಎಚ್.ಡಿ. ಕೋಟೆ ತಾಲೂಕಿನ ಬಸಾಪುರದಲ್ಲಿ ನಡೆದಿದೆ. 5 ಆನೆಗಳ ಹಿಂಡು ಬಸಾಪುರ ಗ್ರಾಮ ಹೊಲಕ್ಕೆ ನುಗ್ಗಿ 5 ಎಕರೆ ಕಬ್ಬು, 2 ಎಕರೆ...