Thursday, 21st June 2018

ವಿವರವಾದ ಫಲಿತಾಂಶಕ್ಕಾಗಿ ಮ್ಯಾಪ್ ಕ್ಲಿಕ್ ಮಾಡಿ

1 week ago

ಕಿರಿಯ ಶಾಸಕರ ಜೊತೆ ಕೆ.ಸಿ ವೇಣುಗೋಪಾಲ್ ಮಧ್ಯರಾತ್ರಿ ಗುಪ್ತ್ ಗುಪ್ತ್ ಮೀಟಿಂಗ್!

ಬೆಂಗಳೂರು: ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್ ನಲ್ಲಿ ಇನ್ನು ಹಿರಿಯರಿಗೆ ಅವಕಾಶಗಳು ಇಲ್ಲ ಎಂಬ ಮಾತು ಕೇಳಿ ಬರುತ್ತಿದ್ದು, ಕಿರಿಯ ಶಾಸಕರ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ರಾತ್ರಿ ಎರಡು ಗಂಟೆಗೆ ಗುಪ್ತ ಸಭೆ ನಡೆಸಿದ್ದಾರೆ. ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ರಾಜ್ಯದಲ್ಲಿ ಯುವಕರ ಹೊಸ ತಂಡ ಕಟ್ಟಲು ಮುಂದಾಗಿದ್ದು, ಅವರ ಕನಸು ನನಸು ಮಾಡಲು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಬುಧವಾರ ಮಧ್ಯರಾತ್ರಿ ಗುಪ್ತ್ ಗುಪ್ತ್ ಮೀಟಿಂಗ್ ನಡೆದಿದೆ ಎಂಬುದಾಗಿ ಪಕ್ಷದ […]

1 week ago

ರಾಮನಗರಕ್ಕೆ ಗಿಫ್ಟ್ ಕೊಡಲು ಡಿಕೆಶಿ, ಸಿಎಂ ಎಚ್‍ಡಿಕೆ ನಡುವೆ ಫೈಟ್

ಬೆಂಗಳೂರು: ರಾಮನಗರಕ್ಕೆ ಗಿಫ್ಟ್ ಕೊಡಲು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹಾಗೂ ಸಚಿವ ಡಿಕೆಶಿ ಮಧ್ಯೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ವೈದ್ಯಕೀಯ ಶಿಕ್ಷಣ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಡಿಕೆಶಿ ಒಂದು ವಾರದಲ್ಲೇ ಸಿಎಂ ಅವರನ್ನು ಓವರ್ ಟೇಕ್ ಮಾಡಿದ್ದಾರೆ. ಬಿಜೆಪಿ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಮೊದಲ ಬಾರಿಗೆ ಕುಮಾರಸ್ವಾಮಿ ಬೆಂಗಳೂರಿನ ಜಯನಗರದಲ್ಲಿರುವ ರಾಜೀವ್ ಗಾಂಧಿ ವಿಜ್ಞಾನ ವಿವಿನಾ...

ಮೂರು ದಶಕಗಳ ಬಳಿಕ ಬಿಜೆಪಿ ಭದ್ರಕೋಟೆ ಕಾಂಗ್ರೆಸ್ ವಶಕ್ಕೆ

1 week ago

ಕಲಬುರಗಿ: 30 ವರ್ಷಗಳಿಂದ ಬಿಜೆಪಿ ಭದ್ರಕೋಟೆಯಾಗಿದ್ದ ಈಶಾನ್ಯ ಪದವೀಧರ ಕ್ಷೇತ್ರವನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಪಡೆದುಕೊಂಡಿದೆ. 1988ರಲ್ಲಿ ಕ್ಷೇತ್ರ ಸ್ಥಾಪನೆಯಾದಾಗಿನಿಂದ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ಗೆಲುವು ಸಾಧಿಸಿದ್ದರು. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ವಿರುದ್ಧ ಕಾಂಗ್ರೆಸ್...

ಸೋತಿದ್ದಕ್ಕೆ ಕಾರಣ ಕೊಟ್ಟ ಬಿಜೆಪಿ ಅಭ್ಯರ್ಥಿ ಪ್ರಹ್ಲಾದ್ ಬಾಬು

1 week ago

ಬೆಂಗಳೂರು: ನಾನು ಹೆಚ್ಚಾಗಿ ಎಲ್ಲೂ ಕಾಣಿಸಿಕೊಂಡಿರಲಿಲ್ಲ. ಜೊತೆಗೆ ಹೊಸ ಮುಖ ನನ್ನ ಸೋಲಿಗೆ ಕಾರಣವಾಗಿರಬಹುದು ಎಂದು ಜಯನಗರ ಪರಾಜಿತ ಬಿಜೆಪಿ ಅಭ್ಯರ್ಥಿ ಬಿಎನ್ ಪ್ರಹ್ಲಾದ್ ಬಾಬು ಹೇಳಿದ್ದಾರೆ. ಪಬ್ಲಿಕ್ ಟಿವಿಗೆ ಜೊತೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರು ಪ್ರಚಾರ ಕಾರ್ಯದಲ್ಲಿ ಹೆಚ್ಚು...

ಮೌನಕ್ಕೆ ಶರಣಾದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‍ವೈ

1 week ago

ಬೆಂಗಳೂರು: ಜಯನಗರ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಜಯಗಳಿಸಿದೆ. ಸೋಲಿನಿಂದ ಬಿಜೆಪಿಗೆ ಆಘಾತವಾಗಿದ್ದು, ಪರಿಣಾಮ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಮೌನಕ್ಕೆ ಶರಣಾಗಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿದ್ದ ಒಂದು ಕ್ಷೇತ್ರವನ್ನು ಬಿಜೆಪಿ ಕಳೆದುಕೊಂಡಿದೆ. ಹೀಗಾಗಿ ಸೋಲಿನಿಂದ ಕಂಗೆಟ್ಟಿರುವ ಯಡಿಯೂರಪ್ಪ ಅವರು ನಿನ್ನೆಯಿಂದಲೂ ಮನೆಯಿಂದ ಹೊರಬಂದಿಲ್ಲ...

ಜಯನಗರ ಗೆಲುವು ನಿರೀಕ್ಷಿತ, ಕಾಂಗ್ರೆಸ್ ಮೇಲೆ ಅನುಕಂಪ ಇದೆ: ಸಿದ್ದರಾಮಯ್ಯ

1 week ago

ಮೈಸೂರು: ಜಯನಗರದಲ್ಲಿ ಸೋಮವಾರ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಸಿದ್ದರಾಮಯ್ಯ ರವರು ನಮ್ಮ ಗೆಲುವು ನಿರೀಕ್ಷಿತ ಎಂಬ ಹೇಳಿಕೆಯನ್ನ ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹಿಂದೆ ಚುನಾವಣೆ ನಡೆದಿದ್ದರೂ ನಾವೇ ಗೆಲ್ಲುತ್ತಿದ್ದೇವು, ಈಗಲೂ ನಾವೇ ಗೆಲ್ಲುತ್ತಿದ್ದೇವೆ ಎಂದು ತಿಳಿಸಿದರು. ಕಾರಣ...

ಎರಡು ಮೂರು ದಿನದಲ್ಲಿ ಖಾತೆ ಬದಲಾವಣೆ ಆಗಲಿದೆ: ಜಿ.ಟಿ.ದೇವೇಗೌಡ

1 week ago

ಬೆಂಗಳೂರು: ಉನ್ನತ ಶಿಕ್ಷಣ ಖಾತೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಜಿಟಿ ದೇವೇಗೌಡರು ಇನ್ನು ಎರಡು ಮೂರು ದಿನದಲ್ಲಿ ಖಾತೆ ಬದಲಾವಣೆ ಆಗಲಿದೆ ಎಂದು ತಿಳಿಸಿದ್ದಾರೆ. ಖಾತೆ ವಿಚಾರವಾಗಿ ಅಸಮಾಧಾನಗೊಂಡಿದ್ದ ಜಿಟಿ ದೇವೇಗೌಡ ಅವರು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿಯವರ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ....

ಜಿಟಿಡಿಗೆ ಖಾತೆ ಬದಲಾವಣೆ?- ಎಚ್‍ಡಿಡಿ ಜೊತೆ ಸಿಎಂ ಮಾತುಕತೆ

1 week ago

ಬೆಂಗಳೂರು: ಜೆಡಿಎಸ್‍ನಲ್ಲಿ ಅಸಮಾಧಾನ ಶಮನ ಯತ್ನ ಮುಂದುವರೆದಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಅಧಿಕಾರಿ ಎಚ್.ಡಿ ದೇವೇಗೌಡರನ್ನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭೇಟಿಯಾಗಿದ್ದಾರೆ. ಜಿಟಿ ದೇವೇಗೌಡ ಅವರು ಸಹಕಾರ ಹಾಗೂ ಅಬಕಾರಿ ಎರಡರಲ್ಲಿ ಒಂದು ಖಾತೆಯನ್ನು ಬಯಸಿದ್ದು, ಈಗಾಗಲೇ ಕುಮಾರಸ್ವಾಮಿ...