Friday, 24th November 2017

Recent News

9 months ago

ವೀಡಿಯೋ: ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಹೊರಗೆಳೆದು ತಂದ ಪೊಲೀಸ್

ಬೀಜಿಂಗ್: ಪೊಲೀಸ್ ಅಧಿಕಾರಿಯೊಬ್ಬರು ಬೆಂಕಿ ಹೊತ್ತಿ ಉರಿಯುತ್ತಿದ್ದ ಗ್ಯಾಸ್ ಸಿಲಿಂಡರನ್ನು ಬರಿಗೈಯ್ಯಲ್ಲೇ ಕಟ್ಟಡದಿಂದ ಧರಧರನೆ ಹೊರಗೆಳೆದು ತಂದ ಘಟನೆ ಚೀನಾದಲ್ಲಿ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ಇಲ್ಲಿನ ಜಿಯಾಂಗ್ಸು ಪ್ರದೇಶದ ಮನೆಯೊಂದರಲ್ಲಿ ಅಡುಗೆ ಮನೆಯಲ್ಲಿದ್ದ ಗ್ಯಾಸ್ ಸಿಲಿಂಡರ್‍ಗೆ ಬೆಂಕಿ ಹೊತ್ತಿಕೊಂಡಿತ್ತು. ವಿಷಯ ತಿಳಿದು ಕೂಡಲೇ ಸ್ಥಳೀಯ ಪೊಲೀಸ್ ಠಾಣೆಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬಂದ್ರು. ತೇವವಾದ ಟವೆಲ್‍ನಿಂದ ಮೂಗು ಮುಚ್ಚಿಕೊಂಡು ಒಳಹೋದ ಅಧಿಕಾರಿಗಳಿಗೆ ಬೆಂಕಿ ಹೊತ್ತಿ ಉರಿಯುತ್ತಿದ್ದ ಸಿಲಿಂಡರ್ ಕಾಣಿಸಿತ್ತು. ಅಗ್ನಿಶಾಮಕ ಸಿಬ್ಬಂದಿ ಬರುವವರೆಗೂ […]

9 months ago

ದುಷ್ಕರ್ಮಿಯಿಂದ ಅಮೆರಿಕ ಬಿಟ್ಟು ತೊಲಗಿ ಘೋಷಣೆ- ಗುಂಡಿಟ್ಟು ಭಾರತೀಯ ಟೆಕ್ಕಿಯ ಹತ್ಯೆ

ವಾಷಿಂಗ್ಟನ್: ಹೈದರಾಬಾದ್ ಮೂಲದ ಭಾರತೀಯರೊಬ್ಬರು ಅಮೆರಿಕದಲ್ಲಿ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಬುಧವಾರ ಸಂಜೆ ಹೈದರಾಬಾದ್ ಮೂಲದ ಎಂಜಿನಿಯರ್ ಶ್ರೀನಿವಾಸ್ ಕೂಚಿಬೊಟ್ಲ, ಗೆಳೆಯನ ಜೊತೆ ಕಾನ್ಸಾಸ್‍ನ ಬಾರ್‍ನಲ್ಲಿದ್ದರು. ಈ ವೇಳೆ 51 ವರ್ಷದ ಆಡಂ ಪುರಿಂಟನ್ ಎಂಬ ದುಷ್ಕರ್ಮಿ ಶ್ರೀನಿವಾಸ್ ಮತ್ತು ಅವರ ಗೆಳೆಯನನ್ನು ಮಿಡಲ್ ಈಸ್ಟರ್ನ್(ಮಧ್ಯಪ್ರಾಚ್ಯ ದೇಶದವರು) ಎಂದು ಕರೆದು ನನ್ನ ದೇಶವನ್ನು ಬಿಟ್ಟು ತೊಲಗಿ...

ವೈರಲಾಯ್ತು ರಷ್ಯಾ ಮಾಡೆಲ್‍ನ ಭಯಾನಕ ಫೋಟೋ ಶೂಟ್..!

9 months ago

ಮಾಸ್ಕೋ: ದುಬೈನಲ್ಲಿರುವ ವಿಶ್ವದ ಎತ್ತರದ ಗಗನ ಚುಂಬಿ ಕಟ್ಟಡದ ಮೇಲೆ ಯಾವುದೇ ಸುರಕ್ಷತಾ ಸಾಧನಗಳಿಲ್ಲದೇ ರೂಪದರ್ಶಿಯೊಬ್ಬಳು ಫೋಟೋ ಹಾಗೂ ವಿಡಿಯೋ ಶೂಟ್ ಮಾಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 23 ವರ್ಷದ ವಿಕಿ ಒಡಿಂಕ್ಟೊವಾ ಎಂಬ ರಷ್ಯಾ ರೂಪದರ್ಶಿ ದುಬೈನಲ್ಲಿರುವ...

ಉದ್ಯೋಗ ನೀಡುವಂತೆ ಗೂಗಲ್‍ಗೆ 7ರ ಬಾಲಕಿಯಿಂದ ಪತ್ರ: ಸಿಇಒ ಪಿಚೈ ನೀಡಿದ ಉತ್ತರ ಇದು

9 months ago

ಕ್ಯಾಲಿಫೋರ್ನಿಯಾ: 7 ವರ್ಷದ ಬಾಲಕಿಯೊಬ್ಬಳು ಗೂಗಲ್ ಸಿಇಒ ಸುಂದರ್ ಪಿಚೈಗೆ ಕೆಲಸ ಬೇಕೆಂದು ಬರೆದ ಪತ್ರ ಈಗ ವೈರಲ್ ಆಗಿದೆ. ಇಂಗ್ಲೆಂಡಿನ ಕೋಲೆ ಬ್ರಿಡ್ಜ್ ವಾಟರ್ ಎಂಬಾಕೆ ನನಗೆ ಗೂಗಲ್‍ನಲ್ಲಿ ಉದ್ಯೋಗ ಬೇಕೆಂದು ನೇರವಾಗಿ ಸುಂದರ್ ಪಿಚೈಗೆ ಪತ್ರ ಬರೆದಿದ್ದಾಳೆ. ಈ...

54 ವರ್ಷಗಳ ಬಳಿಕ ಭಾರತದಿಂದ ತಾಯ್ನಾಡಿಗೆ ಹಿಂದಿರುಗುತ್ತಿದ್ದಾರೆ ಈ ಚೀನೀ ಸೈನಿಕ!

10 months ago

ಭೋಪಾಲ್: 1962 ರ ಸಿನೋ-ಭಾರತ ನಡುವೆ ನಡೆದ ಯುದ್ಧದ ವೇಳೆ ಭಾರತದ ಗಡಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ ಚೀನಿ ಸೈನಿಕ ವಾಂಗ್ ಕ್ಯು 54 ವರ್ಷಗಳ ಬಳಿಕ ತನ್ನ ತಾಯ್ನಾಡು ಚೀನಾಕ್ಕೆ ಹಿಂದಿರುಗುತ್ತಿದ್ದಾರೆ. ಯುದ್ಧದ ಸಂದರ್ಭದಲ್ಲಿ ವಾಂಗ್ ಕ್ಯು ಅಚಾನಕ್ ಆಗಿ ಭಾರತದ...

ವೀಡಿಯೋ: ಹೆಬ್ಬಾವು ನುಂಗಿದ್ದ ಟೆನ್ನಿಸ್ ಬಾಲ್ ಹೊರತೆಗೆದ್ರು!

10 months ago

ಸಿಡ್ನಿ: ಸಾಮಾನ್ಯವಾಗಿ ಹೆಬ್ಬಾವುಗಳು ಮೊಲ, ನಾಯಿ, ಕುರಿಯಂತಹ ಪ್ರಾಣಿಗಳನ್ನ ತಿಂದು ಅವುಗಳ ಹೊಟ್ಟೆ ಊದಿಕೊಂಡಿರೋದನ್ನ ನೋಡಿರ್ತೀರ. ಹಾಗೆ ಕೆಲವೊಮ್ಮೆ ಹೆಬ್ಬಾವುಗಳು ಸಿಕ್ಕ ಸಿಕ್ಕ ವಸ್ತುಗಳನ್ನೆಲ್ಲಾ ನುಂಗಿಬಿಡುತ್ತವೆ ಅನ್ನೋದಕ್ಕೆ ಇಲ್ಲೊಂದು ಉದಾಹರಣೆ ಇದೆ. ಹೆಬ್ಬಾವೊಂದರ ಬಾಯಿಯಿಂದ ಟೆನ್ನಿಸ್ ಬಾಲ್ ಹೊರತೆಗೆಯೋ ವೀಡಿಯೋ ಸಾಮಾಜಿಕ...

ಸೌದಿ ಅರೇಬಿಯಾದಿಂದ 39 ಸಾವಿರ ಪಾಕ್ ಪ್ರಜೆಗಳ ಗಡೀಪಾರು

10 months ago

ರಿಯಾದ್: ವೀಸಾ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನೆಲೆಸಿದ್ದಕ್ಕೆ ಸೌದಿ ಅರೇಬಿಯಾ 39 ಸಾವಿರ ಪಾಕಿಸ್ತಾನದ ಪ್ರಜೆಗಳನ್ನು ಗಡೀಪಾರು ಮಾಡಿದೆ. ವೀಸಾ ಉಲ್ಲಂಘಿಸಿದ್ದಕ್ಕೆ ಕಳೆದ ನಾಲ್ಕು ತಿಂಗಳಿನಲ್ಲಿ ಸುಮಾರು 39 ಸಾವಿರ ಪಾಕಿಸ್ತಾನ ಪ್ರಜೆಗಳನ್ನು ಗಡಿಪಾರು ಮಾಡಲಾಗಿದೆ ಎಂದು ಸೌದಿ ಅರೇಬಿಯಾದ ಭದ್ರತಾ...

22 ವರ್ಷಗಳಿಂದ ಒಳಚರಂಡಿಯಲ್ಲೇ ಇವರ ಸಂಸಾರ

10 months ago

ಬೊಗೊಟಾ: ಕೆಲವರು ಎಷ್ಟು ದುಡ್ಡಿದ್ದರೂ ಎಷ್ಟೇ ದೊಡ್ಡ ಮನೆಯಿದ್ದರೂ ಮತ್ತಷ್ಟು ಶ್ರೀಮಂತಿಕೆಗೆ ಹಂಬಲಿಸುತ್ತಾರೆ. ಮತ್ತೂ ಕೆಲವರು ಹಾಸಿಗೆ ಇದ್ದಷ್ಟೇ ಕಾಲು ಚಾಚು ಅನ್ನೋ ಮಾತಿನಂತೆ ಇದ್ದದ್ದರಲ್ಲೇ ನೆಮ್ಮದಿಯಾಗಿರ್ತಾರೆ. ಇದಕ್ಕೆ ಉದಹರಣೆ ದಕ್ಷಿಣ ಅಮೆರಿಕದ ಕೊಲೊಂಬಿಯಾದ ಈ ದಂಪತಿ. ಹಲವಾರು ವರ್ಷಗಳಿಂದ ಇವರು...