Thursday, 26th April 2018

Recent News

18 hours ago

ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವು!

ಹಾವೇರಿ: ಕೆರೆಯಲ್ಲಿ ಮುಳುಗಿ 12 ವರ್ಷದ ಬಾಲಕಿ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬ್ಯಾಡಗಿ ತಾಲೂಕು ಕಾಗಿನೆಲೆ ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಹೀನಾ ಬಾನು(12) ಎಂದು ಗುರುತಿಸಲಾಗಿದೆ. ಗೆಳತಿಯರೊಂದಿಗೆ ಮನೆಯಿಂದ ಆಟವಾಡಲು ತೆರಳಿದ್ದ ಬಾಲಕಿ ನೀರು ಕುಡಿಯಲೆಂದು ಕೆರೆಗೆ ಇಳಿಯುವಾಗ ಈ ದುರ್ಘಟನೆ ನಡೆದಿದೆ ಎನ್ನಲಾಗಿದೆ. ಕೆರೆ ಅಭಿವೃದ್ಧಿಗೆ ಕೆರೆಯಲ್ಲಿ ಗುಂಡಿ ತೋಡಿದ್ದರಿಂದ ಈ ಅನಾಹುತ ಸಂಭವಿಸಿದೆ. ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಗಿನೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

2 days ago

ಪ್ರಧಾನಿ ಮೋದಿ ಪರ ಪೋಸ್ಟ್ ಹಾಕಿದ ಹೆಡ್ ಕಾನ್ಸ್ ಸ್ಟೇಬಲ್ ಅಮಾನತು

ಹಾವೇರಿ: ಪ್ರಧಾನಿ ನರೇಂದ್ರ ಮೋದಿ ಪರ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಜಿಲ್ಲೆಯ ರಾಣೇಬೆನ್ನೂರು ನಗರ ಠಾಣೆಯ ಹೆಡ್ ಕಾನ್ಸ್ ಸ್ಟೇಬಲ್ ಒಬ್ಬರನ್ನು ಅಮಾನತು ಮಾಡಲಾಗಿದೆ. ರಾಣೇಬೆನ್ನೂರು ನಗರ ಠಾಣೆಯ ಜಯಂತ ಬಳಿಗಾರ ಅಮಾನತಾದ ಹೆಡ್ ಕಾನ್ಸ್ ಸ್ಟೇಬಲ್. ಜಯಂತ ಬಳಿಗಾರ ಅವರನ್ನು ಎಸ್‍ಪಿ ಕೆ.ಪರಶುರಾಮ ಅಮಾನತು ಮಾಡುವಂತೆ ಆದೇಶ ಮಾಡಿದ್ದಾರೆ. ಕಾನ್ಸ್ ಸ್ಟೇಬಲ್ ಜಯಂತ ಬಳಿಗಾರ...

ಕೇಂದ್ರ ಸಚಿವರ ಕಾರ್ ಅಪಘಾತಕ್ಕೆ ಹಾವೇರಿ ಎಸ್‍ಪಿ ಸ್ಪಷ್ಟನೆ

1 week ago

ಹಾವೇರಿ: ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗ್ಡೆ ಅವರ ಕಾರ್ ಅಪಘಾತವಾಗಿದ್ದು, ಸಚಿವರು ಕೊಲೆ ಯತ್ನ ಅಂತ ಆರೋಪಿಸಿದ್ದರು. ಈ ಬೆನ್ನಲ್ಲೇ ಹಾವೇರಿ ಎಸ್ ಪಿ ಕೆ. ಪರಶುರಾಮ ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಅನಂತಕುಮಾರ್ ಹೆಗ್ಡೆ ಅವರು ಶಿರಸಿಯಿಂದ...

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹತ್ಯೆಗೆ ಯತ್ನ !

1 week ago

– ಸಚಿವರ ಕಾರು ಬದಲು ಬೆಂಗಾವಲು ವಾಹನಕ್ಕೆ ಲಾರಿ ಡಿಕ್ಕಿ ಹಾವೇರಿ: ವಿರೋಧಿಗಳಬ ಬಗ್ಗೆ ಮಾತಾಡಿ ಅವರ ಕಣ್ಣಿಗೆ ತುತ್ತಾಗಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಮಂಗಳವಾರ ರಾತ್ರಿ ನಡೆದ ಅಪಘಾತದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದು ನನನ್ನ ಕೊಲೆಯ ಯತ್ನ...

ಮರಕ್ಕೆ ಖಾಸಗಿ ಬಸ್ ಡಿಕ್ಕಿ- ಓರ್ವ ಸ್ಥಳದಲ್ಲೇ ದುರ್ಮರಣ

2 weeks ago

ಹಾವೇರಿ: ಮರಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಮೃತಪಟ್ಟು, 25ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಈ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಾಕೂರು ಕ್ರಾಸ್ ಬಳಿ ಘಟನೆ ನಡೆದಿದೆ. ಬೆಂಗಳೂರಿನಿಂದ ಶಿರಸಿಯತ್ತ ತೆರಳುತ್ತಿದ್ದ ಬಸ್ ಮರಕ್ಕೆ...

ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ

3 weeks ago

ಬೆಂಗಳೂರು: 2018ರ ಕರ್ನಾಟಕ ಚುನಾವಣೆಗೆ ಬಿಜೆಪಿಯಿಂದ ಈಗಾಗಲೇ  ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, ಈ ಬೆನ್ನಲ್ಲೇ ಭಿನ್ನಮತ ಭುಗಿಲೆದ್ದಿದೆ. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎನ್.ಆರ್.ರಮೇಶ್‍ಗೆ ಈ ಭಾರಿ ಕೂಡ ಟಿಕೆಟ್ ಕೈತಪ್ಪಿದೆ. ಟಿಕೆಟ್ ಕೊಡಿಸೋದಾಗಿ ಭರವಸೆ ನೀಡಿದ್ದ...

ಅಪಘಾತವಾಗಿ ಗಾಯಗೊಂಡು ಸಾವು-ಬದುಕಿನ ನಡುವೆ ಹೋರಾಡ್ತಿದ್ದರೂ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತ್ರು

3 weeks ago

ಹಾವೇರಿ: ಸಾವು-ಬದುಕಿನ ನಡುವೆ ಹೋರಾಡ್ತಿದ್ದವರನ್ನು ಆಸ್ಪತ್ರೆಗೆ ದಾಖಲಿಸಲು ಜನರು ಹಿಂದೇಟು ಹಾಕಿದ ಘಟನೆ ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ಮಾದವನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಬೈಕ್ ಮತ್ತು ಟೆಂಪೋ ನಡುವೆ ಮುಖಾಮುಖಿ ಡಿಕ್ಕಿಯ ಪರಿಣಾಮ ಓರ್ವ ಮೃತಪಟ್ಟಿದ್ರೆ, ಮತ್ತೋರ್ವ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ...

ಜಮೀನಿನಲ್ಲಿಯೇ ನರಳಾಡ್ತಿದ್ದ ವೃದ್ಧೆಯನ್ನ ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಹಾವೇರಿ ಜನ

3 weeks ago

ಹಾವೇರಿ: ಜಮೀನಿನಲ್ಲಿಯೇ ಅನಾಥವಾಗಿ ನರಳಾಡುತ್ತಿದ್ದ ವೃದ್ಧೆಯನ್ನ ಕಂಡು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿರುವ ಘಟನೆ ಹಾವೇರಿ ನಗರದ ಹೊರವಲಯದಲ್ಲಿರುವ ಹಗ್ಗೇರಿ ಕೆರೆಯ ಬಳಿ ನಡೆದಿದೆ. ದ್ಯಾಮವ್ವ ಗೌಳಿ(98) ನರಳಾಡುತ್ತಿದ್ದ ವೃದ್ಧೆ. ಇವರು ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಶಿಂಗಟಾಲೂರು ಗ್ರಾಮದ ನಿವಾಸಿ ಎನ್ನಲಾಗಿದೆ....