Tuesday, 23rd January 2018

Recent News

8 months ago

6 ತಿಂಗಳ ಮಗುವನ್ನ ರೈಲಿನಲ್ಲಿ ಬಿಟ್ಟು ಹೋದ ತಾಯಿ

ಯಾದಗಿರಿ: ತಾಯಿಯೊಬ್ಬಳು ತನ್ನ ಆರು ತಿಂಗಳ ಗಂಡು ಮಗುವನ್ನು ರೈಲಿನಲ್ಲಿಯೇ ಬಿಟ್ಟುಹೋಗಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ. ಗುಂತಕಲ್-ಗುಲ್ಬರ್ಗಾ ಪ್ಯಾಸೆಂಜರ್ ರೈಲಿನಲ್ಲಿ ಮಗು ಪತ್ತೆಯಾಗಿದೆ. ಮಗು ಅನಾಥವಾಗಿರುವುದು ಯಾದಗಿರಿ ರೈಲು ನಿಲ್ದಾಣದಲ್ಲಿ ಪತ್ತೆಯಾಗಿದ್ದು, ಮಗುವಿನ ಜೊತೆ ಒಂದು ಬ್ಯಾಗ್ ಸಹ ಸಿಕ್ಕಿದೆ. ಬ್ಯಾಗ್‍ನಲ್ಲಿ ರಾಯಚೂರುನಿಂದ ಯಾದಗಿರಿ ವರೆಗಿನ ರೈಲ್ವೆ ಟಿಕೆಟ್, ತಾಯಿಯ ಫೋಟೋ ಮತ್ತು ಒಂದು ಮೊಬೈಲ್ ಪತ್ತೆಯಾಗಿದೆ. ಪ್ರಯಾಣಿಕರ ಸಹಾಯದಿಂದ ಮಗುವನ್ನು ಗುಲ್ಬರ್ಗಾ ರೈಲು ನಿಲ್ದಾಣಕ್ಕೆ ತಲುಪಿಸಲಾಗಿದೆ. ಮಗುವನ್ನು ವಶಕ್ಕೆ ಪಡೆದ ಆರ್‍ಪಿಎಫ್ ಪೊಲೀಸರು ಮಕ್ಕಳ ಸಂರಕ್ಷಣ […]

8 months ago

ವಿದ್ಯುತ್ ಸ್ಪರ್ಶದಿಂದ ಜಮೀನಿನಲ್ಲೇ ಎತ್ತುಗಳ ಸಾವು

ಯಾದಗಿರಿ: ಮುಂಗಾರು ಮಳೆ ಪ್ರಾರಂಭದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆ ಚುರಾಕಾಗಿ ಪ್ರಾರಂಭಿಸುವ ಮುನ್ನವೇ ವಿದ್ಯುತ್ ಸ್ಪರ್ಶದಿಂದ ಎರಡು ಎತ್ತುಗಳು ಸಾವನ್ನಪ್ಪಿದ ಘಟನೆ ಯಾದಗಿರಿ ತಾಲೂಕಿನ ಗಣಾಪುರ ಗ್ರಾಮದಲ್ಲಿ ನಡೆದಿದೆ. ಗೂಡಸಾಬ್ ತನ್ನ ಜಮೀನಿನಲ್ಲಿ ಎತ್ತುಗಳ ನೇಗಿಲಿನಿಂದ ಭೂಮಿ ಹದ ಮಾಡುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ಕಳಚಿದ ಹರಿಯುತ್ತಿರುವ ವಿದ್ಯುತ್ ತಂತಿ ತಗುಲಿ ಎತ್ತುಗಳು...

3ನೇ ಪತ್ನಿಗಾಗಿ 2ನೇ ಪತ್ನಿಯನ್ನ ಕೊಲೆಗೈದ ಪ್ರಕರಣ- ಠಾಣೆಗೆ ನುಗ್ಗಿ ಆರೋಪಿಗೆ ಗ್ರಾಮಸ್ಥರಿಂದ ಥಳಿತ

8 months ago

ಯಾದಗಿರಿ: ಕೊಲೆ ಆರೋಪಿಯಾಗಿ ಜೈಲಿನಲ್ಲಿದ್ದ ವಿನಾಯಕ ಎಂಬವನ ಮೇಲೆ ಹಲ್ಲೆ ನಡೆಸಲು ಗ್ರಾಮಸ್ಥರು ಪೊಲೀಸ್ ಠಾಣೆಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗುತ್ತಿದ್ದಂತೆ ಪೊಲೀಸರು ಲಾಠಿ ಚಾರ್ಜ್ ನಡೆಸಿ ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಏನಿದು ಗಲಾಟೆ?: ಶುಕ್ರವಾರ ವಿನಾಯಕ್ ರಾಠೋಡ್ ಎಂಬಾತ...

ಪತಿಯ ಕಿರುಕುಳಕ್ಕೆ ಮನನೊಂದು ಮಗಳ ಜೊತೆ ಆತ್ಮಹತ್ಯೆಗೆ ಶರಣಾದ ಪತ್ನಿ

8 months ago

ಯಾದಗಿರಿ: ಮನೆಯಲ್ಲಿ ಪತಿಯ ಕಿರುಕುಳದಿಂದಾಗಿ ತನ್ನಿಬ್ಬರ ಮಕ್ಕಳ ಜೊತೆ ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಯಾದಗಿರಿ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ಶುಕ್ರವಾರ ನಡೆದಿದೆ. ಈ ದುರಂತದಲ್ಲಿ ಅದೃಷ್ಟವಷಾತ್ ಮಗ ನರಸಪ್ಪನಿಗೆ ಸಣ್ಣ ಪ್ರಮಾಣದ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಪತ್ನಿ...

3ನೇ ಪತ್ನಿಗಾಗಿ 2ನೇ ಹೆಂಡ್ತಿಯನ್ನ ಕೊಲೆಗೈದ

8 months ago

ಯಾದಗಿರಿ: ಚಪಲ ಚನ್ನಿಗರಾಯ ತನ್ನ ಚಪಲತೆ ತೀರಿಸಿಕೊಳ್ಳಲು ಮೂರು ಮದುವೆಯಾಗಿ, ತನ್ನ ಮೂರನೇ ಹೆಂಡತಿಗಾಗಿ ಎರಡನೇ ಪತ್ನಿಯನ್ನೇ ಕೊಚ್ಚಿ ಕೊಲೆ ಮಾಡಿದ ಘಟನೆ ಯಾದಗಿರಿ ತಾಲೂಕಿನ ಅಲ್ಲಿಪುರದೊಡ್ಡ ತಾಂಡಾದಲ್ಲಿ ನಡೆದಿದೆ. ತಾಂಡಾದ ನಿವಾಸಿ ವಿನಾಯಕ ರಾಠೋಡ ತನ್ನ ಮೂರನೇ ಪತ್ನಿ ಚಾಂಗಿಬಾಯಿ...

ಯಾದಗಿರಿ: ವಿದ್ಯುತ್ ತಂತಿ ತಗುಲಿ ರೈತ ಸಾವು

8 months ago

ಯಾದಗಿರಿ: ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ರೈತರೊಬ್ಬರು ವಿದ್ಯುತ್ ತಂತಿ ತುಳಿದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಶಹಾಪುರ ತಾಲೂಕಿನ ಕೊಂಕಲ್ ಗ್ರಾಮದಲ್ಲಿ ನಡೆದಿದೆ. 65 ವರ್ಷದ ಹಣಮಂತ ಡೊಣ್ಣೆಗೌಡ ಮೃತ ರೈತ. ಹಣಮಂತ ಅವರು ಪ್ರತಿ ದಿನದಂತೆ ಇಂದು...

ಟೇಬಲ್ ಮೇಲೆ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಯ್ತು ಹೊಸ ಸ್ಮಾರ್ಟ್ ಫೋನ್!

8 months ago

ಯಾದಗಿರಿ: ಹೊಸದಾಗಿ ಖರೀದಿಸಿದ ಸ್ಮಾರ್ಟ್ ಫೋನೊಂದು ಗ್ರಾಹಕರ ಮನೆಯಲ್ಲಿ ಸ್ಫೋಟಗೊಂಡಿರುವ ಘಟನೆ ಯಾದಗಿರಿಯ ಅಂಬೇಡ್ಕರ್ ನಗರದಲ್ಲಿ ನಡೆದಿದೆ. ಮಂಜುನಾಥ್ ಚಲುವಾದಿ ಎಂಬವರು ಒಂದು ತಿಂಗಳ ಹಿಂದೆ ಆನ್‍ಲೈನಲ್ಲಿ 10,500 ರೂ. ನೀಡಿ ಸ್ವೈಪ್ ಇಲೈಟ್ ಕಂಪೆನಿಯ ಫೋನನ್ನು ಖರೀದಿಸಿದ್ದರು. ಗುರುವಾರ ಮೊಬೈಲ್‍ನಲ್ಲಿ...

ಯಾದಗಿರಿ: ಕೃಷಿ ಹೊಂಡಕ್ಕೆ ಬಿದ್ದು ಇಬ್ಬರು ಬಾಲಕಿಯರ ದುರ್ಮರಣ

9 months ago

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ಬಿರನಕಲ್ ಗ್ರಾಮದಲ್ಲಿ ನೀರು ಕುಡಿಯಲು ಹೋದ ಬಾಲಕಿಯರಿಬ್ಬರು ಸಾವನಪ್ಪಿದ ದಾರುಣ ಘಟನೆ ನಡೆದಿದೆ. ಶರಣಮ್ಮ (10) ಹಾಗೂ ನಾಗಮ್ಮ (11) ಮೃತ ದುರ್ದೈವಿ ಬಾಲಕಿಯರು. ಬಿರನಕಲ್ ಗ್ರಾಮದ ಹೊರ ಭಾಗದಲ್ಲಿ ಬಾಲಕಿಯರು ನೀರು ಕುಡಿಯಲು ಹೊಲದಲ್ಲಿನ...