Friday, 25th May 2018

Recent News

3 weeks ago

ಬೈಕಿಗೆ ಟೆಂಪೋ ಡಿಕ್ಕಿ – ಮದ್ವೆ ಕಾರ್ಡ್ ಕೊಡಲು ತೆರಳುತ್ತಿದ್ದ ಸವಾರರಿಬ್ಬರ ದುರ್ಮರಣ

ಯಾದಗಿರಿ: ಬೈಕಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನಪ್ಪಿರುವ ಘಟನೆ ಜಿಲ್ಲೆಯ ಸುರಪುರ ತಾಲೂಕಿನ ಏವೂರ ಗ್ರಾಮದ ಬಳಿ ನಡೆದಿದೆ. ಏವೂರು ದೊಡ್ಡ ತಾಂಡ ನಿವಾಸಿಗಳಾದ ಅನೀಲ್ ರಾಥೋಡ್ (23) ಮತ್ತು ರಾಮು ಚವಾಣ (27) ಮೃತ ದುರ್ದೈವಿಗಳು. ಲಾರಿ ಶಹಾಪುರದಿಂದ ಸಿಂದಗಿ ಕಡೆ ತೆರಳುತ್ತಿತ್ತು. ಬೈಕಿನಲ್ಲಿ ಇಬ್ಬರು ಯವಕರು ಮದುವೆ ಕಾರ್ಡ್ ಕೊಡಲು ಏವೂರ ದಿಂದ ಏವೂರು ದೊಡ್ಡ ತಾಂಡದ ಕಡೆಗೆ ತೆರಳುತ್ತಿದ್ದರು. ಈ ವೇಳೆ ಏವೂರ ಗ್ರಾಮದ ಬಳಿ […]

1 month ago

ಬಿಜೆಪಿ ಟಿಕೆಟ್ ಆಕಾಂಕ್ಷಿ ಪತ್ನಿಗೆ ಬರೆ ಹಾಕಿದ ದುಷ್ಕರ್ಮಿಗಳು

ಯಾದಗಿರಿ: ಚುನಾವಣೆ ಕಾವು ಹೆಚ್ಚಳವಾಗುತ್ತಿದಂತೆ ರಾಜಕೀಯ ದುರುದ್ದೇಶದಿಂದ ಕೂಡಿರುವ ಕೃತ್ಯಗಳು ಆರಂಭವಾಗಿದ್ದು, ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಪತ್ನಿ ಮೇಲೆ ಮಾರಣಾಂತಿಕವಾಗಿ ಕೆಲ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ರಾಜ್ಯದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಪೊಲೀಸ್ ಬಿಗಿ ಬಂದೋಬಸ್ತ್ ನಡೆಸಿದ್ದಾರೆ. ಆದರೆ ಬಿಜೆಪಿಯ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಮಾಗನೂರ ಪತ್ನಿ ಶಿಲ್ಪಾ ಮಾಗನೂರ ಮೇಲೆ ದುಷ್ಕರ್ಮಿಗಳು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ....

ರಾಜ್ಯದ ವಿವಿಧೆಡೆ ಗುಡುಗು ಸಹಿತ ಮಳೆ, ಸಿಡಿಲು ಬಡಿದು ಮೂವರ ಸಾವು

1 month ago

ಯಾದಗಿರಿ: ಬಿರುಗಾಳಿ ಸಹಿತ ಮಳೆ ವೇಳೆ ಸಿಡಿಲು ಬಡಿದು ಬಾಲಕ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ಯಾದಗಿರಿ, ರಾಯಚೂರು ಜಿಲ್ಲೆಗಳಲ್ಲಿ ನಡೆದಿದೆ. ಸುರಪುರ ತಾಲೂಕಿನ ಪೀರಗಾರದೊಡ್ಡಿ ಗ್ರಾಮದ 12 ವರ್ಷದ ಮೌನೇಶ್ ಸಿಡಿಲು ಬಡಿದ ಸಾವನ್ನಪ್ಪಿದ ಬಾಲಕ. ಗ್ರಾಮ ಹೊರ ವಲಯದಲ್ಲಿ...

ವೆಂಕಟರೆಡ್ಡಿ ಮುದ್ನಾಳ್ ಕ್ಷೇತ್ರ ಬದಲಾಯಿಸಬಾರದೆಂದು ವಿಷ ಸೇವಿಸಿದ ಬಿಜೆಪಿ ಕಾರ್ಯಕರ್ತ

1 month ago

ಯಾದಗಿರಿ: ವೆಂಕಟರೆಡ್ಡಿ ಮುದ್ನಾಳ್ ಅವರನ್ನು ಗುರುಮಠಕಲ್ ಕ್ಷೇತ್ರದಿಂದ ಬದಲಾವಣೆ ಮಾಡಬಾರದು ಎಂದು ಬಿಜೆಪಿ ಕಾರ್ಯಕರ್ತನೋರ್ವ ವಿಷ ಸೇವನೆಗೆ ಯತ್ನಿಸಿದ ಘಟನೆಯು ಯಾದಗಿರಿ ನಗರದ ಮುದ್ನಾಳ ಲೇಔಟ್ ನಲ್ಲಿ ನಡೆದಿದೆ. ಗುರುಮಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ವೆಂಕಟರೆಡ್ಡಿ ಮುದ್ನಾಳ್ ಅವರು ಬಿಜೆಪಿ...

ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕರಿಗೆ ಬಿಜೆಪಿ ಟಿಕೆಟ್-ಟ್ವಿಟ್ಟರ್ ನಲ್ಲಿ ಅಸಮಾಧಾನ

1 month ago

ಯಾದಗಿರಿ: ಅಲ್ಪಸಂಖ್ಯಾತರ ಮತಗಳ ಓಲೈಕೆಗಾಗಿ ಪಕ್ಷದ ಸಿದ್ಧಾಂತಗಳನ್ನು ಗಾಳಿಗೆ ತೂರಿ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿದ್ದ ಶಹಾಪುರ ಶಾಸಕ ಗುರುಪಾಟೀಲ್‍ರಿಗೆ ಬಿಜೆಪಿ ಟಿಕೆಟ್ ನೀಡಿದೆ. ರಾಜ್ಯಾದ್ಯಂತ ಬಿಜೆಪಿ ಟಿಪ್ಪು ಜಯಂತಿಗೆ ಭಾರೀ ವಿರೋಧವನ್ನು ವ್ಯಕ್ತಪಡಿಸಿತ್ತು. ಆದ್ರೂ ಶಹಾಪುರ ಬಿಜೆಪಿ ಶಾಸಕ ಗುರುಪಾಟೀಲ್ ಟಿಪ್ಪು...

ಆಂಬುಲೆನ್ಸ್ ಬಾರದೇ ರೈಲ್ವೇ ನಿಲ್ದಾಣದಲ್ಲಿ ಹೊಟ್ಟೆನೋವಿನಿಂದ ನರಳಾಡಿದ ಬಾಣಂತಿ

1 month ago

ಯಾದಗಿರಿ: ಬಾಣಂತಿ ಮಹಿಳೆ ಹೊಟ್ಟೆ ನೋವಿನಿಂದ ಒಂದು ಗಂಟೆಕ್ಕೂ ಹೆಚ್ಚು ಕಾಲ ನರಳಾಡಿದ ಘಟನೆ ಯಾದಗಿರಿ ರೈಲ್ವೇ ನಿಲ್ದಾಣದಲ್ಲಿ ನಡೆದಿದೆ. 108 ಆಂಬುಲೆನ್ಸ್ ಗೆ ಕರೆ ಮಾಡಿದರೂ ಸಕಾಲಕ್ಕೆ ಆಗಮಿಸದ ಕಾರಣ ಬಾಣಂತಿಗೆ ತೀವ್ರವಾಗಿ ರಕ್ತಸ್ರಾವವಾಗಿದೆ. ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ...

ನಡು ರಸ್ತೆಯಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿಯ ಕಾರು ಧಗ ಧಗ!

2 months ago

ಯಾದಗಿರಿ: ಬಿಜೆಪಿ ಮುಖಂಡ ಡಾ. ಶರಣ ಭೂಪಲಾರೆಡ್ಡಿ ಅವರು ತಮ್ಮ ಕಾರಿಲ್ಲಿ ಪ್ರಯಾಣಿಸುವಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಘಟನೆಯು ಶಹಾಪುರ ಹೊರವಲಯದ ಸೀಮೆ ಮಾರಮ್ಮ ದೇವಸ್ಥಾನ ಬಳಿ ನಡೆದಿದೆ. ಕ್ಷೇತ್ರದ ಪ್ರಬಲ ಬಿಜೆಪಿ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿರುವ ಡಾ.ಶರಣಭೂಪಲಾರೆಡ್ಡಿ ಹೊಸದಾಗಿ ಖರೀದಿಸಿದ್ದ...

ಯಾದಗಿರಿಯಲ್ಲಿ 13 ವರ್ಷದ ಬಾಲಕಿಯೊಬ್ಬಳ ನಿಗೂಢ ಸಾವು!

2 months ago

ಯಾದಗಿರಿ: 13 ವರ್ಷದ ಬಾಲಕಿಯೊಬ್ಬಳು ನಿಗೂಢವಾಗಿ ಸಾವನ್ನಪ್ಪಿದ ಪ್ರಕರಣ ಯಾದಗಿರಿ ತಾಲೂಕು ಸೈದಾಪುರ ಸಮೀಪದ ಕಡೇಚೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಇದೀಗ ಈ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ತಮ್ಮ ಮಗಳ ಮೇಲೆ ಹಾಡಹಗಲೇ ಅತ್ಯಾಚಾರಗೈದು ಕೊಲೆ ಮಾಡಿ...