Thursday, 21st September 2017

Recent News

2 weeks ago

ಮಳೆಯಿಂದ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ದಂಪತಿ ಸಾವು

ವಿಜಯಪುರ: ಕಳೆದರೆಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ದಂಪತಿ ಸಾವನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಜೆವೂರ ಗ್ರಾಮದಲ್ಲಿ ನಡೆದಿದೆ. ಕರಬಸಪ್ಪ ಆಕಳವಾಡಿ(75) ಹಾಗೂ ಅವರ ಪತ್ನಿ ಇಂದಿರಾಬಾಯಿ ಆಕಳವವಾಡಿ(65) ಮೃತ ದುರ್ದೈವಿಗಳು. ಜೆವೂರ ಗ್ರಾಮದ ತೋಟದ ಮನೆಯಲ್ಲಿ ಈ ಘಟನೆ ನಡೆದಿದೆ ರಾತ್ರಿ ಮಲಗಿದ್ದ ವೇಳೆ ಮಳೆಯಿಂದ ನೆನೆದಿದ್ದ ಮನೆಯ ಮೇಲ್ಛಾವಣಿ ಕುಸಿದು ಈ ಅವಘಡ ಸಂಭವಿಸಿದೆ. ಝಳಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

2 weeks ago

ಸರ್ಕಾರಿ ಆಂಬುಲೆನ್ಸ್ ನಲ್ಲಿ ಮನೆ ಸಾಮಾಗ್ರಿ ಸಾಗಿಸಿದ ವೈದ್ಯ!

ವಿಜಯಪುರ: ಸರ್ಕಾರಿ ಆಂಬುಲೆನ್ಸ್ ನಲ್ಲಿ ವೈದ್ಯ ತನ್ನ ಮನೆ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸಾರ್ಜಜನಿಕರ ಕೈಗೆ ಸಿಕ್ಕಿ ಬಿದ್ದ ಘಟನೆ ವಿಜಯಪುರದಲ್ಲಿ ನಡೆದಿದೆ. ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ರವಿ ಕಟ್ಟಿಮನಿ ಎಂಬಾತ ವಿಜಯಪುರದಿಂದ ಮಂಗಳೂರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಆಂಬುಲೆನ್ಸ್ ನಲ್ಲಿ ತನ್ನ ಮನೆಯ...

ಭೀಮಾತೀರದ ಹಂತಕ ಚಂದಪ್ಪ ಅಣ್ಣ ಯಲ್ಲಪ್ಪ ಹರಿಜನ ಸಾವು!

4 weeks ago

ವಿಜಯಪುರ: ಭೀಮಾತೀರದ ಹಂತಕ ಚಂದಪ್ಪ ಹರಿಜನ ಅಣ್ಣ ಯಲ್ಲಪ್ಪ ಹರಿಜನ ಅವರು ಅನಾರೋಗ್ಯದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಸಿಂದಗಿ ತಾಲೂಕಿನ ಸ್ವಗ್ರಾಮ ಬೊಮ್ಮನಹಳ್ಳಿಯಲ್ಲಿ ನಡೆದಿದೆ. ಕಳೆದ ಹಲವು ದಿನಗಳಿಂದ ಸಕ್ಕರೆ ಕಾಯಿಲೆ ಹಾಗೂ ಬಿಪಿಯಿಂದ ಬಳಲುತ್ತಿದ್ದ ಯಲಪ್ಪ ಹರಿಜನ ಶುಕ್ರವಾರ ತಡರಾತ್ರಿ...

ಎಸಿಬಿ ವಿರುದ್ಧ ವೈಯಕ್ತಿಕವಾಗಿ ಹೋದ್ರೆ ಜನರೇ ತೀರ್ಮಾನಿಸ್ತಾರೆ- ಸಿಎಂ ವಿರುದ್ಧ ಎಚ್‍ಡಿಡಿ ಕಿಡಿ

1 month ago

ವಿಜಯಪುರ: ಸಿಎಂ ಸಿದ್ದರಾಮಯ್ಯ ಎಸಿಬಿಯನ್ನು ದುರುಪಯೋಗ ಮಾಡಿಕೊಂಡು ವೈಯಕ್ತಿಕವಾಗಿ ಹೋದರೆ ಜನ ತೀರ್ಮಾನ ಮಾಡ್ತಾರೆ ಅಂತ ಜೆಡಿಎಸ್ ವರಿಷ್ಠ ನಾಯಕ ಹೆಚ್ ಡಿ ದೇವೇಗೌಡ ಹೇಳಿದ್ದಾರೆ. ಅವರು ಇಂದು ನಗರದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಅವರ...

ಏನೇ ತಿಪ್ಪರಲಾಗ ಹಾಕಿದ್ರು ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ

1 month ago

ವಿಜಯಪುರ: ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬರಲಿದೆ. ಆದರೆ ಯಡಿಯೂರಪ್ಪ ಹಾಗೂ ಕುಮಾರಸ್ವಾಮಿ ಭ್ರಮೆಯಲ್ಲಿದ್ದಾರೆಂದು ಸಿಎಂ ಸಿದ್ಧರಾಮಯ್ಯ ಹೇಳಿದ್ದಾರೆ. ಕೃಷ್ಣಾನದಿಗೆ ಬಾಗಿನ ಅರ್ಪಿಸಲು ಬಾಗಲಕೋಟೆ ಜಿಲ್ಲೆಯ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಆಗಮಿಸಿ ಮಾಧ್ಯಮಗಳ ಜೊತೆ...

ವಿಜಯಪುರಕ್ಕೆ ಆಗಮಿಸಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ ವಾಡ್

1 month ago

ವಿಜಯಪುರ: ವಿಶ್ವಕಪ್ ನಲ್ಲಿ ಭರ್ಜರಿ ಪ್ರದರ್ಶನ ನೀಡಿದ ಭಾರತದ ಮಹಿಳಾ ಕ್ರಿಕೆಟ್ ಆಟಗಾರ್ತಿ ರಾಜೇಶ್ವರಿ ಗಾಯಕ್ವಾಡ್ ಇಂದು ಜಿಲ್ಲೆಗೆ ಆಗಮಿಸಿದ್ದಾರೆ. ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಅವರು ರಾಜೇಶ್ವರಿಗೆ ಸನ್ಮಾನ ಮಾಡಿ ಆಶೀರ್ವಾದ ನೀಡಿದರು. ಬಾಲ್ಯದಿಂದಲೂ ಆಶ್ರಮದ ಭಕ್ತರಾಗಿರುವ ಗಾಯಕವಾಡ್ ಪೋಷಕರು...

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಅನ್ನೋ ಕೆಲಸ ಎನಾಗಿದೆ ಗೊತ್ತಾ..?

1 month ago

ವಿಜಯಪುರ: ಸರ್ಕಾರಿ ಆಸ್ಪತ್ರೆ ಅಂದ್ರೆ ಸಾಕು ಜನಾ ಮೂಗು ಮುರಿಯುತ್ತಾರೆ. ಅಂತಹದರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಜನ್ರು ಛೀ.. ಥೂ.. ಎನ್ನುವಂತಹ ಕೆಲಸ ನಡೆಯುತ್ತಿದೆ. ನಗರದ ಜಿಲ್ಲಾ ಆಸ್ಪತ್ರೆ ಹಿಂಭಾಗದಲ್ಲಿರುವ ಶವಾಗಾರದ ಎದುರು ದಿನನಿತ್ಯ ಮಾಂಸದ ತುಂಡುಗಳು ಬೀಳುತ್ತಿವೆ. ಪ್ರತಿದಿನ ನಡೆಯುವ ಶಸ್ತ್ರಚಿಕಿತ್ಸೆಯಲ್ಲಿ...

ಭೀಮಾತೀರದ ಹಂತಕನ ಮೇಲೆ ಕೋರ್ಟ್ ಆವರಣದಲ್ಲೇ ಗುಂಡಿನ ದಾಳಿ -ಸಾವು ಬದುಕಿನ ಮಧ್ಯೆ ಬಾಗಪ್ಪ ನರಳಾಟ

1 month ago

ವಿಜಯಪುರ: ಭೀಮಾ ತೀರದ ಹಂತಕ ಚಂದಪ್ಪ ಹರಿಜನ ಸಹಚರ ಬಾಗಪ್ಪನ ಮೇಲೆ ವಿಜಯಪುರದ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ಗುಂಡಿನ ದಾಳಿ ನಡೆದಿದೆ. ಮಂಗಳವಾರ ಬೆಳಗ್ಗೆ ವಿಚಾರಣೆಗೆ ಬಂದಿದ್ದ ಬಾಗಪ್ಪನ ಮೇಲೆ ಅಪರಿಚಿತ ವ್ಯಕ್ತಿ ಗುಂಡಿನ ದಾಳಿ ನಡೆಸಿದ್ದಾನೆ. ಮೂರು ಗುಂಡುಗಳು ಬಾಗಪ್ಪನ...