Sunday, 19th November 2017

Recent News

1 week ago

ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಕುಂದಾಪುರ ಶಾಸಕ ಶ್ರೀನಿವಾಸ ಶೆಟ್ಟಿ

ಉಡುಪಿ: ಕುಂದಾಪುರದ ಪಕ್ಷೇತರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಬಿಜೆಪಿಗೆ ಸೇರಲು ನಿರ್ಧರಿಸಿದ್ದಾರೆ. ಬಿಜೆಪಿಯಿಂದ ನನಗೆ ಆಹ್ವಾನ ಬಂದಿದೆ ಪಕ್ಷೇತರ ಶಾಸಕತ್ವದ ತಾಂತ್ರಿಕ ಸಮಸ್ಯೆ ಕಳೆದ ಕೂಡಲೇ ಬಿಜೆಪಿಗೆ ಸೇರ್ಪಡೆಯಾಗುತ್ತೇನೆ ಎಂದು ಖಚಿತ ಪಡಿಸಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕ ಹಾಲಾಡಿ, ಬಿಜೆಪಿ ಸೇರಿಸಿಕೊಳ್ಳುವಂತೆ ನಾನು ಯಾರ ಮನೆ ಬಾಗಿಲು ತಟ್ಟಲು ಹೋಗಿಲ್ಲ ಅವಕಾಶ ಬಂದಿದೆ ಅದ್ದರಿಂದ ಸೇರುತ್ತಿದ್ದೇನೆ. ಸದ್ಯ ನಾನು ಪಕ್ಷೇತರ ಶಾಸಕನಾಗಿದ್ದು, ಯಾವುದೇ ಆಸೆ- ಆಮಿಷಗಳಿಗೆ ಒಳಗಾಗಿ ಪಕ್ಷ ಸೇರ್ಪಡೆಯಾದರೆ […]

1 week ago

ಟಿಪ್ಪು ಜಯಂತಿಗೆ ಸಚಿವ ಮಧ್ವರಾಜ್ ಗೈರು- ನನ್ನ ಗೈರನ್ನು ನೀವು ಹೇಗೆ ಬೇಕಾದ್ರೂ ಅರ್ಥೈಸಿಕೊಳ್ಳಿ ಎಂದ್ರು

ಉಡುಪಿ: ವಿವಾದಿತ ಮತ್ತು ರಾಜ್ಯ ಸರ್ಕಾರದ ಪ್ರತಿಷ್ಟೆಯ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮದಿಂದ ಸಚಿವ ಪ್ರಮೋದ್ ಮಧ್ವರಾಜ್ ದೂರ ಉಳಿದು ಚರ್ಚೆಗೆ ಕಾರಣವಾಗಿದ್ದಾರೆ. ಉಡುಪಿಯಲ್ಲಿ ಇದ್ದುಕೊಂಡೇ ಕ್ರೀಡಾ ಮತ್ತು ಮೀನುಗಾರಿಕಾ ಸಚಿವ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಟಿಪ್ಪು ಜಯಂತಿಯಲ್ಲಿ ಪಾಲ್ಗೊಂಡಿಲ್ಲ. ಟಿಪ್ಪು ಜಯಂತಿ ಮುಗಿದು ಹತ್ತೇ ನಿಮಿಷಕ್ಕೆ ಪ್ರಮೋದ್ ಮಧ್ವರಾಜ್ ಜಿಲ್ಲಾಧಿಕಾರಿ ಕಚೇರಿಗೆ...

ಸಿದ್ದರಾಮಯ್ಯ ಹೃದಯದಲ್ಲಿ ಬಡವರು ಮಾತ್ರ ಇದ್ದಾರೆ-ಕೆ.ಸಿ ವೇಣುಗೋಪಾಲ್

2 weeks ago

ಉಡುಪಿ: ಸಿದ್ದರಾಮಯ್ಯ ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿದೆ. ಸಿಎಂ ಹೃದಯದಲ್ಲಿ ಬಡವರು ಮಾತ್ರ ಇದ್ದಾರೆ. ಇದು ರಾಜ್ಯದ ಜನಕ್ಕೆ ಅರ್ಥವಾಗಬೇಕು. ಅರ್ಥ ಮಾಡಿಸುವ ಕೆಲಸವನ್ನು ಕಾರ್ಯಕರ್ತರು, ಕಾಂಗ್ರೆಸ್ ನಾಯಕರು ಮಾಡಬೇಕು ಅಂತ ಕಾಂಗ್ರೆಸ್ ರಾಜ್ಯ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ....

ಆರತಿ ಹಿಡಿಯೋ ಕೈಲಿ ಕ್ರಿಕೆಟ್ ಬ್ಯಾಟ್- ಫೋರ್ ಗಳ ಸುರಿಮಳೆಗೈದ ಉಡುಪಿ ಶ್ರೀ

2 weeks ago

ಉಡುಪಿ: ಆರತಿ ಹಿಡಿದು ಪೂಜೆ ಮಾಡುವ ಕೈಯಲ್ಲಿ ಕ್ರಿಕೆಟ್ ಬ್ಯಾಟ್. ಕಚ್ಚೆ ಎತ್ತಿಕಟ್ಟಿ ಶಾಲನ್ನು ಸೊಂಟಕ್ಕೆ ಬಿಗಿದ ಸ್ವಾಮೀಜಿ. ಪ್ರತೀ ಬಾಲ್ ಗೆ ಫೋರ್.. ಫೋರ್.. ಫೋರ್.. ಹೌದು. ಉಡುಪಿಯಲ್ಲಿ ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಕ್ರಿಕೆಟ್ ಆಟವಾಡಿದ್ದಾರೆ. ಮಹಾತ್ಮಾಗಾಂಧಿ ಕ್ರೀಡಾಂಗಣದಲ್ಲಿ...

ಮಹಿಳೆಯೊಂದಿಗೆ ಕಾಮದಾಟ ನಡೆಸಿದ್ದ ಮೌಲ್ವಿಗೆ ಜಮಾತ್ ಸದಸ್ಯರಿಂದ ಧರ್ಮದೇಟು..!

2 weeks ago

ಉಡುಪಿ: ಮೌಲ್ವಿಯೊಬ್ಬನ ಕಾಮಪ್ರಸಂಗ ಬೀದಿಗೆ ಬಂದಿದೆ. ಊರಿಗೆಲ್ಲಾ ಬುದ್ಧಿ ಹೇಳುತ್ತಿದ್ದ ಮೌಲ್ವಿಯೊಬ್ಬ ಪರಸ್ತ್ರೀ ಸಂಗ ನಡೆಸಲು ಹೋಗಿ ಊರ ಮಂದಿಯಿಂದ ಧರ್ಮದೇಟಿಗೆ ಒಳಗಾಗಿದ್ದಾನೆ. ಜಮಾತ್ ಸದಸ್ಯರೇ ಸೇರಿ ಮೌಲ್ವಿ ಖತೀಬ್ ನ ಚಳಿ ಬಿಡಿಸಿದ್ದಾರೆ. ಈ ವಿಡಿಯೋ ತುಣುಕು ಇದೀಗ ವಾಟ್ಸಪ್,...

ಕಾರ್ಕಳದ ಮದೀನಾ ಮಸೀದಿಯಿಂದ 32 ವಿದ್ಯಾರ್ಥಿಗಳ ಜೊತೆ ಧರ್ಮಗುರು ಎಸ್ಕೇಪ್!

2 weeks ago

ಉಡುಪಿ: ವಿದ್ಯಾರ್ಥಿಗಳ ಜೊತೆ ಧರ್ಮಗುರು ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳದ ಮದೀನಾ ಮಸೀದಿಯಲ್ಲಿ ನಡೆದಿದೆ. ಧಾರ್ಮಿಕ ವಿದ್ಯಾಭ್ಯಾಸಕ್ಕೆ ಬಿಹಾರದಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ಮೂವತ್ತೆರಡು ವಿದ್ಯಾರ್ಥಿಗಳು ಬಂದಿದ್ದರು. ಧರ್ಮಗುರು ತೈಯ್ಯಬ್ ಕೂಡಾ ಮೂಲತಃ ಬಿಹಾರ ರಾಜ್ಯದವನು. ಉಡುಪಿ ಜಿಲ್ಲೆಯ ಕಾರ್ಕಳ...

ಸರ್ಕಾರಿ ಆಸ್ಪತ್ರೆಯಿಂದ್ಲೂ ರೋಗಿಗಳು ಶಿಫ್ಟ್- ಕೆಎಂಸಿಯಲ್ಲಿ ಮಾತ್ರ ಎಮರ್ಜೆನ್ಸಿ ಟ್ರೀಟ್‍ಮೆಂಟ್

2 weeks ago

ಉಡುಪಿ: ರಾಜ್ಯಾದ್ಯಂತ ಖಾಸಗಿ ಆಸ್ಪತ್ರೆಗಳು ರಾಜ್ಯ ಸರ್ಕಾರದ ವಿರುದ್ಧ ತಿರುಗಿಬಿದ್ದಿದೆ. ಉಡುಪಿ ಜಿಲ್ಲೆಯ 35ಕ್ಕೆ ಹೆಚ್ಚು ಪ್ರಮುಖ ಖಾಸಗಿ ಆಸ್ಪತ್ರೆಗಳು ಎಮರ್ಜೆನ್ಸಿಯನ್ನೂ ಬಂದ್ ಮಾಡಿದೆ. ಒಪಿಡಿಗಳಲ್ಲೂ ಟ್ರೀಟ್‍ಮೆಂಟ್ ಸಿಗುತ್ತಿಲ್ಲ. ಸಾವಿರಕ್ಕೂ ಮಿಕ್ಕಿ ಕ್ಲಿನಿಕ್‍ಗಳು ಮುಚ್ಚಿದೆ. ಈ ನಡುವೆ ಮಣಿಪಾಲ ಕೆಎಂಸಿ ಆಸ್ಪತ್ರೆ...

ಒಂದೇ ದೇವರಿಗೆ 2 ಹೆಸರು, ವಿವಾದ ಹುಟ್ಟುಹಾಕಿದ ಉಡುಪಿಯ ದೇಗುಲ!

2 weeks ago

ಉಡುಪಿ: ದೇವನೊಬ್ಬ ನಾಮ ಹಲವು ಎಂಬ ಮಾತಿದೆ. ಆದರೆ ಉಡುಪಿಯ ಇತಿಹಾಸ ಪ್ರಸಿದ್ಧ ದೇಗುಲ ಇದೀಗ ಹೊಸ ವಿವಾದವೊಂದಕ್ಕೆ ನಾಂದಿ ಹಾಡಿದೆ. ಉಡುಪಿಯ ಶ್ರೀಕೃಷ್ಣಮಠದ ರಥಬೀದಿಯಲ್ಲಿರುವ ಇತಿಹಾಸ ಪ್ರಸಿದ್ಧ ದೇವಸ್ಥಾನ ಈಗ ವೈಷ್ಣವರು ಮತ್ತು ಶೈವರ ಕಿತ್ತಾಟಕ್ಕೆ ಕಾರಣವಾಗಿದೆ. ದೇಗುಲದ ಹೊರಗೆ...