Saturday, 20th January 2018

2 weeks ago

ನದಿ ತುಂಬಿದ್ರೂ ಮತ ಹಾಕದ ಗ್ರಾಮಗಳ ಕೆರೆಗಳಿಗಿಲ್ಲ ನೀರು- ತಿಪಟೂರು ಶಾಸಕ ಷಡಕ್ಷರಿಯಿಂದ ಸೇಡಿನ ರಾಜಕೀಯ

ತುಮಕೂರು: ಉತ್ತಮ ಮಳೆಯಿಂದ ಹೇಮಾವತಿ ತುಂಬಿ ಹರಿಯುತ್ತಿದ್ದು, ತುಮಕೂರು ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿ ಜನರ ಮೊಗದಲ್ಲಿ ಸಂತಸ ಮೂಡಿದೆ. ಆದ್ರೆ ತಿಪಟೂರು ತಾಲೂಕಿನ ಹೊನ್ನವಳ್ಳಿ ಹೋಬಳಿಯ ಸುಮಾರು 20ಕ್ಕೂ ಹೆಚ್ಚು ಗ್ರಾಮದ ಜನರು ಮಾತ್ರ ಶಾಸಕ ಷಡಕ್ಷರಿ ಸೇಡಿನ ರಾಜಕಾರಣಕ್ಕೆ ಬಲಿಯಾಗಿ ಬರದ ಪರಿಸ್ಥಿತಿ ಎದುರಿಸಬೇಕಾಗಿದೆ. ಕಳೆದ ಚುನಾವಣೆಯಲ್ಲಿ ಕೆಲವು ಗ್ರಾಮಗಳಿಂದ ಶಾಸಕ ಷಡಕ್ಷರಿ ಅವರಿಗೆ ಕಡಿಮೆ ಪ್ರಮಾಣದಲ್ಲಿ ಮತಗಳು ಬಂದಿದ್ದವು. ಇದೇ ಕಾರಣಕ್ಕೆ ಸನ್ಮಾನ್ಯ ಶಾಸಕರು ಅಧಿಕಾರಕ್ಕೆ ಬಂದ ಬಳಿಕ ಸಾರ್ತುವಳ್ಳಿ, ಹುರುಳೇಹಳ್ಳಿ, ಚೌಲಿಹಳ್ಳಿ, […]

2 weeks ago

ಭಾಷಣದ ವೇಳೆ ಜಾವಡೇಕರ್ ಬದಲು ಜಾವೀದ್ ಎಂದ ಡಿಕೆ ಶಿವಕುಮಾರ್

ತುಮಕೂರು: ತುರುವೇಕೆರೆಯಲ್ಲಿ ನಡೆದ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಕಾರ್ಯಕ್ರದಮಲ್ಲಿ ಇಂಧನ ಡಿಕೆ ಶಿವಕುಮಾರ್ ಕೇಂದ್ರ ಮಾನವ ಸಂಪನ್ಮೂಲ ಸಚಿವ, ಕರ್ನಾಟಕ ರಾಜ್ಯ ಬಿಜೆಪಿ ಉಸ್ತುವಾರಿಯಾಗಿರುವ ಪ್ರಕಾಶ್ ಜಾವಡೇಕರ್ ಹೆಸರನ್ನು ತಪ್ಪಾಗಿ ಉಚ್ಚಾರಿಸಿ ಎಡವಟ್ಟು ಮಾಡಿಕೊಂಡಿದ್ದಾರೆ. ವೇದಿಕೆಯ ಮೇಲೆ ಭಾಷಣ ಮಾಡುವಾಗ ಸಚಿವರ ಹೆಸರನ್ನು ಪ್ರಸ್ತಾಪಿಸುವ ವೇಳೆ ಜಾವಿದ್, ಜಾವಿಡ್ ಅವಡೆಕರ್ ಎಂದು ಇಂಧನ ಸಚಿವರು...

ಪಬ್ಲಿಕ್ ಟಿವಿ ಚುನಾವಣಾ ಪೂರ್ವ ಸರ್ವೆ ಬಿಜೆಪಿಗೆ ಎಚ್ಚರಿಕೆ ಗಂಟೆ: ವಿ.ಸೋಮಣ್ಣ

2 weeks ago

ತುಮಕೂರು: ಪಬ್ಲಿಕ್ ಟಿವಿ ನಡೆಸಿರುವ ಚುನಾವಣಾ ಪೂರ್ವ ಸಮೀಕ್ಷೆ ನಮಗೆ ಎಚ್ಚರಿಕೆ ಗಂಟೆಯಾಗಿದೆ. ಆ ಎಚ್ಚರಿಕೆ ಗಂಟೆಯನ್ನು ಸ್ವೀಕಾರ ಮಾಡಿ, ಸರ್ವೆಯಲ್ಲಿ ನಮಗೆ ಎಲ್ಲಿ ತೊಂದರೆಗಳಿವೆ ಎಂಬುದು ಗೊತ್ತಾಗಿದ್ದು, ಅವುಗಳನ್ನು ಸರಿಪಡಿಸಿಕೊಳ್ಳುತ್ತೆವೆ ಎಂದು ಮಾಜಿ ಸಚಿವ ಬಿಜೆಪಿ ನಾಯಕ ವಿ.ಸೋಮಣ್ಣ ತಿಳಿಸಿದ್ದಾರೆ....

ಭತ್ತದ ಬಣವೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು- 3 ಬೃಹತ್ ಬಣವೆಗಳು ಸಂಪೂರ್ಣ ಭಸ್ಮ

3 weeks ago

ತುಮಕೂರು: ಕಿಡಿಗೇಡಿಗಳು ಭತ್ತದ ಬಣವೆಗೆ ಬೆಂಕಿ ಇಟ್ಟ ಪರಿಣಾಮ ಮೂರು ಬೃಹತ್ ಬಣವೆಗಳು ಸಂಪೂರ್ಣ ಸುಟ್ಟು ಭಸ್ಮವಾದ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಯಲಿಯೂರಿನಲ್ಲಿ ನಡೆದಿದೆ. ಗೋವಿಂದಯ್ಯ, ನಟರಾಜ ಹಾಗೂ ಚಂದ್ರಪ್ಪ ಎನ್ನುವವರಿಗೆ ಈ ಬಣವೆ ಸೇರಿದೆ. ಪ್ರತ್ಯೇಕ ಸ್ಥಳದಲ್ಲಿ ಕೃತ್ಯ...

ಹೊಸ ವರ್ಷಕ್ಕೆ ಗೊರವನಹಳ್ಳಿ ದೇವಸ್ಥಾನಕ್ಕೆ ಹೋಗುವಾಗ ಭೀಕರ ಅಪಘಾತ – ಒಂದೇ ಕುಟುಂಬದ ಐವರ ದುರ್ಮರಣ

3 weeks ago

ತುಮಕೂರು: ನಿಂತಿದ್ದ ಕ್ಯಾಂಟರ್ ಗೆ ಹಿಂದಿನಿಂದ ಕಾರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೂವರು ಸಾವನ್ನಪ್ಪಿದ್ದು, ಆಸ್ಪತ್ರೆಯಲ್ಲಿ ಮತ್ತಿಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಕುಣಿಗಲ್ ತಾಲೂಕಿನ ಗವಿ ಮಠದ ಬಳಿ ನಡೆದಿದೆ. ಸಿದ್ದೋಜಿರಾವ್(60) ಉಷಾಭಾಯಿ(35) ಕೀರ್ತನ(7) ಹಿತೇಶ್(3) ಹಾಗೂ 16 ವರ್ಷದ...

ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ ಬಿಜೆಪಿ ಶಾಸಕ ಬಿ.ಸುರೇಶ್ ಗೌಡ

3 weeks ago

ತುಮಕೂರು: ಕರ್ನಾಟಕದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ನಾಯಕರು ಪರಸ್ಪರ ಏಕ ವಚನದಲ್ಲಿ ವಾಗ್ದಾಳಿ ನಡೆಸುತ್ತಿದ್ದಾರೆ. ಆದ್ರೆ ಈ ಸಂದರ್ಭದಲ್ಲಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕರಾಗಿರುವ ಬಿ.ಸುರೇಶ್ ಗೌಡರು ಮಾತ್ರ ಸಿಎಂ ಸಿದ್ದರಾಮಯ್ಯರನ್ನು ಹಾಡಿ ಹೊಗಳಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಶಾಶಕರು...

ಜಗಳವಾಡಿ ಮನೆ ಬಿಟ್ಟು ಹೋಗ್ತಿದ್ದ ಹೆಂಡ್ತಿಗೆ ಚಿನ್ನದ ಒಡವೆ ಕೊಡು ಎಂದ ಪತಿ- ನಡುಬೀದಿಯಲ್ಲಿ ರಂಪಾಟ

3 weeks ago

ತುಮಕೂರು: ಒಡವೆ ವಿಚಾರವಾಗಿ ನಡು ಬೀಡಿಯಲ್ಲಿ ಗಂಡ-ಹೆಂಡತಿ ಜಗಳವಾಡಿರುವ ಘಟನೆ ಜಿಲ್ಲೆಯ ಸರಸ್ವತಿಪುರಂನಲ್ಲಿ ನಡೆದಿದೆ. ತುಮಕೂರು ನಗರದ ಸರಸ್ವತಿಪುರಂ ನಿವಾಸಿಗಳಾದ ವಿನೋದಾ, ರಾಜು ಬೀದಿಯಲ್ಲಿ ಜಗಳ ಮಾಡಿಕೊಂಡ ದಂಪತಿ. ವಿನೋದಾ ಪತಿಯೊಂದಿಗೆ ಜಗಳವಾಡಿಕೊಂಡು ಮನೆ ಬಿಟ್ಟು ಹೋಗುತ್ತಿದ್ದು, ಈ ಸಂದರ್ಭದಲ್ಲಿ ವಿನೋದಾ...

ಮುಂದಿನ ಬಾರಿ ಸಿದ್ದರಾಮಯ್ಯ ಮನೆಗೆ ಬಂದ್ರೆ ಚಿನ್ನದ ತಟ್ಟೆಯಲ್ಲಿ ಊಟ ಕೊಡ್ತೀನಿ- ಶಾಸಕ ರಾಜಣ್ಣ

3 weeks ago

ತುಮಕೂರು: ಸಿಎಂ ಸಿದ್ದರಾಮಯ್ಯ ಬೆಳ್ಳಿ ತಟ್ಟೆಯಲ್ಲಿ ಉಪಹಾರ ಸೇವಿಸಿದ ಘಟನೆ ಕುರಿತು ತುಮಕೂರು ಜಿಲ್ಲೆ ಮಧುಗಿರಿ ಶಾಸಕ ರಾಜಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮುಂದಿನ ಬಾರಿ ಸಿದ್ದರಾಮಯ್ಯ ಮನೆಗೆ ಬಂದರೆ ಬೆಳ್ಳಿ ತಟ್ಟೆಯಲ್ಲಿ ಊಟ ನೀಡುತ್ತೇನೆ ಎಂದು ಹೇಳಿದ್ದಾರೆ. ಗುಂಡುರಾವ್ ಅವರು ಸಿಎಂ...